ETV Bharat / state

ಆಧಾರ್‌, ಪಾನ್‌ ಕಾರ್ಡ್‌, ಪಾಸ್‌ಪೋರ್ಟ್ ಎಲ್ಲವೂ ಅಕ್ರಮ: ಬೆಂಗಳೂರಿನಲ್ಲಿ ನೇಪಾಳಿ ಪ್ರಜೆ ಬಂಧನ - ETv Bharat karnataka news

ನೇಪಾಳದ ಪ್ರಜೆಯೊಬ್ಬ ಅಕ್ರಮವಾಗಿ ಭಾರತ ಪಾಸ್‌ಪೋರ್ಟ್​ ಮಾಡಿಸಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಬಿದ್ದಿದ್ದಾನೆ.

Kempegowda International Airport : Bangaloru
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ : ಬೆಂಗಳೂರು
author img

By

Published : Nov 18, 2022, 10:04 AM IST

Updated : Nov 18, 2022, 5:30 PM IST

ದೇವನಹಳ್ಳಿ: ತನ್ನ ಹೆಸರು ಬದಲಾಯಿಸಿ ಭಾರತದಲ್ಲಿ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಮಾಡಿಸಿಕೊಂಡಿದ್ದಷ್ಟೇ ಅಲ್ಲದೇ, ಅಕ್ರಮವಾಗಿ ಪಾಸ್‌ಪೋರ್ಟ್ ಕೂಡಾ ತಯಾರು ಮಾಡಿಟ್ಟುಕೊಂಡಿದ್ದ ನೇಪಾಳದ ಪ್ರಜೆಯನ್ನು ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ನರೇಶ್ ಕುಮಾರ್ ಎಂಬಾತ ನವೆಂಬರ್ 12 ರಂದು ಅಕ್ರಮವಾಗಿ ಪಡೆದ ಪಾಸ್‌ಪೋರ್ಟ್‌ ಮೂಲಕ ಬೆಂಗಳೂರು ವಿಮಾನ ನಿಲ್ದಾಣದಿಂದ ಕಠ್ಮಂಡುಗೆ ಪ್ರಯಾಣ ಬೆಳೆಸಲು ಅಣಿಯಾಗಿದ್ದ. ಡಿಪಾರ್ಚರ್ ಇಮಿಗ್ರೇಷನ್ ಏರ್ ಕೌಂಟರ್ ಬಳಿ ಏರ್‌ಪೋರ್ಟ್ ಸಿಬ್ಬಂದಿ ಈತನ ವಿಚಾರಣೆ ನಡೆಸಿದ್ದು ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿಯ ನಿಜವಾದ ಹೆಸರು ಅಶ್ವಿನ್ ದಮೈ. 2005 ರಲ್ಲಿ ಭಾರತಕ್ಕೆ ಬಂದಿದ್ದ ಈತ ತಮಿಳುನಾಡಿನಲ್ಲಿ ವಾಸವಿದ್ದು ನರೇಶ್ ಕುಮಾರ್ ಹೆಸರಿನಲ್ಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮಾಡಿಸಿಕೊಂಡಿದ್ದಾನೆ. ನಂತರ ಇದೇ ಹಾದಿಯಲ್ಲಿ ಸಾಗಿ ಪಾಸ್‌ಪೋರ್ಟ್ ಕೂಡಾ ಸಿದ್ಧಪಡಿಸಿಕೊಂಡಿದ್ದಾನೆ. ಆರೋಪಿಯ ವಿರುದ್ಧ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಫಾರಿನರ್ ಆ್ಯಕ್ಟ್ 1946, ಪಾಸ್‌ಪೋರ್ಟ್ ಆ್ಯಕ್ಟ್ 1967ರ ಅಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ವಾಮಮಾರ್ಗದಲ್ಲಿ ವಿದೇಶಿಯರು ಸೇರಿ ಆರೋಪಿಗಳಿಗೂ ಪಾಸ್ ಪೋರ್ಟ್: ಅಕ್ರಮ ಜಾಲ ಪತ್ತೆ ಹಚ್ಚಿದ ಖಾಕಿ

Last Updated : Nov 18, 2022, 5:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.