ETV Bharat / state

'ನನ್ನ ಕೇಳಿ ರಾಘವೇಂದ್ರ ಬ್ಯಾಂಕ್​ನಲ್ಲಿ ಹೂಡಿಕೆ ಮಾಡಿದ್ರಾ' ಎಂದು ಕೇಳಿದ್ರಂತೆ ವಿತ್ತ ಸಚಿವೆ - finance minister nirmala sitaraman

ಗುರುರಾಘವೇಂದ್ರ ಕೋ ಅಪರೇಟಿವ್ ಬ್ಯಾಂಕ್​​ನಲ್ಲಿ ಹಣ ಕಳೆದುಕೊಂಡಿರುವ ಬಗ್ಗೆ ಅಳಲು ತೋಡಿಕೊಂಡಿದ್ದಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ನನ್ನ ಕೇಳಿ ಹೂಡಿಕೆ ಮಾಡಿದ್ರಾ? ಎಂದು ಉತ್ತರ ನೀಡಿದರು ಎಂದು​ ಠೇವಣಿದಾರರು ಆರೋಪಿಸಿದ್ದಾರೆ.

nirmala
ಠೇವಣಿದಾರರ ಸುದ್ದಿಗೋಷ್ಟಿ
author img

By

Published : Jul 12, 2021, 2:44 PM IST

ಬೆಂಗಳೂರು: ಇತ್ತೀಚೆಗೆ ನಗರಕ್ಕೆ ಬಂದಾಗ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಠೇವಣಿದಾರರು ವಿತ್ತ ಸಚಿವೆ ಬಳಿ, ತಾವು ಹೂಡಿಕೆ ಮಾಡಿ ಹಣ ಕಳೆದುಕೊಂಡಿರುವ ಬಗ್ಗೆ ಹೇಳಿಕೊಂಡಿದ್ದರು. ಆಗ ಅವರು 'ನನ್ನ ಕೇಳಿ ರಾಘವೇಂದ್ರ ಬ್ಯಾಂಕ್​ನಲ್ಲಿ ಹಣ ಹೂಡಿಕೆ ಮಾಡಿದ್ರ' ಎಂದು ಪ್ರಶ್ನಿಸಿರುವುದಾಗಿ ಠೇವಣಿದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಠೇವಣಿದಾರರ ಸುದ್ದಿಗೋಷ್ಟಿ

ಇಂದು ಪ್ರೆಸ್ ಕ್ಲಬ್​​ನಲ್ಲಿ ಸುದ್ದಿಗೋಷ್ಠಿ ನಡೆಸಿದ ಬ್ಯಾಂಕ್ ಠೇವಣಿದಾರರು, ಈಗಾಗಲೇ ಪ್ರಕರಣ ದಾಖಲಾಗಿ 2 ವರ್ಷ ಕಳೆದಿದೆ. ಆದ್ರೂ ಯಾವುದೇ ರೀತಿಯ ಕ್ರಮ ತೆಗೆದುಕೊಂಡಿಲ್ಲ. ಸಿಐಡಿ ತನಿಖೆ ನಡೆಯತ್ತಿದೆ. ಆದ್ರೆ ಪ್ರಯೋಜನವಿಲ್ಲ. ಪ್ರಕರಣವನ್ನು ಸಿಬಿಐಗೆ ವಹಿಸಿದ್ರೆ ಒಳಿತು ಎಂದು ಆಗ್ರಹಿಸಿದರು.

ಆರು ತಿಂಗಳು ಯಾವುದೇ ರೀತಿಯ ವ್ಯವಹಾರ ನಡೆಸಬಾರದು ಎಂದು ಆರ್​ಬಿಐ ಸುತ್ತೋಲೆ ಹೊರಡಿಸಿದೆ. ಹೀಗೆ 6 ತಿಂಗಳು ಮುಂದುವರಿದುಕೊಂಡು ಹೋದ್ರೆ ಜನರ ಗತಿಯೇನು? 70 ಜನ ಹಣ ಕಳೆದುಕೊಂಡ ಹೂಡಿಕೆದಾರರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಹೂಡಿಕೆದಾರರ ತೇಜೋವಧೆಯಾಗುತ್ತಿದೆ ಎಂದು ಹರೀಶ್ ಹೇಳಿದರು.

ಕೇಂದ್ರ ಹಣಕಾಸು ಸಚಿವರ ಬಳಿ ಕೇಳಿದ್ರೆ ಆರ್​ಬಿಐನಿಂದ ಮಾಹಿತಿ ಬಂದ ಮೇಲೆ ಮಾತನಾಡುತ್ತೇನೆಂದು ಹೇಳ್ತಾರೆ. ಇಂತಹ ವಂಚಕ ಬ್ಯಾಂಕ್​ಗೆ ಆರ್​ಬಿಐ 'A' ಗ್ರೇಡ್ ಕೊಟ್ಟಿದೆ. ಇದು ಹೇಗೆ ಸಾಧ್ಯ? ವಂಚನೆ ನಡೆಸಿದ ಬ್ಯಾಂಕ್​ಗೆ ಈಗ ಬೇರೆ ಬೇರೆ ಕಡೆ ಬ್ರಾಂಚ್​​ಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಈ ಪ್ರಕರಣದಲ್ಲಿ ರಾಜಕೀಯ ದುರುದ್ದೇಶ ಇರೋದು ಪಕ್ಕಾ ಆಗಿದೆ.

ಒಟ್ಟು 25 ಸಾವಿರ ಮಂದಿ ಹಣ ಕಳೆದುಕೊಂಡಿದ್ದು, 2,130 ಕೋಟಿಗೂ ಅಧಿಕ ಹಣ ಬರಬೇಕೆಂದು ಠೇವಣಿದಾರರು ಹೇಳುತ್ತಿದ್ದಾರೆ. ಎಮ್‌ಎಲ್​ಎ, ಎಂಪಿಗಳು ಸಹಕಾರ ಕೊಡ್ತಿಲ್ಲ. ಸಂಸದರು ಯಾರಿಗೂ ಮಾಹಿತಿ ಕೊಟ್ಟಿಲ್ಲ. ಕೇವಲ ಐದಾರು ಮಂದಿಯನ್ನು ಕರೆದುಕೊಂಡು ಕೇಂದ್ರ ಸಚಿವೆ ನಿರ್ಮಲ ಸೀತಾರಾಮ್ ಬಳಿ ಕರೆದೊಯ್ದಿದ್ರು. ಕಡಿಮೆ ಹಣ ಹೂಡಿಕೆ ದಾರರಿಗೆ ಹಣ ಸಿಗ್ತಿದೆ, ಹೆಚ್ಚು ಹಣ ಹೂಡಿಕೆ ಮಾಡಿದವ್ರಿಗೆ ಸಿಗ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ರು.

ಇದ್ರಲ್ಲಿ ತಾರತಮ್ಯ ನಡೀತಿದೆ ಹಾಗೂ ಬಿಜೆಪಿ ಮಾಜಿ ಎಂಎಲ್​​ಸಿ ಹಾಗೂ ವಕ್ತಾರ ಅಶ್ವತ್ಥ ನಾರಾಯಣ ಗೌಡ ಕೂಡ ₹12 ಕೋಟಿ ಸುಸ್ತಿದಾರರಾಗಿದ್ದಾರೆ. ಇವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೆಪಿಸಿಸಿ ವೈದ್ಯಕೀಯ ಘಟಕದ ಪ್ರಧಾನ ಕಾರ್ಯದರ್ಶಿ ಡಾ. ಶಂಕರ್ ಗುಹಾ ದ್ವಾರಕಾನಾಥ್ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.