ETV Bharat / state

ಖನಿಜ ಸೋರಿಕೆ, ಅಕ್ರಮ ಸಾಗಣೆ ತಡೆಗೆ ಕಣ್ಗಾವಲು ಅಗತ್ಯವಿದೆ : ಅಧಿಕಾರಿಗಳಿಗೆ ಸಚಿವ ಹಾಲಪ್ಪ ಆಚಾರ್ ಸೂಚನೆ - ಖನಿಜ ಸಾಗಣೆ ವಾಹನ

ಖನಿಜ ಸಾಗಿಸುವ ವಾಹನಗಳ ಚಲನವಲನ ಬಗ್ಗೆ ನಿಗಾವಹಿಸಲು ಒನ್ ಸ್ಟೇಟ್ ಒನ್ ಜಿಪಿಎಸ್​ ತಂತ್ರಾಂಶ ಅಭಿವೃದ್ಧಿ, ಖನಿಜ ಸೋರಿಕೆ, ಅಕ್ರಮ ಸಾಗಣೆ ತಡೆಗೆ ಸಹಕಾರಿ ಆಗಲಿದೆ:ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಸಲಹೆ

Mantri Halappa Achar open to One State One GPS
ಒನ್ ಸ್ಟೇಟ್ ಒನ್ ಜಿಪಿಎಸ್ ಗೆ ಸಚಿವ ಹಾಲಪ್ಪಆಚಾರ್ ಚಾಲನೆ
author img

By

Published : Mar 8, 2023, 6:38 PM IST

ಬೆಂಗಳೂರು:ಎಲ್ಲ ಉಪಖನಿಜ ಮತ್ತು ಮುಖ್ಯ ಖನಿಜ ಸಾಗಣೆ ಮಾಡುವ ಲಾರಿ, ಟಿಪ್ಪರ್ ಗಳನ್ನು ಒನ್ ಸ್ಟೇಟ್ ಒನ್ ಜಿಪಿಎಸ್ ವ್ಯವಸ್ಥೆಗೆ ಒಳಪಡಿಸುವದರಿಂದ ಅಕ್ರಮ ಸಾಗಣೆ ಹಾಗೂ ಸೋರಿಕೆ ತಡೆಗಟ್ಟುವುದರೊಂದಿಗೆ ಆದಾಯ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.

ನಗರದ ಖನಿಜ ಭವನದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಒನ್ ಸ್ಟೇಟ್ ಒನ್ ಜಿಪಿಎಸ್ ಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ಹೊಸ ಬದಲಾವಣೆಯೊಂದಿಗೆ ಸಾಗುವುದು ಅತ್ಯಂತ ಅಗತ್ಯವಾಗಿದೆ. ಖನಿಜ ಸಾಗಣೆ ವಾಹನಗಳನ್ನು ತಂತ್ರಾಂಶದಲ್ಲಿ ಕಡ್ಡಾಯವಾಗಿ ನೋಂದಾಯಿಸಬೇಕು. ಸೋರಿಕೆ ತಡೆಗಟ್ಟಲು ಅಧಿಕಾರಿಗಳು ಕಣ್ಗಾವಲು ಹಾಕಬೇಕು ಎಂದು ಸೂಚಿಸಿದರು.

ಗಣಿ ಗುತ್ತಿಗೆ ಪ್ರದೇಶದಿಂದ ಅಗತ್ಯ ಸ್ಥಳ ತಲುಪಿರುವುದನ್ನು ತಂತ್ರಾಂಶದಿಂದ ಖಾತರಿಪಡಿಸಿಕೊಳ್ಳಬಹುದು. ಗುತ್ತಿಗೆ ಪ್ರದೇಶ ಹೊರತುಪಡಿಸಿ ಇತರೆ ಪ್ರದೇಶಗಳಿಂದ ಖನಿಜ ಸಾಗಾಣಿಕೆ ಮಾಡುವ ವಾಹನಗಳ ಚಲನವಲನಗಳ ಬಗ್ಗೆ ನಿಗಾವಹಿಸಲು ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಅನಧಿಕೃತ ಗಣಿಗಾರಿಕೆ ನಡೆಯುವ ಸ್ಥಳಗಳಲ್ಲಿ ವಾಹನಗಳ ಸಂಚಾರದ ಮೇಲೆ ನಿಗಾವಹಿಸಲು ಮತ್ತು ಅಕ್ರಮ ಸಾಗಾಣಿಕೆ ನಿಯಂತ್ರಿಸಲು, ಖನಿಜ ಸಾಗಾಣಿಕೆ ಪರವಾನಿಗೆಗಳನ್ನು ಮರು ಬಳಕೆ ಮೇಲೆ ನಿಗಾವಹಿಸಲು ಸಹಕಾರಿಯಾಗಲಿದೆ ಎಂದರು.

