ಬೆಂಗಳೂರು: ಡಿ ಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಿದ ಆರೋಪದ ಮೇಲೆ ಬಂಧಿತರಾಗಿರುವ ಮಾಜಿ ಮೇಯರ್ ಸಂಪತ್ ರಾಜ್ಗೆ ಮತ್ತೆ ಎನ್‌ಐಎ ಶಾಕ್ ನೀಡಿದೆ.
ನಿನ್ನೆ ತಾನೆ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಜಯದೇವ್ ಆಸ್ಪತ್ರೆಗೆ ಸಂಪತ್ ರಾಜ್ ದಾಖಲಾಗಿದ್ದರು. ಆಸ್ಪತ್ರೆಯವರು ಆರೋಗ್ಯ ತಪಾಸಣೆ ಮಾಡಿ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿಕೊಟ್ಟಿದ್ದಾರೆ. ಸದ್ಯ ಕ್ವಾರಂಟೈನ್ನಲ್ಲಿರುವ ಸಂಪತ್ ರಾಜ್ ವಿಚಾರಣೆಗೆ ಇಂದು ಮೂವರು ಅಧಿಕಾರಿಗಳ ಎನ್ಐಎ ತಂಡ ಆಗಮಿಸಿದೆ.
ಜೈಲಿನಲ್ಲಿಯೇ ವಿಚಾರಣೆ ನಡೆಸಲು ನ್ಯಾಯಾಲಯ ಅವಕಾಶ ಕಲ್ಪಿಸಿದೆ. ಸಿಸಿಬಿ ಪೊಲೀಸರು ಮೊದಲು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ, ಎನ್ಐಎ ಸಹ ವಿಚಾರಣೆಗೆ ನ್ಯಾಯಾಲಯದಲ್ಲಿ ಅನುಮತಿ ಕೇಳಿತ್ತು. ಎನ್ಐಎ ಮನವಿಯನ್ನು ಕೋರ್ಟ್ ಪುರಸ್ಕರಿಸಿದ ಕಾರಣ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಎನ್ಐಎ ಅಧಿಕಾರಿಗಳು ಸಂಪತ್ ರಾಜ್ ವಿಚಾರಣೆ ನಡೆಸಲಿದ್ದಾರೆ.