ETV Bharat / state

ಕೊರೊನಾ ಸೋಂಕಿತರು ಹೊರತುಪಡಿಸಿ ಇತರೆ ರೋಗಿಗಳಿಗೆ ಎರಡು ವಾರ ಆಸ್ಪತ್ರೆ ಬಂದ್: ಸರ್ಕಾರದ ಹೊಸ ಆದೇಶ! - ಕರ್ನಾಟಕ ಸರ್ಕಾರದಿಂದ ಹೊಸ ಕೋವಿಡ್ ನಿಯಮ

COVID cases in Karnataka: ಖಾಸಗಿ ಆಸ್ಪತ್ರೆಗಳು ಜನಸಂದಣಿಯನ್ನು ತಡೆಗಟ್ಟಲು ಮತ್ತು COVID-19 ಹರಡುವುದನ್ನು ನಿಯಂತ್ರಿಸಲು ಕೋವಿಡೇತರ ರೋಗಿಗಳಿಗೆ ಎರಡು ವಾರ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗೆ ಮಾತ್ರ ಅವಕಾಶವಿದ್ದು, ಇತರೆ ಕಾಯಿಲೆಗಳಿಂದ ಬಳಲುವವರಿಗೆ ಅಡ್ಮಿಟ್​ ಆಗದಂತೆ ಸರ್ಕಾರ ಸೂಚಿಸಿದೆ. ಸರ್ಕಾರದ ಈ ಆದೇಶವೂ ಸದ್ಯ ಹೊರರೋಗಿಗಳಿಗೆ ಶಾಕ್ ಕೊಟ್ಟಿದೆ.

ಸರ್ಕಾರ
ಸರ್ಕಾರ
author img

By

Published : Jan 15, 2022, 8:14 PM IST

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಲೇ ಇದೆ. ಇತ್ತ ಅನಾರೋಗ್ಯ ಮತ್ತು ತುರ್ತು ಆರೈಕೆ ಅಗತ್ಯವಿರುವ ರೋಗಿಗಳು ಮಾತ್ರ ಆಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಮತ್ತು ಆರೋಗ್ಯ ಸಂಸ್ಥೆಗಳಿಗೆ ಭೇಟಿ ನೀಡಬಹುದು ಎಂದು ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ.

ದಂತ ಸಮಸ್ಯೆ ಹೊಂದಿರುವ ರೋಗಿಗಳನ್ನು ಒಳಗೊಂಡಂತೆ ಹೊರರೋಗಿಗಳು, ಫಾಲೋಅಪ್ ಕೇಸ್, ಇತರೆ ಅನಾರೋಗ್ಯದ ಎಲ್ಲಾ ರೋಗಿಗಳು ಮುಂದಿನ ಎರಡು ವಾರಗಳವರೆಗೆ ಅಥವಾ ಮುಂದಿನ ಆದೇಶದವರೆಗೆ ಆಸ್ಪತ್ರೆಗೆ ಭೇಟಿ ನೀಡುವಂತಿಲ್ಲ. ಈ ಮೂಲಕ ಕೊರೊನಾ ಸೋಂಕು ಹರಡುವುದನ್ನು ಹಾಗೂ ಜನಸಂದಣಿ ತಡೆಯಲು ಆಸ್ಪತ್ರೆಗಳಿಗೆ ಭೇಟಿ ನೀಡಬಾರದೆಂದು ಎಚ್ಚರಿಕೆ ನೀಡಿದೆ.‌

ಖಾಸಗಿ ಆಸ್ಪತ್ರೆಗಳು ಜನಸಂದಣಿಯನ್ನು ತಡೆಗಟ್ಟಲು ಮತ್ತು COVID-19 ಹರಡುವುದನ್ನು ನಿಯಂತ್ರಿಸಲು ಇದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಸರ್ಕಾರದ ಈ ಆದೇಶವೂ ಸದ್ಯ ಹೊರರೋಗಿಗಳಿಗೆ(OPD) ಶಾಕ್ ಕೊಟ್ಟಿದೆ.

ಕೋವಿಡ್ ಟೆಸ್ಟ್​​​ ಸ್ಯಾಂಪಲ್ಸ್ ರಿಪೋರ್ಟ್ ಬರುವವರೆಗೆ ಹೊರಗೆ ಓಡಾಡುವಂತಿಲ್ಲ :

COVID-19 ಪರೀಕ್ಷೆಗಾಗಿ ಸ್ವ್ಯಾಬ್ ಮಾದರಿಯನ್ನು ಒದಗಿಸಿದ ವ್ಯಕ್ತಿಗಳು ಇನ್ಮುಂದೆ ರಿಪೋರ್ಟ್ ಬರೋ ತನಕ ಮನೆಯಲ್ಲಿ ಐಸೋಲೇಷನ್ ಅಥವಾ ಕ್ವಾರಂಟೈನ್ ಇರಬೇಕು.‌ ಇಂತಹದೊಂದು ಆದೇಶವನ್ನ ಸರ್ಕಾರ ಹೊರಡಿಸಿದ್ದು, ಕಟ್ಟುನಿಟ್ಟಾಗಿ ಈ ನಿಯಮವನ್ನ ಪಾಲಿಸುವಂತೆ ಎಚ್ಚರಿಕೆ ನೀಡಿದೆ.‌

ಸ್ಯಾಂಪಲ್ಸ್ ಕೊಟ್ಟ ವ್ಯಕ್ತಿಯು ಹೊರಗೆ ಓಡಾಡುವುದು, ಜನರ ಜತೆಗೆ ಬೇರೆಯುವುದು ಸೇರಿದಂತೆ, ಕೆಲಸಕ್ಕೆ ಹೋಗುವುದು ಇತ್ಯಾದಿಯಿಂದಾಗಿ ಸೋಂಕು ದೃಢಪಟ್ಟರೆ ಸಮುದಾಯದಲ್ಲಿ ಸೋಂಕು ಹರಡಲು ಕಾರಣವಾಗುತ್ತೆ. ಹೀಗಾಗಿ ಅಂತಹ ಸ್ಯಾಂಪಲ್ಸ್ ಕೊಟ್ಟು ಎಲ್ಲೆಂದರಲ್ಲಿ ಓಡಾಡಿದರೆ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.