ಬೆಂಗಳೂರು: ಶಿವಾಜಿನಗರದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಂಬಾಕು ಪದಾರ್ಥಗಳನ್ನು ಕೇವಲ ಪಾರ್ಸೆಲ್ ರೂಪದಲ್ಲಿ ಮಾತ್ರ ನೀಡಬೇಕು ಎಂದು ಬಿಬಿಎಂಪಿ ತುರ್ತು ಆದೇಶ ಹೊರಡಿಸಿದೆ.
ಶಿವಾಜಿನಗರದ ಬಡಾವಣೆಯಲ್ಲಿರುವ ಎಲ್ಲಾ ಅಂಗಡಿಗಳು ಹಾಗೂ ವಾಣಿಜ್ಯ ಮಳಿಗೆಗಳಲ್ಲಿ ತಂಬಾಕು ಪದಾರ್ಥಗಳನ್ನು ಪ್ಯಾಕಿಂಗ್ ರೂಪದಲ್ಲಿ ಮಾತ್ರ ನೀಡಬೇಕು ಇಲ್ಲವಾದಲ್ಲಿ ಅಂಗಡಿಯ ಪರವಾನಗಿ ರದ್ದು ಮಾಡುವುದಾಗಿ ಈ ಆದೇಶದಲ್ಲಿ ಎಚ್ಚರಿಕೆ ನೀಡಿದೆ. ಅಲ್ಲದೆ ಈ ಆದೇಶ ಪಾಲನೆಯ ಮೇಲ್ವಿಚಾರಣೆಗೆ ಪೂರ್ವಭಾಗದ ಆರೋಗ್ಯ ಅಧಿಕಾರಿಗಳಿಗೆ ಜವಾಬ್ದಾರಿಯನ್ನು ವಹಿಸಲಾಗಿದೆ.