ಬೆಂಗಳೂರು : ನೆಲಮಂಗಲ ಪುರಸಭೆಯ 23 ವಾರ್ಡ್ಗಳ ಮತ ಎಣಿಕೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜ್ನಲ್ಲಿ ನಡೆಯುತ್ತಿದ್ದು. ಪುರಸಭೆಯ ಅಧಿಕಾರ ಹಿಡಿಯಲು ಜೆಡಿಎಸ್ ಪಕ್ಷ ಯಶಸ್ವಿಯಾಗಿದೆ
ನೆಲಮಂಗಲ ಪುರಸಭೆಯ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, 23 ವಾರ್ಡ್ಗಳ ಪೈಕಿ ಜೆಡಿಎಸ್ 13 ವಾರ್ಡ್ಗಳಲ್ಲಿ ಗೆಲವು ಪಡೆಯುವ ಮೂಲಕ ಪುರಸಭೆಯಲ್ಲಿ ಅಧಿಕಾರವನ್ನು ಹಿಡಿದಿದೆ. ಮತ ಎಣಿಕೆಯ ಪ್ರಾರಂಭದಲ್ಲಿ ಪೈಪೋಟಿ ನೀಡಿದ್ದ ಕಾಂಗ್ರೆಸ್, 7 ವಾರ್ಡ್ ಗಳ ಗೆಲುವಿಗೆ ಸಿಮೀತವಾಯ್ತು. ಇನ್ನೂ ಬಿಜೆಪಿ ಎರಡು ವಾರ್ಡ್ ಗಳಲ್ಲಿ ಜಯಗಳಿಸಿದೆ. ಪಕ್ಷೇತರ ಅಭ್ಯರ್ಥಿ ಒಂದು ಸ್ಥಾನ ಪಡೆದರು.
ಪುರಸಭೆಯ ಅಧಿಕಾರ ಹಿಡಿಯಲು ಮ್ಯಾಜಿಕ್ ನಂಬರ್ 12 ಸ್ಥಾನ ಪಡೆಯ ಬೇಕಿತ್ತು. ಜೆಡಿಎಸ್ ಪಕ್ಷ 13 ಸ್ಥಾನ ಪಡೆದು ನಿಚ್ಚಳ ಬಹುಮತ ಪಡೆದಿದೆ.
ನೆಲಮಂಗಲ ಪುರಸಭೆ ಚುನಾವಣಾ ಫಲಿತಾಂಶ
- ಕಾಂಗ್ರೆಸ್ -07
- ಜೆಡಿಎಸ್ -13
- ಬಿಜೆಪಿ-02
- ಬಿಎಸ್ ಪಿ-00
- ಪಕ್ಷೇತರ -01
ನೆಲಮಂಗಲ ಪುರಸಭೆ ಚುನಾವಣೆಯಲ್ಲಿ ಗೆಲುವು ಪಡೆದ ಅಭ್ಯರ್ಥಿಗಳು
ಜೆಡಿಎಸ್ - ಆಂಜನಮೂರ್ತಿ, ರಾಜಮ್ಮ, ಸುನೀಲ್, ಆನಂದ್, ಶಾರದ ಉಮೇಶ್, ದಾಕ್ಷಾಯಿಣಿ, ಆಂಜಿನಪ್ಪ, ಪದ್ಮನಾಭ್, ಶಿವಕುಮಾರ್, ಭಾರತೀಬಾಯಿ, ನರಸಿಂಹಮೂರ್ತಿ, ಲತಾ ಹೆಮಂತ್‌ಕುಮಾರ್, ಪುಷ್ಪಲತಾ
ಕಾಂಗ್ರೆಸ್ - ಸುಜಾತ, ಗಂಗಾಧರ್ ರಾವ್, ಪುರುಷೋತ್ತಮ್, ಭಾಗ್ಯ ಪ್ರದೀಪ್, ಸಿ ಲೋಲಾಕ್ಷಿ, ಸುಧಾಕೃಷ್ಣಮೂರ್ತಿ
ಬಿಜೆಪಿ - ಪೂರ್ಣಿಮಾ, ಸುಗ್ಗರಾಜು ಗಣೇಶ್
ಪಕ್ಷೇತರ - ಚೇತನ್