ETV Bharat / state

ಕಳೆದ ವರ್ಷದ ಕರ್ನಾಟಕದಲ್ಲಿ ನಡೆದ ಅಪರಾಧ ಪ್ರಕರಣಗಳೆಷ್ಟು? ಕುತೂಹಲಕಾರಿ ಸಂಗತಿ ತಿಳಿಸುತ್ತೆ NCRB ವರದಿ - 2020 ರಲ್ಲಿ ಕರ್ನಾಟಕದಲ್ಲಿ ನಡೆದ ಅಪರಾಧ ಪ್ರಕರಣಗಳು

ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB), 'ಭಾರತದಲ್ಲಿ ಅಪರಾಧ' ಕೃತ್ಯಗಳ ಅಂಕಿಅಂಶಗಳ-2020 ರ ವರದಿ ಬಿಡುಗಡೆ ಮಾಡಿದೆ.

2020 ರಲ್ಲಿ ಕರ್ನಾಟಕದಲ್ಲಿ ನಡೆದ ಅಪರಾಧ ಪ್ರಕರಣಗಳ NCRB ವಿಸ್ತೃತ ವರದಿ

author img

By

Published : Sep 15, 2021, 7:52 PM IST

Updated : Sep 17, 2021, 12:35 PM IST

2020ರ ಜನವರಿ 1 ರಿಂದ ಡಿಸೆಂಬರ್ 31ರವರೆಗಿನ ಒಟ್ಟು ಅಪರಾಧ ಪ್ರಕರಣಗಳ ಬಗೆಗಿನ ವಿಸ್ತೃತ ವರದಿಯನ್ನು ಎನ್‌ಸಿಆರ್​ಬಿ ಪ್ರಕಟಿಸಿದೆ. ಈ ವರದಿಯ ಪ್ರಕಾರ, 2016 ರಿಂದ 2019ರ ಅವಧಿಗೆ ಹೋಲಿಸಿದರೆ 2020ರಲ್ಲಿ ಕರ್ನಾಟಕದಲ್ಲಿ ಅಪರಾಧ ಕೃತ್ಯಗಳ ಸಂಖ್ಯೆ ಗಣನೀಯವಾಗಿ ತಗ್ಗಿದೆ.

2016 ರಿಂದ 2020 ರವರೆಗಿನ ಅಪರಾಧ ಪ್ರಕರಣಗಳು:

20162017201820192020
ಐಪಿಸಿ ಸೆಕ್ಷನ್​ (IPC)148402 146354126534120165106350
ವಿಶೇಷ ಮತ್ತು ಸ್ಥಳೀಯ ಕಾನೂನುಗಳು (SLL)31077 37709368824352643730
ಒಟ್ಟು179479184063163416163691150080

2020 ರಲ್ಲಿ ಕರ್ನಾಟಕದಲ್ಲಿ 1,06,350 ಭಾರತೀಯ ದಂಡ ಸಂಹಿತೆ (IPC) ಅಡಿಯಲ್ಲಿ ಮತ್ತು 43,730 ವಿಶೇಷ ಮತ್ತು ಸ್ಥಳೀಯ ಕಾನೂನುಗಳು (SLL) ಅಪರಾಧಗಳನ್ನು ಒಳಗೊಂಡು ಒಟ್ಟು 1,50,080 ಅಪರಾಧಗಳು ದಾಖಲಾಗಿವೆ. 2019ರ ಅವಧಿಗೆ ಹೋಲಿಸಿದರೆ, ರಾಜ್ಯದಲ್ಲಿ 2020ರಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. 2019ರಲ್ಲಿ 1,63,691 ರಷ್ಟಿದ್ದ ಕ್ರೈಂ ಕೇಸ್​ಗಳು 2020ರಲ್ಲಿ 1,50,080 ಪ್ರಕರಣಗಳು ದಾಖಲಾಗಿವೆ.

