ETV Bharat / state

ಕಾಣದ ವೈರಸ್ ಜೊತೆಗೆ‌ ಗುದ್ದಾಟ: ನಡುವೆಯೇ ಕಾಡಲಿದೆ ಇತರೆ ಸಾಂಕ್ರಾಮಿಕ ಕಾಟ - M.S Ramaiah Hospital

ಕರುನಾಡಿನಲ್ಲಿ ಸಾಂಕ್ರಾಮಿಕ ರೋಗಗಳ ಭೀತಿಯು ಶುರುವಾಗಿದೆ. ಎಚ್ಚರಿಕೆ ದೃಷ್ಟಿಯಿಂದ ಆರೋಗ್ಯ ತಜ್ಞರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

ಎಂ. ಎಸ್ ರಾಮಯ್ಯ ಆಸ್ಪತ್ರೆಯ ಶ್ವಾಸಕೋಶ ತಜ್ಞ ಪ್ರಸನ್ನ ಕುಮಾರ್

author img

By

Published : Jun 30, 2020, 6:44 PM IST

ಬೆಂಗಳೂರು: ವಿಶ್ವವನ್ನೇ ಕೊರಗುವಂತೆ ಮಾಡಿರುವ ಕೊರೊನಾ ವೈರಸ್, ಇನ್ನು ತನ್ನ ಪ್ರಭಾವ ಕಡಿಮೆ ಮಾಡಿಲ್ಲ. ಕಾಣದ ವೈರಸ್ ಜೊತೆಗೆ ವೈದ್ಯರು- ವೈದ್ಯಕೀಯ ಸಿಬ್ಬಂದಿಗಳು ನಿರಂತರ ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟದಲ್ಲಿ ಕೊರೊನಾ ಸೋಂಕು ತಗುಲಿಸಿಕೊಂಡಿದ್ದಾರೆ.‌ ಕೊರೊನಾ ನಡುವೆಯೇ ಇದೀಗ ಇತರೆ ಸಾಂಕ್ರಾಮಿಕ ರೋಗಗಳ ಕಾಟ ಕಾಡಲು ಶುರುವಾಗಿದೆ. ಎಚ್ಚರಿಕೆ ವಹಿಸದೇ ಇದ್ದರೆ ಅನಾರೋಗ್ಯ ಸಮಸ್ಯೆ‌ ಕಟ್ಟಿಟ್ಟಬುತ್ತಿ.

ಎಂ. ಎಸ್ ರಾಮಯ್ಯ ಆಸ್ಪತ್ರೆಯ ಶ್ವಾಸಕೋಶ ತಜ್ಞ ಪ್ರಸನ್ನ ಕುಮಾರ್

ಕರುನಾಡಿನಲ್ಲಿ ಕೊರೊನಾ ಹೊಡೆತವನ್ನೇ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರ ನಡುವೆ‌ ಸಾಂಕ್ರಾಮಿಕ ರೋಗಗಳ ಭೀತಿಯು ಶುರುವಾಗಿದೆ.‌ ಈಗಾಗಲೇ ಕೊರೊನಾ ಚಿಕಿತ್ಸೆಗೆ ಆ್ಯಂಬುಲೆನ್ಸ್​ ಕೊರತೆಯಿಂದ ಹಿಡಿದು, ಆಸ್ಪತ್ರೆಯಲ್ಲಿ ಹಾಸಿಗೆ ಸಮಸ್ಯೆ ಶುರುವಾಗಿದೆ. ಹಲವೆಡೆ ಸಾಂಕ್ರಾಮಿಕ ರೋಗವೂ ಕೊರೊನಾ ಗುಣಲಕ್ಷಣಕ್ಕೂ ಸಾಮೀಪ್ಯ ಇದ್ದು, ಚಿಕಿತ್ಸೆ ನೀಡಲು ಕ್ಲಿನಿಕ್ ವೈದ್ಯರು ಹಿಂದೇಟು ಹಾಕುವ ಸ್ಥಿತಿ ಉದ್ಭವವಾಗಿದೆ.

ಕೊರೊನಾ ನಿರ್ಲಕ್ಷಿಸಿದ ಹಾಗೇ ಸಾಂಕ್ರಾಮಿಕ ರೋಗ ನಿರ್ಲಕ್ಷ್ಯ ಬೇಡ: ಬೇಸಿಗೆಯಿಂದ ಮಳೆಗಾಲಕ್ಕೆ ವಾತಾವರಣ ಬದಲಾಗುತ್ತಿದೆ. ಮಳೆಗಾಲದಲ್ಲಿ ಹೆಚ್ಚು ಸೊಳ್ಳೆಗಳು ಮೊಟ್ಟೆ ಇಡಲಿದ್ದು, ಈ ಸಮಯದಲ್ಲಿ ಸೊಳ್ಳೆಗಳಿಂದ ಹರಡುವ ಹೆಚ್ 1 ಎನ್ 1, ಡೆಂಗ್ಯು, ಚಿಕನ್ ಗುನ್ಯಾ, ಮಲೇರಿಯಾ, ಇತರೆ ವೈರಲ್ ಫೀವರ್ ಅಧಿಕವಾಗುವ ಲಕ್ಷಣಗಳು ಇರಲಿವೆ. ಕೊರೊನಾ ವೈರಸ್ ನಿರ್ಲಕ್ಷಿಸಿದ ಹಾಗೇ ಸಾಂಕ್ರಾಮಿಕ ರೋಗ ನಿರ್ಲಕ್ಷ್ಯ ಮಾಡಿದರೆ ಆಪತ್ತು ನಿಮ್ಮ ಹಿಂದೆಯೇ ಕಾದು ಕುಳಿತಿರುತ್ತೆ.

