ಬೆಂಗಳೂರು: ನಗರದಲ್ಲಿ ಕೊರೊನಾ ಹಾಟ್ ಸ್ಪಾಟ್ಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. 34 ಹಾಟ್ಸ್ಪಾಟ್ಗಳಿಂದ 32 ವಾರ್ಡ್ಗಳಿಗೆ ಇಳಿಕೆಯಾಗಿದ್ದು, ಹೊಸ ಪಟ್ಟಿಯನ್ನು ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಹೊಸ ಹಾಟ್ಸ್ಪಾಟ್ಗಳ ಲಿಸ್ಟ್ನಲ್ಲಿ, ವಾರ್ಡ್ 64 - ರಾಜ್ ಮಹಲ್, ವಾರ್ಡ್ 128- ನಾಗರಬಾವಿ ಹೆಸರು ಕೈಬಿಡಲಾಗಿದೆ. ಕಳೆದ 28 ದಿನಗಳಲ್ಲಿ ಹೊಸ ಕೊರೊನಾ ಸೋಂಕು ಪತ್ತೆಯಾಗದ ಕಾರಣಕ್ಕೆ ಹಾಟ್ಸ್ಪಾಟ್ ಲಿಸ್ಟ್‌ನಿಂದ ಎರಡು ವಾರ್ಡ್ಗಳ ಹೆಸರು ಕೈಬಿಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ. ಅಲ್ಲದೇ ಹಾಟ್ ಸ್ಪಾಟ್ಗಳಲ್ಲಿ ಸೀಲ್ ಡೌನ್ ಮಾಡಲ್ಲ. ಜನರು ಭಯಪಡುವುದು ಬೇಡ ಎಚ್ಚರಿಕೆಯಿಂದ ಇರಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ಕೊರೊನಾ ಹಾಟ್ ಸ್ಪಾಟ್ ಪ್ರದೇಶಗಳ ಹೊಸ ಲಿಸ್ಟ್ 32 ಕೊರೊನಾ ಹಾಟ್ ಸ್ಪಾಟ್ ಲಿಸ್ಟ್ 1) ಬೆಂಗಳೂರು ದಕ್ಷಿಣ ವಲಯ ಸುಧಾಮನಗರ ಕರಿಸಂದ್ರ ಈಜಿಪುರಗುರಪ್ಪನಪಾಳ್ಯ ಶಾಕಾಂಬರಿ ನಗರ ಬಾಪುಜಿನಗರ ಅತ್ತಿಗುಪ್ಪೆ ಜೆಪಿ ನಗರ ಹೊಸಹಳ್ಳಿ 2) ಬೆಂಗಳೂರು ಪೂರ್ವ ವಲಯವಸಂತನಗರ ಲಿಂಗರಾಜಪುರ ಜೀವನಭೀಮಾ ನಗರರಾಧಾಕೃಷ್ಣ ವಾರ್ಡ್ .ಸಿವಿರಾಮನ್ ನಗರ ರಾಮಸ್ವಾಮಿ ಪಾಳ್ಯ ಮಾರುತಿ ಸೇವಾನಗರ ಸಂಪಂಗಿರಾಮನಗರ ದೊಮ್ಮಲೂರು 3)ಬೆಂಗಳೂರು ಪಶ್ಚಿಮ ಮಲಯ ನಾಗಪುರ ಸುಭಾಷ್ ನಗರ ಶಿವಾಜಿನಗರಪಾದರಾಯನಪುರ ಕೆ ಆರ್ ಮಾರ್ಕೆಟ್ 4)ಯಲಹಂಕ ವಲಯ ಥಣಿಸಂದ್ರ, ಬ್ಯಾಟರಾಯನಪುರ 5)ಆರ್ ಆರ್ ನಗರ ವಲಯಆರ್ ಆರ್ ನಗರ6) ಮಹದೇವ ಪುರ ವಲಯಹಗ್ದೂರುಗರುಡಾಚಾರ್ ಪಾಳ್ಯ ವರ್ತೂರು ಹೂಡಿ ಹೊರಮಾವು 7)ಬೊಮ್ಮನಹಳ್ಳಿ ವಲಯಸಿಂಗಸಂದ್ರಇವಿಷ್ಟು ಅತಿಹೆಚ್ಚು ಕೊರೊನಾ ಸೋಂಕಿತರು ಹಾಗೂ ಸಂಪರ್ಕಿತರು ಇರುವ ವಾರ್ಡ್ಗಳಾಗಿವೆ. ಇಲ್ಲಿನ ಜನ ಹೆಚ್ಚಾಗಿ ಗುಂಪುಗುಂಪಾಗಿ ಓಡಾಡದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಹೋಂ ಡೆಲಿವರಿ ಮಾಡಿಕೊಳ್ಳಬೇಕು ಮುಂತಾದ ಮುನ್ನೆಚ್ಚರಿಕೆ ನೀಡಲಾಗಿದೆ.