ಬೆಂಗಳೂರು: ಮನೆಯವರಿಂದ ರಕ್ಷಣೆ ಕೋರಿ ಗಿರಿನಗರ ಠಾಣೆಗೆ ನವ ವಿವಾಹಿತ ಜೋಡಿ ಮಾಸ್ಕ್ ಹಾಕಿಕೊಂಡೇ ಬಂದರು.
ಲಾಕ್ ಡೌನ್ ಬಂದೋಬಸ್ತ್ ನಲ್ಲಿ ಹೈರಾಣಗಿರುವ ಪೊಲೀಸರಿಗೆ ನವ ಜೋಡಿಯೊಂದು ಗಂಟು ಬಿದ್ದಿದೆ. ಮನೆಯವರ ವಿರೋಧದ ನಡುವೆಯೂ ಮುರುಘ ಹಾಗೂ ಮೇಘಶ್ವಿನಿ ಎಂಬ ಪ್ರೇಮಿಗಳು ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ. ಆನಂತರ ಮನೆಯವರ ಬೆದರಿಕೆ ಹಿನ್ನೆಲೆ ಗಿರಿನಗರ ಪೊಲೀಸ್ ಠಾಣೆಗೆ ಮದುವೆ ಬಟ್ಟೆಯಲ್ಲೇ ಬಂದು ಹುಡುಗಿ ಮನೆಯವರಿಂದ ತೊಂದರೆ ಇದೆ ರಕ್ಷಣೆ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.