ವಾರ್ಷಿಕ ವೆಚ್ಚ ಲಾರಿ ಮಾಲೀಕರು ಭರಿಸಬೇಕು: ಒಂದು ಬಾರಿಗೆ ವಾಹನ ನೋಂದಣಿ ಶುಲ್ಕ ಪಡೆಯಲು ತಂತ್ರಾಂಶ ಅಭಿವೃದ್ಧಿಪಡಿಸುವ, ವಾರ್ಷಿಕ ನಿರ್ವಹಣೆ, ಮಾನವ ಸಂಪನ್ಮೂಲ, ಇತರೆ ವಿಷಯಗಳನ್ನು ಒಳಗೂಂಡ ವಾರ್ಷಿಕ ವೆಚ್ಚವನ್ನು ಲಾರಿ ಮಾಲೀಕರಿಂದ ಭರಿಸಲು ತೀರ್ಮಾನಿಸಲಾಗಿದೆ. ವಾಹನಗಳ ನೋಂದಣಿ ಸಮಯದಲ್ಲಿ ಒಂದು ಬಾರಿಗೆ 100 ರೂ ನೋಂದಣಿ ಶುಲ್ಕ, 500 ರೂ ವಾರ್ಷಿಕ ನಿರ್ವಹಣೆ ವೆಚ್ಚವನ್ನು ವಾಹನ ಮಾಲೀಕರು ಪಾವತಿಸಬೇಕು. ಈ ಸಂಬಂಧ ಎಲ್ಲಾ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಮಾರ್ಗಸೂಚಿ ನೀಡಲಾಗಿದೆ ಎಂದರು.

ನೋಂದಣಿಗೆ ಒಂದು ತಿಂಗಳು ಕಾಲಾವಕಾಶ ನೀಡಿದ್ದು, ಉಲ್ಲಂಘನೆ ಮಾಡಲಾದ ವಾಹನಗಳ ಮೇಲೆ ಕಾಯ್ದೆ ಮತ್ತು ನಿಯಮಗಳನ್ವಯ ಸೂಕ್ತ ಕ್ರಮ ಕೈಗೊಳ್ಳಲು ಈಗಾಗಲೇ ಇಲಾಖೆಯ ಜಿಲ್ಲಾ ಕಚೇರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಕರ್ನಾಟಕ ಖನಿಜ ಸಂಪತ್ಭರಿತ ರಾಜ್ಯವಾಗಿದ್ದು, ಮುಖ್ಯವಾಗಿ ಕಬ್ಬಿಣ, ಮ್ಯಾಂಗನೀಸ್, ಸುಣ್ಣದಕಲ್ಲು, ಕಟ್ಟಡ ಕಲ್ಲು, ಅಲಂಕಾರಿಕಾ ಶಿಲೆ, ಮರಳು, ಎಂ-ಸ್ಯಾಂಡ್ ಇತ್ಯಾದಿ ಖನಿಜಗಳಿಗೆ ಗುತ್ತಿಗೆ, ಪರವಾನಿಗೆ ನೀಡಲಾಗಿದೆ. ರಾಜ್ಯಾದ್ಯಂತ ಖನಿಜಾಧಾರಿತ ಕಾರ್ಖಾನೆಗಳು, ಸಂಸ್ಕರಣಾ ಘಟಕಗಳು, ಕ್ರಷರ್ ಘಟಕಗಳು, ಪಾಲಿಷಿಂಗ್ ಯುನಿಟ್ ಗಳಿಗೆ ಖನಿಜ ಸಾಗಾಣಿಕೆಯು ಬಹುತೇಕ ರಸ್ತೆ ಮೂಲಕ ಸಾಗಾಣಿಕೆಯಾಗುತ್ತಿದೆ ಎಂದು ತಿಳಿಸಿದರು.

ಅಕ್ರಮ ಖನಿಜ ಸಾಗಣೆ ತಡೆಗಟ್ಟಲು ಈ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಬೇಕಾಗಿದೆ. ಅಧಿಕಾರಿ ವರ್ಗ ಹೊಣೆಗಾರಿಕೆ ಮರೆಯಬಾರದು. ನಾಮಕಾವಸ್ತೆಯಿಂದ ಕೆಲಸ ಮಾಡಿದರೆ ಗೌರವ ದೊರೆಯುವುದಿಲ್ಲ. ರಾಜ್ಯ ಮತ್ತು ಬೊಕ್ಕಸಕ್ಕೆ ಇದರಿಂದ ಅನುಕೂಲವಿಲ್ಲ, ಇಂದು ಪುರುಷ ಪ್ರಧಾನ ಸಮಾಜ ಎನ್ನುವುದು ಬದಲಾಗಿದ್ದು, ಎಲ್ಲಾ ಇಲಾಖೆಗಳಲ್ಲಿ ಮಹಿಳೆಯರು ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಶಾಶ್ವತವಾಗಿ ಜನರ ಮನಸ್ಸಿನಲ್ಲಿ ಉಳಿಯುವಂತೆ ಕರ್ತವ್ಯ ನಿರ್ವಹಿಸಿ ಎಂದು ಸಚಿವರು ತಿಳಿಸಿದರು.

ಇದನ್ನೂಓದಿ:ರೈತರಿಂದ ಈರುಳ್ಳಿ ಖರೀದಿಗೆ ಮುಂದಾದ ಕೇಂದ್ರ ಸರ್ಕಾರ: ಬೆಲೆ ಕುಸಿತ ತಡೆಗೆ ಕ್ರಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.