ETV Bharat / state

ವಿಧ್ವಂಸಕ ಕೃತ್ಯಕ್ಕೆ ಸಂಚು ಆರೋಪ: ಇಬ್ಬರು ಶಂಕಿತ ಉಗ್ರರ ವಿರುದ್ಧ ಚಾರ್ಜ್​​​ಶೀಟ್​​​ ಸಲ್ಲಿಸಿದ ಎನ್ಐಎ - NIA filed charge sheet against suspected militants

ಬೆಂಗಳೂರಿನ ನಿವಾಸಿ ಡಾ. ಸಬೀಲ್ ಅಹಮದ್ ಯಾನೆ ಮೋಟು ಡಾಕ್ಟರ್, ಹೈದರಾಬಾದ್​ನ ಅಸಾದುಲ್ಲಾಖಾನ್ ಯಾನೆ ಅಬೂ ಸೂಫಿಯಾನ್ ವಿರುದ್ಧ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಶೀಟ್ ಸಲ್ಲಿಸಲಾಗಿದೆ.

NIA filed charge sheet against two suspected militants
ಶಂಕಿತ ಉಗ್ರರ ವಿರುದ್ಧ ಚಾರ್ಜ್ ಶೀಟ್​ ಸಲ್ಲಿಸಿದ ಎನ್ಐಎ
author img

By

Published : Feb 22, 2021, 5:39 PM IST

Updated : Feb 22, 2021, 9:25 PM IST

ಬೆಂಗಳೂರು: ರಾಜಧಾನಿ ಸೇರಿದಂತೆ ದೇಶದೆಲ್ಲೆಡೆ ವಿಧ್ವಂಸಕ‌ ಕೃತ್ಯ ಎಸಗಲು ಸಂಚು ರೂಪಿಸಿದ್ದ ಆರೋಪದಡಿ ಲಷ್ಕರ್ -ಎ- ತೊಯ್ಬಾ ಉಗ್ರ ಸಂಘಟನೆ (ಎಲ್ಐಟಿ) ಸದಸ್ಯರಾಗಿದ್ದ ಇಬ್ಬರು ಶಂಕಿತ ಉಗ್ರರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ದೋಷಾರೋಪ ಪಟ್ಟಿ ಸಲ್ಲಿಸಿದೆ.

ಬೆಂಗಳೂರಿನ ನಿವಾಸಿ ಡಾ. ಸಬೀಲ್ ಅಹಮದ್ ಯಾನೆ ಮೋಟು ಡಾಕ್ಟರ್, ಹೈದರಾಬಾದ್​ನ ಅಸಾದುಲ್ಲಾಖಾನ್ ಯಾನೆ ಅಬೂ ಸುಫಿಯಾನ್ ವಿರುದ್ಧ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಶೀಟ್ ಸಲ್ಲಿಸಲಾಗಿದೆ.

ದೇಶದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಿದ್ಧರಾಗಿದ್ದ ಲಷ್ಕರ್ ಉಗ್ರರು ಬೆಂಗಳೂರು, ಹುಬ್ಬಳ್ಳಿ, ನಾಂದೇಡ್, ತೆಲಂಗಾಣ, ಹೈದರಾಬಾದ್ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದರು.‌ ಧಾರ್ಮಿಕ ಮತ್ತು ಸಾಮಾಜಿಕ ಸಾಮರಸ್ಯ ಹಾಳು ಮಾಡಲು ಪ್ಲಾನ್ ಮಾಡಿಕೊಂಡಿದ್ದರು. ‌

ಓದಿ : ನಕಲಿ‌ ಕರೆನ್ಸಿ ಜಾಲ ನಡೆಸುತ್ತಿದ್ದ ಇಬ್ಬರು ಆರೋಪಿಗಳಿಗೆ 6 ವರ್ಷ ಸಜೆ

ಈ ಹಿಂದೆ ಎನ್ಐಎ 17 ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿತ್ತು. ಇದೇ ಪ್ರಕರಣದಲ್ಲಿ 2016 ರಲ್ಲಿ 13 ಆರೋಪಿಗಳಿಗೆ ನ್ಯಾಯಾಲಯವು ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಉಳಿದ ನಾಲ್ವರು ಆರೋಪಿಗಳ ವಿಚಾರಣೆ ನಡೆಯುತ್ತಿದೆ.

ಬಂಧಿತ ಡಾ. ಸಬೀಲ್ ಅಹಮದ್ ಮತ್ತು ಅಸಾದುಲ್ಲಾಖಾನ್ ಎಲ್ಇಟಿ ಸಂಘಟನೆಯ ಸದಸ್ಯರಾಗಿದ್ದರು. ವಿವಿಧ ಅಪರಾಧಗಳಲ್ಲಿ ಆರೋಪಿಗಳು ಭಾಗಿಯಾಗಿದ್ದರು. ಇತರ ಆರೋಪಿಗಳ ಜೊತೆಗೂಡಿ ಹಲವು ಸಭೆ ಮತ್ತು ಉಗ್ರ ಚಟುವಟಿಕೆಗಳಲ್ಲಿ‌ ಪಾಲ್ಗೊಂಡಿದ್ದರು. 2012 ಆ.29ರಂದು ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣದ ದಾಖಲಾಗಿತ್ತು.

Last Updated : Feb 22, 2021, 9:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.