ETV Bharat / state

ಸಿಹಾಬುದ್ದೀನ್ ವಿರುದ್ಧ ಹೆಚ್ಚುವರಿ ಚಾರ್ಜ್​​​​ಶೀಟ್ ಸಲ್ಲಿಸಿದ ಎನ್ಐಎ

author img

By

Published : Sep 3, 2021, 8:54 PM IST

ಅಲ್ ಹಿಂದ್ ಸಂಘಟನೆ ಶಂಕಿತನ ಆರೋಪಿ ಸಿಹಾಬುದ್ದೀನ್ ವಿರುದ್ಧ ಎನ್‌ಐಎ ಅಧಿಕಾರಿಗಳು ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸಿದ್ದಾರೆ..

ಎನ್ಐಎ
NIA

ಬೆಂಗಳೂರು : 2020ರಂದು ತಮಿಳುನಾಡು, ಕರ್ನಾಟಕ ಮತ್ತು ದೆಹಲಿಯಲ್ಲಿ ಎನ್‌ಐಎ ಅಧಿಕಾರಿಗಳ ತಂಡ ಜಂಟಿ ಕಾರ್ಯಾಚರಣೆ ನಡೆಸಿ 16 ಮಂದಿ ಶಂಕಿತರನ್ನು ಬಂಧಿಸಿ ಈಗಾಗಲೇ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು. ಇದೀಗ ಸಿಹಾಬುದ್ದೀನ್ ವಿರುದ್ಧ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸಲಾಗಿದೆ.

ಸಿಹಾಬುದ್ದೀನ್ ಅಲಿಯಾಸ್ ಸಿರಾಜುದ್ದೀನ್ ಅಲಿಯಾಸ್ ರಾಜೇಶ್ ಎಂಬಾತನ ವಿರುದ್ಧ ಎನ್‌ಐಎ ವಿಶೇಷ ಕೋರ್ಟ್‌ಗೆ ಅಧಿಕಾರಿಗಳು ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸಿದ್ದಾರೆ. ಈತ ದಕ್ಷಿಣ ಭಾರತದ ಐಸಿಸ್ ಸಂಘಟನೆ ಮುಖ್ಯಸ್ಥ ಖಾಜಾ ಮೊಯಿದ್ದೀನ್, ಐಸಿಸ್ ಸಂಘಟನೆ ಮತ್ತು ಹಿಂದೂ ಮುಖಂಡರ ಹತ್ಯೆ ಸಲುವಾಗಿ ಅಲ್‌ ಹಿಂದ್ ಸಂಘಟನೆ ಸ್ಥಾಪಿಸಿದ್ದನು.

2019ರಲ್ಲಿ ತಮಿಳುನಾಡಿನ ಹಿಂದೂಪರ ಸಂಘಟನೆ ಮುಖಂಡ ಸುರೇಶ್ ಮತ್ತು ಎಎಸ್‌ಐ ವಿಲ್ಸನ್ ಹತ್ಯೆ ಮಾಡಿದ್ದರು. ಆ ನಂತರ ಗುರಪ್ಪನಪಾಳ್ಯದಲ್ಲಿ ಖಾಜಾ ಆಶ್ರಯ ಪಡೆದು ನಗರದ ಮೆಹಬೂಬ್ ಪಾಷ, ಕೋಲಾರದ ಸಲೀಂ, ಮಂಡ್ಯದ ಇಮ್ರಾನ್ ಖಾನ್ ತಮಿಳುನಾಡಿನ ತೌಫಿಕ್, ಸೈಯದ್ ಅಲಿ ನವಾಜ್, ಜಾಫರ್ ಹಾಗೂ ಅಬ್ದುಲ್ ಷಾಹೀಂ ಸೇರಿದಂತೆ ಹಲವರನ್ನು ಒಗ್ಗೂಡಿಸಿದ್ದನು.

ಖಾಜಾ ಮೊಯಿದ್ದೀನ್ ಸೂಚನೆಯಂತೆ ಮುಂಬೈನಲ್ಲಿ ಸಿಹಾಬುದ್ದೀನ್ ಶಸ್ತಾ ಸ್ತ್ರ ಮತ್ತು ಮದ್ದುಗುಂಡು ಖರೀದಿಸಿ ಸಹಚರರಿಗೆ ತಲುಪಿಸಿದ್ದನು. ಇದನ್ನು ಬಳಸಿ ತಮಿಳುನಾಡಿನಲ್ಲಿ ಎಎಸ್‌ಐ ವಿಲ್ಸನ್ ಹತ್ಯೆ ಮಾಡಿರುವುದು ಸಾಬೀತಾಗಿದೆ. ಬೆಂಗಳೂರು ಹೊರವಲಯ, ಚಾಮರಾಜನಗರದ ಗುಂಡ್ಲುಪೇಟೆ ಅರಣ್ಯಪ್ರದೇಶ, ಶಿವನಸಮುದ್ರದ ಬಳಿ ಶಂಕಿತರು ಶಸ್ತ್ರ ಅಭ್ಯಾಸ ನಡೆಸಿದ್ದ ವಿಚಾರ ಬೆಳಕಿಗೆ ಬಂದಿದೆ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

ಓ‌ದಿ: ಸೆಪ್ಟೆಂಬರ್ 20ಕ್ಕೆ ಸಿಇಟಿ ಫಲಿತಾಂಶ ಪ್ರಕಟ: ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.