ಅಪಹರಣ, ಅತ್ಯಾಚಾರ, ಕೊಲೆ ಪ್ರಕರಣಗಳು:

2017201820192020
ಒಟ್ಟು6108583257584844
ಕೊಲೆ (ಐಪಿಸಿ ಸೆಕ್ಷನ್ 302)1501142213921420
ವರದಕ್ಷಿಣೆ ಸಾವು (ಐಪಿಸಿ ಸೆಕ್ಷನ್ 304 ಬಿ)53202203178
ಆ್ಯಸಿಡ್ ದಾಳಿ (ಐಪಿಸಿ ಸೆಕ್ಷನ್ 326 ಎ)4896
ಲೈಂಗಿಕ ಕಿರುಕುಳ (ಐಪಿಸಿ ಸೆಕ್ಷನ್ 354 ಎ)809649569470
ಅಪಹರಣ ಪ್ರಕರಣಗಳು3152302730802253
ಮಾನವ ಕಳ್ಳಸಾಗಣೆ (ಐಪಿಸಿ ಸೆಕ್ಷನ್ 370, 370 ಎ)3127 32 13
ಅತ್ಯಾಚಾರ (ಐಪಿಸಿ ಸೆಕ್ಷನ್ 376)558497505504

ಅಪಹರಣ, ಅತ್ಯಾಚಾರ, ಅಸಹಜ ಅಪರಾಧಗಳಂತಹ ಒಟ್ಟು 4844 ಪ್ರಕರಣಗಳು 2020 ರಲ್ಲಿ ದಾಖಲಾಗಿವೆ. 2020 ರಲ್ಲಿ 3080 ಅಪಹರಣ ಪ್ರಕರಣಗಳು, 1420 ಕೊಲೆ ಪ್ರಕರಣಗಳು, 504 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.

ಕೊಲೆ ಪ್ರಕರಣಗಳು:

20162017201820192020
ಕೊಲೆ ಪ್ರಕರಣಗಳು 1573 1384133413141331

ಕೊಲೆ ಕಾರಣವಾದ ಕಾರಣಗಳು:

2020 ರಲ್ಲಿ ಒಟ್ಟು 1331 ಕೊಲೆ ಪ್ರಕರಣಗಳು ದಾಖಲಾಗಿದ್ದು, 2019 ಕ್ಕೆ ಹೋಲಿಸಿದರೆ ಇಳಿಕೆ ಕಂಡುಬಂದಿದೆ (1314 ಪ್ರಕರಣಗಳು). ವಿವಾದವೇ (531 ಪ್ರಕರಣಗಳು) ಹೆಚ್ಚಿನ ಸಂಖ್ಯೆಯ ಪ್ರಕರಣಗಳಲ್ಲಿ ಕೊಲೆ ಮಾಡಲು ಸ್ಫೂರ್ತಿ ನೀಡಿದ ವಿಚಾರವಾಗಿದೆ.

ಒಟ್ಟು ಕೊಲೆ ಪ್ರಕರಣಗಳುವಿವಾದಪ್ರೇಮ ಪ್ರಕರಣಗಳುವರದಕ್ಷಿಣೆಕಾರಣವೇ ಇಲ್ಲದೇ ಕೊಲೆ
20171384457483535
20181334481601873
20191314446521946
20201331531621620

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು:

2019ಕ್ಕೆ ಹೋಲಿಸಿದರೆ 2020ರಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆ. 2016 ರಿಂದ ಈಚೆಗೆ 2020 ರ ವರೆಗೆ ಮಹಿಳೆಯ ಮೇಲೆ ಎಸಗಿದ ಅಪರಾಧಗಳ ಸಂಖ್ಯೆ ಕಡಿಮೆಯಾಗಿದೆ.

