ETV Bharat / state

ರಾಷ್ಟ್ರೀಯ ರ‍್ಯಾಲಿ ಸ್ಪ್ರಿಂಟ್ ಚಾಂಪಿಯನ್‌ಶಿಪ್​: ಬೆಂಗಳೂರಿನ ರಾಜೇಂದ್ರ ಅವರಿಗೆ ಮೊದಲ ಸ್ಥಾನ - ಸ್ಪ್ರಿಂಟ್ ರೇಸ್‌

ಬೆಂಗಳೂರಿನಲ್ಲಿ ನಡೆದ ಎಫ್‌ಎಂಎಸ್‌ಸಿಐ ಭಾರತೀಯ ರಾಷ್ಟ್ರೀಯ ರ‍್ಯಾಲಿ ಸ್ಪ್ರಿಂಟ್ ಚಾಂಪಿಯನ್‌ಶಿಪ್ ದಕ್ಷಿಣ ವಲಯ ಸುತ್ತಿನ 550 ಸಿಸಿ ಮುಕ್ತ ವಿಭಾಗದಲ್ಲಿ ಬೆಂಗಳೂರಿನ ರಾಜೇಂದ್ರ.ಆರ್ ಮೊದಲ ಸ್ಥಾನ ಪಡೆದಿದ್ದಾರೆ‌.

ರಾಷ್ಟ್ರೀಯ ರ‍್ಯಾಲಿ ಸ್ಪ್ರಿಂಟ್ ಚಾಂಪಿಯನ್‌ಶಿಪ್

author img

By

Published : Jul 3, 2023, 8:30 AM IST

Updated : Jul 3, 2023, 9:15 AM IST

ರಾಷ್ಟ್ರೀಯ ರ‍್ಯಾಲಿ ಸ್ಪ್ರಿಂಟ್ ಚಾಂಪಿಯನ್‌ಶಿಪ್

ಬೆಂಗಳೂರು: ಭಾರತದ ಅಗ್ರ ಬೈಕರ್‌ಗಳಲ್ಲಿ ಒಬ್ಬರೆನಿಸಿರುವ ಬೆಂಗಳೂರಿನ ರಾಜೇಂದ್ರ. ಆರ್ ಅವರು ಭಾನುವಾರ ನಡೆದ ಎಫ್‌ಎಂಎಸ್‌ಸಿಐ ರೇ ಭಾರತೀಯ ರಾಷ್ಟ್ರೀಯ ರ‍್ಯಾಲಿ ಸ್ಪ್ರಿಂಟ್ ಚಾಂಪಿಯನ್‌ಶಿಪ್ ದಕ್ಷಿಣ ವಲಯ ಸುತ್ತಿನಲ್ಲಿ ಪ್ರಶಸ್ತಿ ಜಯಿಸಿದರು. 550 ಸಿಸಿ ಮುಕ್ತ ವಿಭಾಗದಲ್ಲಿ ರಾಜೇಂದ್ರ ಅತ್ಯುತ್ತಮ ಸಮಯದೊಂದಿಗೆ ಮೊದಲ ಸ್ಥಾನ ಪಡೆದಿದ್ದಾರೆ‌. ನಗರದ ಹೊರವಲಯದಲ್ಲಿರುವ ಸರ್ಜಾಪುರದಲ್ಲಿ ನಡೆದ ಸ್ಪರ್ಧೆಯಲ್ಲಿ 10 ಕಿಲೋ ಮೀಟರ್ ದೂರವನ್ನು ಕೇವಲ 7 ನಿಮಿಷ 33.59 ಸೆಕೆಂಡ್‌ಗಳಲ್ಲಿ ಇವರು ಪೂರ್ತಿಗೊಳಿಸಿದರು.

ರ‍್ಯಾಲಿಯ ಟಿ20 ಮಾದರಿ ಎಂದೇ ಕರೆಸಿಕೊಳ್ಳುವ ಸ್ಪ್ರಿಂಟ್ ರೇಸ್‌ನಲ್ಲಿ ಭಾರತದ ಅನೇಕ ಪ್ರಮುಖ ಬೈಕರ್‌ಗಳು ಕಣಕ್ಕಿಳಿದು, ರೇಸ್ ಯಶಸ್ವಿಗೊಳಿಸಿದರು. 550 ಸಿಸಿವರೆಗಿನ ವಿಭಾಗದ ‘ಎ’ ಗುಂಪಿನಲ್ಲಿ ಮೊದಲ ಸ್ಥಾನ ಪಡೆದ ಸುಹೇಲ್, ಆ ಬಳಿಕ ಬುಲೆಟ್ ವಿಭಾಗದಲ್ಲಿ 2ನೇ ಹಾಗೂ 261 ಸಿಸಿಯಿಂದ 400ಸಿಸಿವರೆಗಿನ ರೇಸ್‌ನಲ್ಲಿ 3ನೇ ಸ್ಥಾನ ಪಡೆದರು.

ರೇಸ್ ಆಯೋಜಕ ಹಾಗೂ ಪ್ರಚಾರಕ ಮೋಟರ್‌ಸ್ಪೋರ್ಟ್ ಐಎನ್‌ಸಿಯ ಜೈದಾಸ್ ಮೆನನ್ ಮಾತನಾಡಿ, "ಬಹಳ ಉತ್ಸಾಹದಿಂದ ಕೂಡಿದ್ದ ದಿನವಿದು. ಸುಮಾರು 120 ಬೈಕರ್‌ಗಳು ಸ್ಪರ್ಧಿಸಿದ್ದರು. ರ‍್ಯಾಲಿ ಟಿ20 ಸ್ಪ್ರಿಂಟ್ ಪ್ರೇಕ್ಷಕರಿಗೆ ಮನರಂಜನೆ ಒದಗಿಸಿತು. ಅಭಿಮಾನಿಗಳಿಗೆ ಬಹಳ ಹತ್ತಿರದಿಂದ ಭಾರತದ ಅಗ್ರ ರೈಡರ್‌ಗಳನ್ನು ನೋಡುವ ಅವಕಾಶ ಸಿಕ್ಕಿತು" ಎಂದರು.

550 ಸಿಸಿ ಓಪನ್ ವಿಭಾಗ ಸೇರಿ ಎರಡು ವಿಭಾಗಗಳಲ್ಲಿ ಸಿನಾನ್ ಫ್ರಾನ್ಸಿಸ್ ಸಹ ಅಮೂಲ್ಯ ಅಂಕಗಳನ್ನು ಕಲೆಹಾಕಿದರು. ಮಹಿಳೆಯರ 260 ಸಿಸಿ ವರೆಗಿನ ವಿಭಾಗದಲ್ಲಿ ಯುವ ಹಾಗೂ ಉತ್ಸಾಹಿ ಸ್ಪರ್ಧಿಗಳನ್ನು ಹಿಂದಿಕ್ಕಿ ರೀಹಾನಾ ಪ್ರಶಸ್ತಿ ಎತ್ತಿಹಿಡಿದರು. ಇವರು 8 ನಿಮಿಷ 49.29 ಸೆಕೆಂಡ್‌ಗಳಲ್ಲಿ ರೇಸ್ ಪೂರ್ತಿಗೊಳಿಸಿದರು.

ಫಲಿತಾಂಶಗಳು:
ಮುಕ್ತ ವಿಭಾಗ 550 ಸಿಸಿ ವರೆಗೂ: 1. ರಾಜೇಂದ್ರ. ಆರ್ (07:33.59), 2. ