ಬೆಂಗಳೂರು: ಜೈನ್ (ಡೀಮ್ಡ್ ಯೂನಿವರ್ಸಿಟಿ) ಮತ್ತು ನೆಟ್ಟೂರ್ ಟೆಕ್ನಿಕಲ್ ಟ್ರೇನಿಂಗ್ ಫೌಂಡೇಶನ್ (ಎನ್ಟಿಟಿಎಫ್) ಪಾಲುದಾರಿಕೆಯಲ್ಲಿ ವಿದ್ಯಾರ್ಥಿಗಳಿಗೆ ಕೌಶಲ್ಯ ಆಧಾರಿತ ಕಾರ್ಯಕ್ರಮಗಳ ಕೊಡುಗೆ ನೀಡಲು ಮುಂದಾಗಿವೆ.
ವೃತ್ತಿಪರ ಡಿಪ್ಲೊಮಾ ಕೋರ್ಸ್ 'ಬ್ಯಾಚುಲರ್ ಆಫ್ ವೊಕೇಶನಲ್ ಎಜುಕೇಷನ್' (ಬಿ.ವಿ.ಒ.ಸಿ.) ಎಂಬ ಹೆಸರಿನಿಂದ ಇವು ಪಠ್ಯಕ್ರಮವನ್ನು ನೀಡಲಿವೆ. 3 ವರ್ಷದ ಡಿಪ್ಲೊಮಾದಲ್ಲಿ ದಾಖಲಾತಿ ಮಾಡಿಸಿಕೊಳ್ಳಲಾಗುತ್ತದೆ. ಸದರಿ ಪದವಿಯನ್ನು ಪೂರ್ತಿ ಮಾಡಿದ ವಿದ್ಯಾರ್ಥಿಗಳಿಗೆ ಜೈನ್ ವಿಶ್ವವಿದ್ಯಾಲಯವು ಪದವಿ ಪ್ರಮಾಣಪತ್ರಗಳನ್ನು ಸಹ ಪ್ರದಾನ ಮಾಡುತ್ತದೆ.
ಜೈನ್ ವಿಶ್ವವಿದ್ಯಾಲಯವು ಎನ್ಟಿಟಿಎಫ್ ಸಹಕಾರದೊಂದಿಗೆ ವಿದ್ಯಾರ್ಥಿಗಳ ಕೌಶಲ್ಯವನ್ನು ನವೀಕರಿಸಲು ಮತ್ತು ಅವರ ಆಯ್ಕೆಗಳು ಮತ್ತು ಆಸಕ್ತಿಗಳ ಅನುಸಾರವಾಗಿ ವೈವಿಧ್ಯಮಯ ವೃತ್ತಿಪರ ಶಿಕ್ಷಣವನ್ನು ಹೊರತಂದಿದೆ.
ಈ ಸಹಯೋಗಕ್ಕೆ ಸಂಬಂಧಿಸಿದಂತೆ ಜೈನ್ ವಿಶ್ವವಿದ್ಯಾಲಯದ ಮಾನ್ಯ ಕುಲಪತಿ ಡಾ. ಚೆನ್‌ರಾಜ್‌ರಾಯ್ ಚಂದ್‍ರವರು ಮಾತನಾಡಿ 'ಕೌಶಲ್ಯ ಇರುವ ಕಾರ್ಯಕ್ರಮಗಳಲ್ಲಿ ಪ್ರವೇಶ ನೀಡಿ ಮತ್ತು ಯುವ ಜನರನ್ನು ಕೌಶಲ್ಯರನ್ನಾಗಿ ಮಾಡುವುದರಿಂದ ನಮ್ಮ ಆರ್ಥಿಕತೆಯು ಅಭಿವೃದ್ಧಿ ಹೊಂದುತ್ತದೆ ಮತ್ತು ಈ ಒಡಂಬಡಿಕೆ ವಿದ್ಯಾರ್ಥಿಗಳಿಗೆ ಜೀವನಕ್ಕೆ ಹೊಸ ತಿರುವು ನೀಡುವಲ್ಲಿ ಮಹತ್ವದ ಮೈಲಿಗಲ್ಲಾಗಿ ಮೂಡಿಬರುವ ಸಂಪೂರ್ಣ ನಂಬಿಕೆ ನನಗಿದೆ' ಎಂದು ತಿಳಿಸಿದರು.
ಎನ್ಟಿಟಿಎಫ್ ವ್ಯವಸ್ಥಾಪಕ ನಿರ್ದೇಶಕರಾದ ಮಾನ್ಯ ಡಾ.ಎನ್. ರೆಗುರಾಜ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ತಮ್ಮ ಗುರಿಗಳನ್ನು ಮುಟ್ಟಲು ಮತ್ತು ಹೊಸ ಹೊಸ ಉದ್ಯಮಶೀಲತೆಗಳನ್ನು ಸ್ಥಾಪಿಸುವ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.