20162017201820192020
ಒಟ್ಟು ಪ್ರಕರಣಗಳು14131 14078135141382812680

2020 ರಲ್ಲಿ ಮಹಿಳೆಯರ ವಿರುದ್ಧ ಒಟ್ಟು 12,680 ಅಪರಾಧ ಪ್ರಕರಣಗಳು ದಾಖಲಾಗಿದ್ದು, 2019 ರಲ್ಲಿ ವರದಿಯಾದ 13,828 ಕೇಸ್​ಗಳಿಗೆ ಹೋಲಿಸಿದರೆ ಇಳಿಕೆ ಕಂಡುಬಂದಿದೆ. ಮಹಿಳೆಯರ ವಿರುದ್ಧದ ಅಪರಾಧಗಳ ಅಡಿಯಲ್ಲಿ ಹೆಚ್ಚಿನ ಪ್ರಕರಣಗಳು ಆಕೆಯ ಮೇಲೆ ವಿನಾಕಾರಣ ಆಕ್ರೋಶ ವ್ಯಕ್ತಪಡಿಸುವ ಉದ್ದೇಶದಿಂದ ಮಹಿಳೆಯರ ಮೇಲೆ ಹಲ್ಲೆ (5248 ಪ್ರಕರಣಗಳು) ನಂತರ ಪತಿ ಅಥವಾ ಆತನ ಸಂಬಂಧಿಕರ ಕ್ರೌರ್ಯ (2092 ಪ್ರಕರಣಗಳು) ಮತ್ತು ಮಹಿಳೆಯರ ಅಪಹರಣ (951 ಪ್ರಕರಣಗಳು) ಮತ್ತು ಅತ್ಯಾಚಾರ (504 ಪ್ರಕರಣಗಳು) ಆಗಿವೆ.

ಅತ್ಯಾಚಾರ ಪ್ರಕರಣದಲ್ಲಿ ಕೊಲೆವರದಕ್ಷಿಣೆ ಕೊಲೆಆತ್ಮಹತ್ಯೆಗೆ ಪ್ರೇರಣೆಮಹಿಳೆಯರ ಮೇಲೆ ಹಲ್ಲೆಅತ್ಯಾಚಾರ ಪತಿ ಅಥವಾ ಆತನ ಸಂಬಂಧಿಕರ ಕ್ರೌರ್ಯಮಹಿಳೆಯರ ಅಪಹರಣ
201816202351533849720751285
201923203343518650525031110
2020717826352485042092951

ಸೈಬರ್ ಅಪರಾಧ ಕೃತ್ಯಗಳು:

ಎನ್‌ಸಿಆರ್‌ಬಿ ಮಾಹಿತಿಯ ಪ್ರಕಾರ, ಕಳೆದ 4 ವರ್ಷಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. 2020 ರಲ್ಲಿ ರಾಜ್ಯದಲ್ಲಿ 10741 ಸೈಬರ್ ಅಪರಾಧ ಪ್ರಕರಣಗಳು ವರದಿಯಾಗಿವೆ.

20162017201820192020
ಒಟ್ಟು ಪ್ರಕರಣಗಳು 1101 317458391202010741

ಮಕ್ಕಳ ವಿರುದ್ಧ ಅಪರಾಧ ಪ್ರಕರಣಗಳು:

ಎನ್‌ಸಿಆರ್‌ಬಿ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ ಮಕ್ಕಳ ಮೇಲಿನ ಅಪರಾಧ ಪ್ರಕರಣಗಳು ಕ್ರಮೇಣ ಹೆಚ್ಚುತ್ತಿವೆ. 2016 ರಿಂದ 2019ರ ವರೆಗಿನ ಅಂಕಿಅಂಶದಲ್ಲಿ ಈ ಮಕ್ಕಳ ಮೇಲೆ ಎಸಗಿರುವ ಅಪರಾಧಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಆದರೆ 2019ಕ್ಕೆ ಹೋಲಿಸಿದರೆ 2020ರಲ್ಲಿ ಮಕ್ಕಳ ವಿರುದ್ಧ ಅಪರಾಧ ಪ್ರಕರಣಗಳು ಇಳಿಮುಖಗೊಂಡಿವೆ.

20162017201820192020
ಒಟ್ಟು ಪ್ರಕರಣಗಳು 4455 5890 613163055471

ಎಸ್‌ಸಿ ಮತ್ತು ಎಸ್‌ಟಿ ವಿರುದ್ಧ ಅಪರಾಧ ಪ್ರಕರಣಗಳು:

