ETV Bharat / state

ಗುಣಾತ್ಮಕ ಶಿಕ್ಷಣದ ಬಗ್ಗೆ ಇಂದು ಚರ್ಚೆ ಮಾಡುವ ಅಗತ್ಯ ಇದೆ: ನಾಗಮೋಹನ್ ದಾಸ್ - Discussion on text revision

ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಗೆ ನ್ಯಾಯಾಂಗದಂತೆ ಸ್ವತಂತ್ರವಾಗಿ ಕೆಲಸ ಮಾಡುವ ಹಕ್ಕು ನೀಡಬೇಕು- ನಿವೃತ್ತ ನ್ಯಾ. ನಾಗಮೋಹನ್ ದಾಸ್ ಅಭಿಮತ

Nagamohan Das
ಪಠ್ಯ ಪರಿಷ್ಕರಣೆ ಕುರಿತ ಸಂವಾದ ಕಾರ್ಯಕ್ರಮ
author img

By

Published : Jul 6, 2022, 3:16 PM IST

ಬೆಂಗಳೂರು: ಪಠ್ಯ ಪರಿಷ್ಕರಣ ಸಮಿತಿಯನ್ನು ಹೊಸದಾಗಿ ರಚಿಸಬೇಕು. ಅದಕ್ಕೆ ನ್ಯಾಯಾಂಗದ ರೀತಿಯಲ್ಲಿ ಸ್ವತಂತ್ರವಾಗಿ ಕೆಲಸ ಮಾಡಲು ಹಕ್ಕು ನೀಡಬೇಕು ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಹೇಳಿದರು.

ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ವತಿಯಿಂದ ಬುಧವಾರ ಆಯೋಜಿಸಿದ್ದ ಪಠ್ಯ ಪರಿಷ್ಕರಣೆ ಕುರಿತ ಸಂವಾದವನ್ನು ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ನ್ಯಾ. ನಾಗಮೋಹನ್ ದಾಸ್ ಅವರು​ ಸ್ವಾತಂತ್ರ್ಯದ ನಂತರ ಶಿಕ್ಷಣದಲ್ಲಿ ಮುಖ್ಯವಾಗಿ ಕಾಣುತ್ತಿರುವ ಕೊರತೆ ಗುಣಾತ್ಮಕ ಮತ್ತು ಸಕಾರಾತ್ಮಕ ಶಿಕ್ಷಣ. ಅದರಲ್ಲೂ ಮುಖ್ಯವಾಗಿ ಗುಣಾತ್ಮಕ ಶಿಕ್ಷಣದ ಕುರಿತು ಇಂದು ಚರ್ಚೆ ಮಾಡುವ ಅಗತ್ಯ ಇದೆ ಎಂದರು.

Nagamohan Das
ಪಠ್ಯ ಪರಿಷ್ಕರಣೆ ಕುರಿತ ಸಂವಾದ ಕಾರ್ಯಕ್ರಮ

ಸಮಿತಿ ಸ್ವತಂತ್ರವಾಗಿರಬೇಕು: ಕೆಲಸ ಮಾಡುವ ಹಾದಿಯಲ್ಲಿ ಪಠ್ಯ ಪುಸ್ತಕಗಳು ನೈಜತೆ ಮತ್ತು ಸಮತೋಲನದ ವಿಷಯಗಳನ್ನು ಒಳಗೊಳ್ಳಬೇಕು. ಅದಕ್ಕಾಗಿ ನ್ಯಾಯಾಂಗದ ರೀತಿಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಸ್ವತಂತ್ರವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಕಾಲಕ್ಕೆ ತಕ್ಕಂತೆ ಪಠ್ಯ ಬದಲಾಯಿಸಬೇಕು: ಕಾಲ ಬದಲಾದಂತೆ ಮಕ್ಕಳಿಗೆ ನೀಡುವ ಮಾಹಿತಿಯನ್ನು ಅಂದಿನ ಪರಿಸ್ಥಿತಿಗೆ ತಕ್ಕಂತೆ ಬದಲಿಸಬೇಕು. ಆದರೆ ಅದು ಸತ್ಯ ಮತ್ತು ಮಕ್ಕಳಿಗೆ ಉತ್ತಮ ಭವಿಷ್ಯ ನೀಡುವಂತೆ ಇರಬೇಕು. ಅದನ್ನು ಬಿಟ್ಟು ಮಕ್ಕಳಲ್ಲಿ ಅಸಮಾನತೆ, ಸಾಮಾಜಿಕ ಗೊಂದಲ ಸೃಷಿಸುವಂತೆ ಮಾಡಬಾರದು. ಮಕ್ಕಳು ಯಾವುದೇ ಒಂದು ವಿಚಾರವಾದಿಯಾಗಿ ಯೋಚಿಸುವಂತೆ ಮಾಡಬಾರದು. ಬೆಳೆಯುವ ಮಕ್ಕಳು ರಾಜ್ಯ ಮತ್ತು ರಾಷ್ಟ್ರ ಪ್ರೇಮಿಗಳಾಗಿ, ಸಂವಿಧಾನದ ಆಧಾರದ ಮೇಲೆ ಅವರ ಮನಸ್ಥಿತಿ ಬೆಳೆಯಬೇಕು. ಅದಕ್ಕೆ ತಕ್ಕಂತೆ ಪಠ್ಯವನ್ನು ಕಾಲ ಕಾಲಕ್ಕೆ ಬದಲಾಯಿಸಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ: ವಿಡಿಯೋ: ಮೂರ್ಚೆ ರೋಗಿಯ ಸಹಾಯಕ್ಕೆ ಧಾವಿಸಿ ಮಾನವೀಯತೆ ಮೆರೆದ ಮಹಿಳಾ ಪಿಎಸ್ಐ

ವೈಯಕ್ತಿಕ ತೇಜೋವಧೆ ನಡೆದಿದೆ: ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಮಾತನಾಡಿ, ರಾಷ್ಟೀಯ ಪಠ್ಯ ಕ್ರಮ ಮತ್ತು ರಾಜ್ಯ ಪಠ್ಯ ಕ್ರಮ ಚೌಕಟ್ಟು ಇದ್ದು, ಅದನ್ನು ಆಧರಿಸಿ ಪಠ್ಯ ಪರಿಷ್ಕರಣೆ ಆಗಬೇಕು. ಅದಕ್ಕೆ ಅದರದ್ದೇ ಆದ ನೀತಿ ನಿಯಮ ಇದೆ. ಆದರೆ ಇಂದು ನಡೆದಿರುವ ಪರಿಷ್ಕರಣೆ ಯಾವುದನ್ನು ಒಳಗೊಂಡಿಲ್ಲ. ಇಲ್ಲಿ ವೈಯಕ್ತಿಕ ತೇಜೋವಧೆ ಮಾಡುವ ಕೆಲಸ ಆಗಿದೆ. ನಾವು ಮಾಡಿದ್ದಾಗ ಯಾರೂ ಹಿಂದಿನ ಸಮಿತಿಯಗಳ ಕುರಿತು ಮಾತನಾಡಿಲ್ಲ. ನಮ್ಮ ಪಠ್ಯ ಪರಿಷ್ಕರಣಾ ಸಮಿತಿ ಇರುವ ಸತ್ಯವನ್ನು ಎತ್ತಿ ಹಿಡಿದಿದೆ ಎಂದು ಸಮರ್ಥಿಸಿಕೊಂಡರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.