ಬೆಂಗಳೂರು: ನಗರದ ಪುಟ್ಟೇನಹಳ್ಳಿಯ ಮನೆಯೊಂದರಲ್ಲಿ ನವವಿವಾಹಿತೆಯೊಬ್ಬರ ಮೃತದೇಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಶನಿವಾರ ಪತ್ತೆಯಾಗಿದೆ. ಈ ಬಗ್ಗೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಹಾರಿಕಾ ಸಾವನ್ನಪ್ಪಿದ ಮಹಿಳೆ. ಇವರ ತಂದೆ ನೀಡಿದ ದೂರಿನ ಮೇರೆಗೆ ಪತಿ ಕಾರ್ತಿಕ್ ಹಾಗೂ ಮನೆಯವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ನಿಹಾರಿಕಾ ಹಾಗೂ ಕಾರ್ತಿಕ್ ಐದು ವರ್ಷಗಳಿಂದ ಪ್ರೀತಿಸಿ ಕಳೆದ ಜೂನ್ನಲ್ಲಿ ಮದುವೆಯಾಗಿದ್ದರು. ಕಾರ್ತಿಕ್ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಪತ್ನಿ ಗೃಹಿಣಿಯಾಗಿದ್ದಳು. ಆರಂಭದಲ್ಲಿ ಅನ್ಯೋನ್ಯವಾಗಿದ್ದ ದಂಪತಿಯ ನಡುವೆ ಕಾಲಕ್ರಮೇಣ ಬಿರುಕು ಮೂಡಿತ್ತು ಎನ್ನಲಾಗುತ್ತಿದೆ.
![newly-married-woman-commits-suicide-in-bengaluru](https://etvbharatimages.akamaized.net/etvbharat/prod-images/kn-bng-01-suside-puttenahalli-crime-7202806_23102022115145_2310f_1666506105_981.jpg)
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ. ಕೆಲದಿನಗಳ ಹಿಂದೆ ಗಂಡನೊಂದಿಗೆ ಜಗಳವಾಗಿ ನಿಹಾರಿಕಾ ತವರು ಮನೆಗೆ ಸೇರಿದ್ದಳು. ಹಿರಿಯರ ಸಮ್ಮುಖದಲ್ಲಿ ಬುದ್ದಿ ಹೇಳಿ ಗಂಡನ ಮನೆಗೆ ಕಳುಹಿಸಲಾಗಿತ್ತು. ಇತ್ತೀಚೆಗೆ ಶಾಲೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅನುಮತಿ ವಿಚಾರವಾಗಿ ಮತ್ತೆ ಜಗಳವಾಗಿದೆ. ಇದರಿಂದ ಮನನೊಂದು ಶನಿವಾರ ನಿಹಾರಿಕಾ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೋಷಕರು ತಿಳಿಸಿದರು.
ಇದನ್ನೂ ಓದಿ: ಪ್ರೀತಿ ನಿರಾಕರಿಸಿದ ಯುವತಿಯ ಕತ್ತು ಸೀಳಿ ಕೊಂದ ಪಾಗಲ್ಪ್ರೇಮಿ!