2018 ರ ದತ್ತಾಂಶಕ್ಕೆ ಹೋಲಿಸಿದರೆ 2019 ರ ವರ್ಷದಲ್ಲಿ (1504 ಪ್ರಕರಣಗಳು) ಎಸ್‌ಸಿ ವಿರುದ್ಧದ ಅಪರಾಧಗಳ ಸಂಖ್ಯೆ ಕಡಿಮೆಯಾಗಿದೆ (1325 ಪ್ರಕರಣಗಳು). ಎಸ್‌ಸಿ ವಿರುದ್ಧ 2017 ಕ್ಕೆ (1878 ಪ್ರಕರಣಗಳು) ಹೋಲಿಸಿದರೆ, ಪ್ರಸ್ತುತ ಸಂಖ್ಯೆ ಸಾಕಷ್ಟು ಇಳಿಮುಖವಾಗಿದೆ. ಮತ್ತೊಂದೆಡೆ, ಎಸ್‌ಟಿ ವಿರುದ್ಧದ ಅಪರಾಧವು 2019 ರಲ್ಲಿ 327 ಪ್ರಕರಣಗಳಿಂದ 2020ರಲ್ಲಿ 293 ಪ್ರಕರಣಗಳಿಗೆ ಇಳಿದಿದೆ.

20162017201820192020
ಎಸ್​ಸಿ1869 1878132515041398
ಎಸ್​ಟಿ374 401322327293

ಮಕ್ಕಳ ಅಪಹರಣ ಪ್ರಕರಣಗಳು:

2020 ರಲ್ಲಿ ಒಟ್ಟು 1638 ಮಕ್ಕಳು (804 ಗಂಡು, 834 ಹೆಣ್ಣು ಮತ್ತು 0 ತೃತೀಯ ಲಿಂಗಿ) ಕಾಣೆಯಾಗಿದ್ದಾರೆ. 2019 ಕ್ಕೆ ಹೋಲಿಸಿದರೆ 2020 ರಲ್ಲಿ ಕಾಣೆಯಾದ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

ಗಂಡುಹೆಣ್ಣುತೃತೀಯ ಲಿಂಗಿಒಟ್ಟು
2017808 896 0 1704
2018677 946 01623
201967770351385
202080483401638

ಹಿರಿಯ ನಾಗರಿಕರ ವಿರುದ್ಧ ಅಪರಾಧ ಕೃತ್ಯಗಳು:

2019 ರಲ್ಲಿ ದಾಖಲಾದ 1172 ಪ್ರಕರಣಗಳಿಗೆ ಹೋಲಿಸಿದರೆ, 2020 ರಲ್ಲಿ ಕರ್ನಾಟಕದಲ್ಲಿ ಹಿರಿಯ ನಾಗರಿಕರ ವಿರುದ್ಧ ಒಟ್ಟು 853 ಅಪರಾಧ ಪ್ರಕರಣಗಳು ದಾಖಲಾಗಿವೆ. ಇದು ಸಂಖ್ಯೆಯಲ್ಲಿ ಹೆಚ್ಚಳವನ್ನು ತೋರಿಸುತ್ತದೆ.

20162017201820192020
ಒಟ್ಟು ಪ್ರಕರಣಗಳು818 89510381172853

ವಿದೇಶಿಗರ ವಿರುದ್ಧ ನಡೆದ ಕ್ರೈಂ:

2019 ರಲ್ಲಿ 46 ಪ್ರಕರಣಗಳಿಗೆ ಹೋಲಿಸಿದರೆ 2020 ರಲ್ಲಿ ವಿದೇಶಿಗರ ವಿರುದ್ಧ ನಡೆದ ಅಪರಾಧ ಕೃತ್ಯಗಳ ಸಂಖ್ಯೆ 19 ಕ್ಕೆ ಇಳಿಕೆ ಕಂಡಿದೆ.

20162017201820192020
ಕೊಲೆ ಪ್ರಕರಣಗಳು 12 30284619

ಈ ಮೂಲಕ ಅಪರಾಧ ಪ್ರಕರಣಗಳಲ್ಲಿ ಇಳಿಕೆ ಕಂಡಿದ್ದರು ಸಹ, ಕೆಲವು ವಿಭಾಗಗಳಲ್ಲಿ ಕ್ರಿಮಿನಲ್​ಗಳ ಹಾವಳಿ ಕಡಿಮೆಯಾಗಿಲ್ಲ.

Last Updated : Sep 17, 2021, 12:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.