ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮೃತನ ಪತ್ನಿ ಸುಮಾ ವಿರುದ್ಧ ರೇಖಾ ಬ್ಯಾಡರಹಳ್ಳಿ ಪೊಲೀಸರಿಗೆ ದೂರು ನೀಡಿದ ಬೆನ್ನಲ್ಲೇ ಮತ್ತೊಂದು ಆಡಿಯೋ ಹೊರಬಂದು ಸ್ಫೋಟಕ ವಿಚಾರ ಬಯಲಿಗೆ ಬಂದಿದೆ.
ಅನಂತರಾಜು ಅವರಿಂದ ಗೆಳತಿ ರೇಖಾ ಗರ್ಭಿಣಿಯಾಗಿದ್ದಳು ಎಂಬುವುದು ಈ ಆಡಿಯೋದಿಂದ ಬೆಳಕಿಗೆ ಬಂದಿದೆ. ಅನಂತರಾಜು ಮಾತಿಗೆ ಬೆಲೆ ಕೊಟ್ಟು ಗರ್ಭಪಾತ ಮಾಡಿಸಿಕೊಂಡಿದ್ದನ್ನು ಅನಂತರಾಜು ಪತ್ನಿ ಸುಮಾ ಬಳಿ ಸ್ವತಃ ರೇಖಾ ಹೇಳಿಕೊಂಡಿದ್ದಾಳೆ.
ನಾನು ಮಗುವನ್ನು ಇಟ್ಟುಕೊಳ್ಳುತ್ತೇನೆ ಅಂತಾ ಹೇಳಿದ್ದೆ. ಆದರೆ, ಮುಂದೆ ಸಮಸ್ಯೆ ಆಗಲಿದೆ ಎಂದು ಅನಂತರಾಜು ಹೇಳಿದ್ದರಿಂದ ಅವರ ಮಾತಿಗೆ ಬೆಲೆ ಕೊಟ್ಟು ಎರಡು ಬಾರಿ ಕೂಡ ಗರ್ಭಪಾತ ಮಾಡಿಸಿಕೊಂಡಿದ್ದೆ ಎಂದು ರೇಖಾ ಆಡಿಯೋ ಕರೆಯಲ್ಲಿ ಹೇಳಿಕೊಂಡಿದ್ದಾಳೆ. ಹನಿಟ್ಯ್ರಾಪ್ ಮಾಡುವ ಉದ್ದೇಶವಿದ್ದರೆ ಗರ್ಭಪಾತ ಮಾಡಿಸುತ್ತಿರಲಿಲ್ಲ ಎಂಬುವುದೂ ರೇಖಾ ವಾದವಾಗಿದೆ.
ಅನಂತರಾಜು ಪತ್ನಿ ಸುಮಾ ಕಡೆಯಿಂದ ಜೀವ ಬೆದರಿಕೆ ಇರುವುದಾಗಿ ಆರೋಪಿಸಿ ಬುಧವಾರ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ರೇಖಾ ದೂರು ದಾಖಲಿಸಿದ್ದರು. ಬಳಿಕ ಠಾಣೆ ಮುಂಭಾಗವೇ ಆತ್ಮಹತ್ಯೆಗೂ ಯತ್ನಿಸಿದ್ದರು. ಇದರ ಬೆನ್ನಲ್ಲೇ ಅನಂತರಾಜು ಅವರಿಂದ ಗೆಳತಿ ರೇಖಾ ಗರ್ಭಿಣಿಯಾಗಿದ್ದಳು ಎಂಬ ವಿಷಯ ಬಯಲಾಗಿದೆ.
ಇದನ್ನೂ ಓದಿ: ಬಿಜೆಪಿ ಮುಖಂಡ ಅನಂತರಾಜು ಸಾವು ಪ್ರಕರಣ: ಠಾಣೆ ಮುಂಭಾಗ ಆತ್ಮಹತ್ಯೆಗೆ ಯತ್ನಿಸಿದ ಪ್ರೇಯಸಿ