ETV Bharat / state

ಕಾರ್ಪೊರೇಟರ್ ಮನೆ ಮೇಲೆ ಎನ್​ಸಿಬಿ ದಿಢೀರ್ ದಾಳಿ: ಕೇಶವಮೂರ್ತಿ ಪುತ್ರನಿಗೆ ನೋಟಿಸ್

ಡ್ರಗ್ಸ್​ ಪ್ರಕರಣದಲ್ಲಿ ಇತ್ತೀಚೆಗೆ ಬಂಧಿಸಲ್ಪಟ್ಟ ಅಬ್ದುಲ್ ರೆಹಮಾನ್, ರಾಜಾಜಿನಗರದ ಕಾರ್ಪೊರೇಟರ್ ಕೇಶವಮೂರ್ತಿ ಅವರ ಮಗ ಯಶಸ್ ಸಂಪರ್ಕದಲ್ಲಿದ್ದ ಎಂಬ ಅಂಶ ಬೆಳಕಿಗೆ ಬಂದಿತ್ತು. ಇದೀಗ ಕೇಶವಮೂರ್ತಿ ಮನೆ ಮೇಲೆ ಎನ್​ಸಿಬಿ ದಿಢೀರ್​ ದಾಳಿ ನಡೆಸಿದೆ.

author img

By

Published : Sep 6, 2020, 12:09 PM IST

Updated : Sep 6, 2020, 12:38 PM IST

ಬೆಂಗಳೂರು: ಡ್ರಗ್ಸ್ ಖರೀದಿ ಹಾಗೂ‌ ಮಾರಾಟದ ಅನುಮಾನದ ಮೇಲೆ ಕಾರ್ಪೊರೇಟರ್ ಮನೆ ಮೇಲೆ ಬೆಂಗಳೂರು ವಲಯದ ಎನ್​ಸಿಬಿ ಅಧಿಕಾರಿಗಳು ಸರ್ಚ್ ವಾರೆಂಟ್ ಪಡೆದು ದಾಳಿ‌ ನಡೆಸಿದ್ದಾರೆ.

NCB notice to corporator son
ಕಾರ್ಪೊರೇಟರ್ ಕೇಶವಮೂರ್ತಿ ಪುತ್ರನಿಗೆ ಎನ್​ಸಿಬಿ ನೋಟಿಸ್

ಡ್ರಗ್ಸ್ ಸಾಗಣೆ ಪ್ರಕರಣದಲ್ಲಿ ಇತ್ತೀಚೆಗೆ ಮುಂಬೈ‌ನಲ್ಲಿ ಸೆರೆ ಹಿಡಿದಿದ್ದ ಅಬ್ದುಲ್ ರೆಹಮಾನ್​ನನ್ನು ತೀವ್ರ ವಿಚಾರಣೆ ನಡೆಸಿದ ಎನ್​ಸಿಬಿ ಅಧಿಕಾರಿಗಳು ರಾಜಾಜಿನಗರದ ಕಾರ್ಪೊರೇಟರ್ ಕೇಶವಮೂರ್ತಿ ಪುತ್ರ ಯಶಸ್ ಸಂಪರ್ಕದಲ್ಲಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ.‌ ಇದಕ್ಕೆ ಪೂರಕವಾಗಿ ಡ್ರಗ್ಸ್ ಸಾಗಣೆಯಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವ ಸಾಕ್ಷ್ಯಾಧಾರ ಲಭ್ಯವಾಗಿವೆ ಎನ್ನಲಾಗ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ವಲಯದ ಎನ್​ಸಿಬಿ‌ ಅಧಿಕಾರಿಗಳು ಸರ್ಚ್ ವಾರೆಂಟ್ ಪಡೆದು ಕಾರ್ಪೊರೇಟರ್ ಮನೆಯಲ್ಲಿ ಶೋಧ ನಡೆಸಿದ್ದಾರೆ‌.

ಪರಿಶೀಲನೆ ವೇಳೆ ಮನೆಯಲ್ಲಿ ಯಾವುದೇ ರೀತಿಯ ಮಾದಕ ವಸ್ತುಗಳು ಪತ್ತೆಯಾಗಿಲ್ಲ. ಮುಂಬೈ ಎನ್​ಸಿಬಿ ಕಚೇರಿಗೆ ಸೆ.7 ರಂದು ವಿಚಾರಣೆಗೆ ಹಾಜರಾಗುವಂತೆ ಎನ್​ಸಿಬಿ, ಕೇಶವಮೂರ್ತಿ ಪುತ್ರ ಯಶಸ್​ಗೆ ನೋಟಿಸ್ ನೀಡಿದೆ.

Last Updated : Sep 6, 2020, 12:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.