ಬೆಂಗಳೂರು: ಮನ್ಸೂರ್ ಖಾನ್ ವಿರುದ್ಧ 'ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆ' (Presumptive Economic Offenders Act) -2018 ಪ್ರಯೋಗಕ್ಕೆ ಇಡಿ ಚಿಂತನೆ ನಡೆದಿದೆ. ಕೇಂದ್ರದ ಮೂಲಕ ಈ ಕಾಯ್ದೆ ಜಾರಿ ಮಾಡಲು ಇಡಿ ಮುಂದಾಗಿದ್ದು, ಕಾನೂನು ಚಿಂತಕರ ಜೊತೆ ಚರ್ಚೆ ನಡೆಸಿದ್ದಾರೆ.
ಇನ್ನು ಈ ಕಾಯ್ದೆಯನ್ನ ಮದ್ಯದ ದೊರೆ ವಿಜಯ್ ಮಲ್ಯ, ಮೆಹುಲ್ ಚೋಕ್ಸಿ, ವಜ್ರೋದ್ಯಮಿ ನೀರವ್ ಮೋದಿ ಸೇರಿ 28 ಕ್ಕೂ ಹೆಚ್ಚು ಮಂದಿ ವಿರುದ್ಧ ಈ ಕಾನೂನು ಪ್ರಯೋಗ ಮಾಡಲಾಗಿದೆ. 100 ಕೋಟಿ ಅಧಿಕ ಹಣ ವಂಚನೆ ಪ್ರಕರಣಗಳಿಗಾಗಿ ಇರುವ ಈ ಕಾಯ್ದೆ 2018 ರಲ್ಲಿ ಜಾರಿಗೆ ತರಲಾಯಿತು. ಇದೀಗ ಮನ್ಸೂರ್ ಖಾನ್ ಸಹ 100 ಕೋಟಿ ಅಧಿಕ ಹಣ ವಂಚನೆ ಮಾಡಿದ್ದರಿಂದ (ಇಡಿ) ಜಾರಿ ನಿರ್ದೇಶನಾಲಯ ಈ ಕಾಯ್ದೆಯನ್ನು ಜಾರಿಗೆ ತರಲು ಚಿಂತನೆ ಮಾಡಿದೆ.
ಈ ಕಾಯ್ದೆ ಜಾರಿಯಾದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರೋಪಿ ಎಕನಾಮಿಕ್ ಅಫೆಂಡರ್ ಅಂತಾ ಡಿಕ್ಲೇರ್ ಆಗುತ್ತೆ. ಇದನ್ನ ಕೋರ್ಟ್ ಮೂಲಕ ಇಂಟರ್ ನ್ಯಾಷನಲ್ ಅಫೇಂಡರ್ ಅಂತಾ ಹೇಳಲಾಗುತ್ತೆ. ಜೊತೆಗೆ ಈ ಕಾಯ್ದೆ ಜಾರಿಯಾದರೆ ಆರೋಪಿ ಇರುವ ಎರಡು ದೇಶಗಳ ಕಾನೂನಿ ವ್ಯಾಪ್ತಿಗೆ ಆರೋಪಿ ಒಳಗಾಗುತ್ತಾನೆ.
ಈ ಕಾಯ್ದೆಯಡಿ ಆರೋಪಿಯ ಪ್ರಾಪರ್ಟಿ ಸೀಜ್ ಮಾಡಿ ಅದನ್ನ ಸರ್ಕಾರ ಮಾರಿ ಜನರಿಗೆ ಹಣ ನೀಡುವ ಅವಕಾಶವಿದೆ. ಇನ್ನು ಈ ಕಾಯ್ದೆ ಕಂಪನಿಯ ಎಲ್ಲ ನಿರ್ದೇಶಕರ ಮೇಲೂ ಅಪ್ಲೇ ಆಗುತ್ತೆ. ಈ ಕಾಯ್ದೆಯಡಿ ಕಂಪನಿಯ ಎಲ್ಲ ನಿರ್ದೇಶಕರ ಆಸ್ತಿ ಲಿಸ್ಟ್ ಮಾಡಿ ಮುಟ್ಟುಗೋಲಿಗೆ ಅವಕಾಶವಿದೆ.
ಆದರೆ, ಒಂದು ತಾಂತ್ರಿಕ ತೊಂದರೆಯಾಗಲಿದೆ. ಈ ಕಾಯ್ದೆಯಡಿ ಆರೋಪಿಯನ್ನು ಸುಲಭವಾಗಿ ಭಾರತಕ್ಕೆ ತರಲು ಕಷ್ಟವಾಗುತ್ತೆ. ಆತ ಇರುವ ದೇಶದ ಕೋರ್ಟ್ನಲ್ಲಿ ಕಾನೂನು ಪ್ರಕ್ರಿಯೆ ಮುಗಿಸಿ ಒಪ್ಪಿಗೆ ಪಡೆದ ನಂತರ ಕರೆತರಬೇಕು ಎನ್ನುತ್ತಾರೆ ಕಾನೂನು ತಜ್ಞರು.