ETV Bharat / state

ಎಲೆಕ್ಟ್ರಿಕ್​ ವಾಹನಗಳಿಗೆ ಉತ್ತೇಜನ: ಶೀಘ್ರವೇ ಹೊಸ ಇಂಧನ ನೀತಿ ಎಂದ ಡಿಸಿಎಂ

author img

By

Published : Jan 30, 2021, 3:13 PM IST

Updated : Jan 30, 2021, 3:45 PM IST

ರಸ್ತೆಗಳ ಉದ್ದಗಲಕ್ಕೂ 'ಬ್ಯಾಟರಿ ಬ್ಯಾಂಕ್'ಗಳು ಕೂಡ ಸ್ಥಾಪನೆಯಾಗಲಿದ್ದು, ಅವು ಕೂಡ ಪೆಟ್ರೋಲ್ ಬಂಕ್​ಗಳಂತೆ ಕೆಲಸ ಮಾಡಲಿವೆ. ಮೊದಲೇ ಅವುಗಳನ್ನು ಚಾರ್ಚ್ ಮಾಡಿ ಇಟ್ಟಿರಲಾಗುತ್ತದೆ. ಬ್ಯಾಟರಿಯನ್ನು ವಾಹನಕ್ಕೆ ಅಳವಡಿಸಿಕೊಂಡು ಹೋಗುವ ವ್ಯವಸ್ಥೆ ಅತಿ ಬೇಗನೇ ರಾಜ್ಯದಲ್ಲಿ ಕಾಣಬಹುದು. ಇದರಿಂದ ಎಲೆಕ್ಟ್ರಿಕ್ ವಾಹನಗಳ ದರವೂ ತುಂಬಾ ಕಡಿಮೆ ಇರುತ್ತದೆ ಎಂದು ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

vehicle
vehicle

ಬೆಂಗಳೂರು: ವಾಯುಮಾಲಿನ್ಯ ನಿವಾರಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್​ ವಾಹನಗಳಿಗೆ ಹೆಚ್ಚು ಉತ್ತೇಜನ ನೀಡಲಾಗುವುದು. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಎರಡು ಲೀಥಿಯಂ ಬ್ಯಾಟರಿ ಘಟಕಗಳು ಸ್ಥಾಪನೆಯಾಗುತ್ತಿವೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ವಿಧಾನಸೌಧದ ಪೂರ್ವದ್ವಾರದಲ್ಲಿ ಇಂದು ರೋಟರಿ ಕ್ಲಬ್ ಹಮ್ಮಿಕೊಂಡಿದ್ದ ಎಲೆಕ್ಟ್ರಿಕ್ ವಾಹನಗಳ ರ‍್ಯಾಲಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಲೀಥಿಯಂ ಬ್ಯಾಟರಿಗಳನ್ನು ತಯಾರಿಸುವ ಬೃಹತ್ತಾದ ಎರಡು ಕೈಗಾರಿಕೆಗಳ ಪೈಕಿ ಒಂದು ಹುಬ್ಬಳ್ಳಿ ಭಾಗದಲ್ಲಿ, ಇನ್ನೊಂದು ಚಿಕ್ಕಬಳ್ಳಾಪುರ ಕಡೆ ಸ್ಥಾಪನೆಯಾಗುತ್ತಿವೆ. ಇದರ ಜತೆಗೆ, ಅತ್ಯುತ್ತಮವಾದ ಇಂಧನ ನೀತಿಯನ್ನು ರಾಜ್ಯ ಸರ್ಕಾರ ರೂಪಿಸುತ್ತಿದೆ ಎಂದು ತಿಳಿಸಿದರು.

new energy policy for electric vehicles
ಎಲೆಕ್ಟ್ರಿಕ್ ವಾಹನಗಳ ರ್ಯಾಲಿಗೆ ಚಾಲನೆ

2018ರಲ್ಲಿಯೇ ರಾಜ್ಯವೂ ದೇಶದಲ್ಲೇ ಮೊದಲಿಗೆ ಎಲೆಕ್ಟ್ರಿಕ್ ವಾಹನಗಳ ನೀತಿಯನ್ನು ರೂಪಿಸಿ ಜಾರಿಗೆ ತಂದಿದೆ. ಚಾರ್ಚಿಂಗ್ ಸ್ಟೇಷನ್​ಗಳಲ್ಲಿ ಗ್ರಾಹಕರಿಗೆ ರಿಯಾಯಿತಿ ನೀಡಲಾಗುತ್ತಿದ್ದು, ವಾಣಿಜ್ಯ ಬಳಕೆಯ ವಿದ್ಯುತ್​​​ನ ಪ್ರತಿ ಯೂನಿಟ್​ಗೆ 9 ರೂ. ಇದ್ದರೆ, ಎಲೆಕ್ಟ್ರಿಕ್ ವಾಹನಗಳಿಗೆ 5 ರೂ. ದರದಲ್ಲಿಯೇ ನೀಡಲಾಗುತ್ತಿದೆ ಎಂದರು.

