ಬೆಂಗಳೂರು : ಕೊರೊನಾ ಕರ್ಪ್ಯೂ ಹಿನ್ನೆಲೆ ರೂಲ್ಸ್ ಬ್ರೇಕ್ ಮಾಡಿದ ಸಾರ್ವಜನಿಕರ ವಾಹನ ಸೀಜ್ ಮಾಡಿರುವ ಬಗ್ಗೆ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. ಈವರೆಗೂ ಸುಮಾರು 200ಕ್ಕೂ ಹೆಚ್ಚು ವಾಹನಗಳು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದೆ.
ಪಶ್ಚಿಮ ವಿಭಾಗದಲ್ಲಿ ಒಂದೇ ರಾತ್ರಿ 9 ಬೈಕ್ ಹಾಗೂ ಕಾರೊಂದನ್ನು ಜಪ್ತಿ ಮಾಡಲಾಗಿದ್ದು, ಒಟ್ಟು 10 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಆಗ್ನೇಯ ವಿಭಾಗದ 15 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೂಡ ವಾಹನಗಳನ್ನು ಜಪ್ತಿ ಮಾಡಲಾಗಿದೆ.
7 ನಾಲ್ಕು ಚಕ್ರದ ವಾಹನಗಳು, 2 ತ್ರಿಚಕ್ರ ವಾಹನ ಒಳಗೊಂಡು ಸುಮಾರು 70 ದ್ವಿಚಕ್ರ ವಾಹನಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದಿರುವ ವಾಹನಗಳ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ.
ಅನಗತ್ಯವಾಗಿ ವಾಹನ ಹೊರ ತಂದ ಕಾರಣ ಜಪ್ತಿ ಮಾಡಿದ್ದಾರೆ. ವಾಹನಗಳನ್ನ ಸೂಕ್ತ ದಾಖಲೆಯೊಂದಿಗೆ, ದಂಡ ಕಟ್ಟಿ ನ್ಯಾಯಾಲಯದ ಮೂಲಕ ಬಿಡಿಸಿಕೊಳ್ಳುವಂತೆ ಸೂಚನೆ ಸಹ ನೀಡಲಾಗಿದೆ.