ಬೆಂಗಳೂರು: ಡ್ರಗ್ಸ್ ಜಾಲದ ಬಗ್ಗೆ ಯಾವುದೇ ಮಾಹಿತಿ ಇದ್ದರೆ ಪೊಲೀಸ್ ಇಲಾಖೆಗೆ ನೀಡಿ, ನಿಮಗೆ ಏನು ತೊಂದರೆ ಆಗದಂತೆ ಪಕ್ಷ ನೋಡಿಕೊಳ್ಳಲಿದೆ, ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನದಲ್ಲಿ ಜೊತೆಯಾಗಿ ಎಂದು ರಾಜ್ಯದ ನಾಗರಿಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕರೆ ನೀಡಿದ್ದಾರೆ.
ಡ್ರಗ್ಸ್ ಸೇವನೆಯಿಂದ ಅಪರಾಧ ಪ್ರಕರಣಗಳು ಹೆಚ್ಚುತ್ತವೆ ಹಾಗಾಗಿ ಉತ್ತರಪ್ರದೇಶದಲ್ಲಿ ಅಪರಾಧಿಗಳಿಗೆ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚಳಿ ಬಿಡಿಸಿದಂತೆ ನಮ್ಮ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ಮೇರೆಗೆ ನಮ್ಮ ಪೊಲೀಸ್ ಇಲಾಖೆ ಡ್ರಗ್ಸ್ ಜಾಲದ ವಿರುದ್ಧ ಅಕ್ಷರಶಃ ಸಮರ ಸಾರಿದೆ ಎಂದು ಕಟೀಲ್ ಟ್ವೀಟ್ ಮಾಡಿದ್ದಾರೆ.
ಡ್ರಗ್ಸ್ ಖರೀದಿಸುವವರು, ಮಾರಾಟ ಮಾಡುವವರು, ಪೂರೈಕೆ ಮಾಡುವವರು ನಮ್ಮ ಪಾಲಿಗೆ ಸಮಾಜ ದ್ರೋಹಿಗಳು ಅವರು ಯುವಜನಾಂಗದ ಭವಿಷ್ಯದ ಹಾದಿಯಲ್ಲಿ ಮುಳ್ಳುಗಳಿದ್ದಂತೆ, ಆ ಮುಳ್ಳುಗಳನ್ನು ಕೀಳಲು ಪೊಲೀಸ್ ಇಲಾಖೆಗೆ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಸ್ವಾತಂತ್ರ್ಯ ನೀಡಿರುವುದು ನಮ್ಮ ಪಕ್ಷ ಲಕ್ಷಾಂತರ ತಾಯಂದಿರ ಸಹೋದರಿಯರ ಜೊತೆ ಇದೆ ಎನ್ನುವುದಕ್ಕೆ ಸಾಕ್ಷಿ. ಇದು ಅಪರಾಧ ಜಗತ್ತಿನ ವಿರುದ್ಧ ನಮ್ಮ ಹೋರಾಟ. ನಮ್ಮ ರಾಜ್ಯದ ಯಾವುದೇ ಊರು, ತಾಲೂಕು, ಜಿಲ್ಲೆಯ ಕಾರ್ಯಕರ್ತರು ನಾಗರಿಕರು ತಮ್ಮಲ್ಲಿ ಡ್ರಗ್ಸ್ ಜಾಲದ ಬಗ್ಗೆ ಯಾವುದೇ ಮಾಹಿತಿ ಇದ್ದರೆ ಪೊಲೀಸ್ ಇಲಾಖೆಗೆ ನೀಡಿ ನಿಮಗೆ ಏನು ತೊಂದರೆ ಆಗದಂತೆ ಪಕ್ಷ ನೋಡಿಕೊಳ್ಳಲಿದೆ ಎಂದು ಅಭಯ ನೀಡಿದ್ದಾರೆ.
ಡ್ರಗ್ಸ್ ಜಾಲದ ಬಗ್ಗೆ ಮಾಹಿತಿ ನೀಡಿ, ನಿಮಗೆ ತೊಂದರೆಯಾಗದಂತೆ ಪಕ್ಷ ನೋಡಿಕೊಳ್ಳಲಿದೆ; ಕಟೀಲ್ - drug scandal latest updates
ಡ್ರಗ್ಸ್ ಜಾಲದ ಬಗ್ಗೆ ಯಾವುದೇ ಮಾಹಿತಿ ಇದ್ದರೆ ಪೊಲೀಸ್ ಇಲಾಖೆಗೆ ನೀಡಿ ಎಂದು ಸಾರ್ವಜನಿಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕರೆ ನೀಡಿದ್ದು, ಈ ಜಾಲದ ಬಗ್ಗೆ ಮಾಹಿತಿ ನೀಡಿದವರಿಗೆ ಏನೂ ತೊಂದರೆಯಾಗದಂತೆ ರಕ್ಷಣೆ ಕೊಡುವುದಾಗಿ ಅಭಯ ನೀಡಿದ್ದಾರೆ.