ಎಂ. ಎಸ್ ರಾಮಯ್ಯ ಆಸ್ಪತ್ರೆಯ ಶ್ವಾಸಕೋಶ ತಜ್ಞ ಪ್ರಸನ್ನ ಕುಮಾರ್ ಈ ಕುರಿತು ಮಾತನಾಡಿದ್ದು, ಮಳೆಗಾಲ ಶುರುವಾಯಿತು ಅಂದರೆ ಸಾಂಕ್ರಾಮಿಕ ಕಾಯಿಲೆಗಳ ಕಾಲ ಅಂದರೆ ತಪ್ಪಾಗೋದಿಲ್ಲ. ಈಗಾಗಲೇ ಕೋವಿಡ್ ವೈರಸ್​ ಭಯಭೀತಿ ಹುಟ್ಟಿಸಿದ್ದು, ಈ ನಡುವೆ ಇತರೆ ಸಾಂಕ್ರಾಮಿಕ ರೋಗಗಳು ಕಾಡಲಿದೆ‌‌. ಈ ಸಮಯದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆಗಲಿದ್ದು, ಪೌಷ್ಟಿಕಾಹಾರ ಸೇವನೆ ಹೆಚ್ಚಾಗಬೇಕು ಎಂದು ಹೇಳಿದರು.

ಹೂವಿನ ಕುಂಡ, ಬೀಸಾಕಿದ ಟೈರ್, ಹಳೆಯ ಎಣ್ಣೆಯ ಡ್ರಮ್, ನೀರು ಸಂಗ್ರಹಿಸುವ ತೊಟ್ಟಿ ಇವುಗಳಲ್ಲಿ ನೀರು ನಿಲ್ಲದಂತೆ ಮತ್ತು ಶುಚಿಗೊಳಿಸುವ ಕೆಲಸ ಮಾಡಬೇಕು. ಇಲ್ಲವಾದರೆ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತೆ.

ಆಹಾರ ಸೇವನೆ ಹೀಗೆ ಇರಲಿ:
° ಬಿಸಿಯಾದ ನೀರು ಸೇವನೆ/ ಕಾಯಿಸಿ ಆರಿಸಿದ ನೀರು
° ಬಿಸಿ ಆಹಾರ ಸೇವನೆ
° ಎಣ್ಣೆ ಪದಾರ್ಥ ಕಡಿಮೆ ಮಾಡುವುದು
° ಹೊರಗಿನ - ಬೀದಿಬದಿ ಆಹಾರ ಸೇವನೆ ಮಾಡದೇ ಇರುವುದು
° ಅತ್ಯಧಿಕ ಪೌಷ್ಟಿಕ ಆಹಾರ ಸೇವನೆ
° ಟೀ-ಕಾಫಿ ತ್ಯಜಿಸಿ, ಕಷಾಯ ಸೇವಿಸಿ
° ಬೆಳಗ್ಗೆ ರಾತ್ರಿ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದು

ಇನ್ನು ಹಿರಿಯರು, ಮಕ್ಕಳು, ಗರ್ಭಿಣಿಯರು ಹೆಚ್ಚು ಮುಂಜಾಗ್ರತೆ ವಹಿಸುವುದು ಕಡ್ಡಾಯ. ಅದಷ್ಟು ಮಾಸ್ಕ್ ಬಳಸುವುದು ಉತ್ತಮ. ಹೊರಗಿನ ಓಡಾಟಕ್ಕೆ ಬ್ರೇಕ್ ಹಾಕುವುದು. ಸೊಳ್ಳೆ ಕಚ್ಚದಂತೆ ಪೂರ್ಣ ಪ್ರಮಾಣ ಉಡುಪು ಧರಿಸುವುದು. ಸೊಳ್ಳೆ ಬರದಂತೆ ಮಾಡಲು ಕಾಯಲ್ ಬಳಸುವುದು ಉತ್ತಮ. ಒಟ್ಟಾರೆ, ಕೋವಿಡ್ ಈಗಾಗಲೇ ಅತಂತ್ರ ಸ್ಥಿತಿ ಸೃಷ್ಟಿಸಿದ್ದು ಇತರೆ ವೈರಸ್ ಎಂಟ್ರಿಗೆ ರೆಡಿಯಾಗಿದೆ. ಹೀಗಾಗಿ ನಮ್ಮ ಸುರಕ್ಷತೆ- ಆರೋಗ್ಯ ನಮ್ಮದೇ ಕೈನಲ್ಲಿ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.