ಬೆಂಗಳೂರಿನಲ್ಲಿ ಈ ಕ್ಷೇತ್ರದಲ್ಲಿ ಸಾಕಷ್ಟು ಆವಿಷ್ಕಾರಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ತಯಾರಕರು ವಾಹನವನ್ನು ಮಾತ್ರ ನೀಡಲಿದ್ದಾರೆ. ಗ್ರಾಹಕರು ಬ್ಯಾಟರಿ ಬಾಡಿಗೆಗೆ ಪಡೆದುಕೊಂಡು ವಾಹನ ಚಾಲನೆ ಮಾಡುವ ದಿನಗಳು ದೂರವಿಲ್ಲ. ರಸ್ತೆಗಳ ಉದ್ದಗಲಕ್ಕೂ 'ಬ್ಯಾಟರಿ ಬ್ಯಾಂಕ್'ಗಳು ಕೂಡ ಸ್ಥಾಪನೆಯಾಗಲಿದ್ದು, ಅವು ಕೂಡ ಪೆಟ್ರೋಲ್ ಬಂಕ್​ಗಳಂತೆ ಕೆಲಸ ಮಾಡಲಿವೆ. ಮೊದಲೇ ಅವುಗಳನ್ನು ಚಾರ್ಚ್ ಮಾಡಿ ಇಟ್ಟಿರಲಾಗುತ್ತದೆ. ಬ್ಯಾಟರಿಯನ್ನು ವಾಹನಕ್ಕೆ ಅಳವಡಿಸಿಕೊಂಡು ಹೋಗುವ ವ್ಯವಸ್ಥೆ ಅತಿ ಬೇಗನೇ ರಾಜ್ಯದಲ್ಲಿ ಕಾಣಬಹುದು. ಇದರಿಂದ ಎಲೆಕ್ಟ್ರಿಕ್ ವಾಹನಗಳ ದರವೂ ತುಂಬಾ ಕಡಿಮೆ ಇರುತ್ತದೆ ಎಂದು ಹೇಳಿದರು.

new energy policy for electric vehicles
ಎಲೆಕ್ಟ್ರಿಕ್ ವಾಹನಗಳ ರ್ಯಾಲಿಗೆ ಚಾಲನೆ

ಎಲೆಕ್ಟ್ರಿಕ್ ವಾಹನಗಳ ಉದ್ಯಮ ಬೆಳೆಯುತ್ತಿರುವ ವೇಗವನ್ನು ನೋಡಿದರೆ, ಇನ್ನು ಕೇವಲ ಹತ್ತು ವರ್ಷಗಳಲ್ಲಿ ಪೆಟ್ರೋಲ್, ಡೀಸೆಲ್ ಚಾಲಿತ ವಾಹನಗಳು ಕಣ್ಮರೆಯಾಗಬಹುದು. ರಾಜ್ಯದಲ್ಲಿ ಈ ಕ್ಷೇತ್ರಕ್ಕೆ ಸರಕಾರ ಹೆಚ್ಚು ಉತ್ತೇಜನ ನೀಡುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಚಾರ್ಚಿಂಗ್ ಸ್ಟೇಷನ್​ಗಳನ್ನು ಮಾಡಲು ಬೆಸ್ಕಾಂ ನೋಡೆಲ್ ಏಜೆನ್ಸಿಯಾಗಿ ಕೆಲಸ ಮಾಡುತ್ತಿದೆ. ಈಗಾಗಲೇ ಬೆಸ್ಕಾಂನಿಂದ 150 ಚಾರ್ಚಿಂಗ್ ಸ್ಟೇಷನ್​ಗಳನ್ನು ಮಾಡಲಾಗಿದೆ. ಇನ್ನೂ 150 ಚಾರ್ಚಿಂಗ್ ಸ್ಟೇಷನ್​ಗಳನ್ನು ಸ್ಥಾಪಿಸಲು ಎನ್​ಟಿಪಿಸಿ ಜೊತೆ ಕೈಜೋಡಿಸಲಾಗಿದೆ ಎಂದರು.

Last Updated : Jan 30, 2021, 3:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.