ಬೆಂಗಳೂರು: ಕೋವಿಡ್ ಹಾವಳಿ ದಿನೇ ದಿನೆ ಹೆಚ್ಚಾಗ್ತಾನೆ ಇದೆ. ಕೊರೊನಾದ ಈ ರೌದ್ರಾವತಾವರ ನಿಯಂತ್ರಿಸಲು ಸರ್ಕಾರ ಇಂದಿನಿಂದ ನಗರದಲ್ಲಿ ನೈಟ್ ಕರ್ಫ್ಯೂಗೆ ಆದೇಶ ಹೊರಡಿಸಿದೆ.
ನೈಟ್ ಕರ್ಫ್ಯೂಗೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಹೀಗಾಗಿ ಪೊಲೀಸ್ ಇಲಾಖೆ ನಗರದ ಪ್ರಮುಖ ರಸ್ತೆಗಳು, ಮೇಲ್ಸೇತುವೆಗಳನ್ನ ಲಾಕ್ ಮಾಡಲು ಮುಂದಾಗಿದೆ. ರಾತ್ರಿ 9:30 ಕ್ಕೆ ಎಲ್ಲಾ ಪ್ರಮುಖ ರಸ್ತೆ ಮೇಲ್ಸೇತುವೆಗಳನ್ನು ಬಂದ್ ಮಾಡಲಾಗುತ್ತೆ. ನಾಕಾಬಂದಿ ಹಾಕಿರೋ ಸ್ಥಳದಲ್ಲಿ ಪೊಲೀಸ್ ಭದ್ರತೆಯನ್ನ ಕೂಡ ಹೆಚ್ಚಿಸಲಾಗಿರುತ್ತೆ. ರಾತ್ರಿ 10ರ ನಂತರ ಅನಾವಶ್ಯಕವಾಗಿ ಓಡಾಡುತ್ತಿದ್ದಾರೆ ಅಂತಾ ಖಾತ್ರಿ ಅದರೆ ಬೈಕ್ ಸೀಜ್ ಮಾಡಿ ಕೇಸ್ ದಾಖಲಿಸಲಾಗುತ್ತದೆ. ಬೆಳಗ್ಗೆ 5 ಗಂಟೆಯವರೆಗೆ ಇದು ಜಾರಿಯಲ್ಲಿರಲಿದೆ.
ಬೆಂಗಳೂರಿನ ಯಾವ ವಿಭಾಗದಲ್ಲಿ ಎಲ್ಲೆಲ್ಲಿ ಪ್ರಮುಖ ನಾಕಾಬಂದಿ :
ಆಗ್ನೇಯ ವಿಭಾಗ
* ವೀರಸಂದ್ರ ಚೆಕ್ ಪೋಸ್ಟ್
* ಬೊಮ್ಮನಹಳ್ಳಿ ಚೆಕ್ ಪೋಸ್ಟ್
* ಸಿಲ್ಕ್ ಬೋರ್ಡ್
* ಮಡಿವಾಳ
* ಸೈಂಟ್ ಜಾನ್ಸ್
* ಆಡುಗೋಡಿ ಜಂಕ್ಷನ್
* ಕೋರಮಂಗಲ ಎನ್ ಜಿವಿ ಕಾಂಪ್ಲೆಕ್ಸ್
ಪಶ್ಚಿಮ ವಿಭಾಗ
*ಮಾರುಕಟ್ಟೆ ಮೇಲ್ಸೇತುವೆ
* ಮಾರುಕಟ್ಟೆ ಸರ್ಕಲ್
* ಮೈಸೂರು ರಸ್ತೆ
* ಕೆಂಗೇರಿ ಮುಖ್ಯರಸ್ತೆ
* ಕೆ.ಪಿ ಅಗ್ರಹಾರ
* ಮಾಗಡಿ ರೋಡ್
ಈಶಾನ್ಯ ವಿಭಾಗ
* ಏರ್ಪೋರ್ಟ್ ರೋಡ್
* ಹೆಬ್ಬಾಳ ಮೇಲ್ಸೇತುವೆ
* ಸಂಪೀಗೆ ಹಳ್ಳಿ
* ವಿದ್ಯಾರಣ್ಯಪುರ ಸರ್ಕಲ್
* ಬಿಇಎಲ್ ಸರ್ಕಲ್
*ಯಲಹಂಕ ಮುಖ್ಯರಸ್ತೆ
ಪೂರ್ವ ವಿಭಾಗ
* ಟ್ರಿನಿಟಿ ಸರ್ಕಲ್
*ಬಿಆರ್ವಿ ಜಂಕ್ಷನ್
* ನಾಗವಾರ ಜಂಕ್ಷನ್
* ಬಾಣಸವಾಡಿ
* ಕಮ್ಮನಹಳ್ಳಿ ರೋಡ್
* ಮಣಿಪಾಲ್ ಹಾಸ್ಪಿಟಲ್ ಜಂಕ್ಷನ್
* ಒಲ್ಡ್ ಏರ್ಪೋರ್ಟ್ ರೋಡ್
ಕೇಂದ್ರ ವಿಭಾಗ
* ಕೆ ಆರ್ ಸರ್ಕಲ್
* ಟೌನ್ ಹಾಲ್
* ಚಿನ್ನಸ್ವಾಮಿ ಸ್ಟೇಡಿಯಂ
* ಕಾರ್ಪೋರೇಷನ್ ಸರ್ಕಲ್
ಉತ್ತರ ವಿಭಾಗ
*ಯಶವಂತಪುರ ಸರ್ಕಲ್
* ತುಮಕೂರು ರಸ್ತೆ
* ಗಂಗಮ್ಮಗುಡಿ ಸರ್ಕಲ್
* ಗೋರಗುಂಟೆ ಪಾಳ್ಯ
* ಪೀಣ್ಯ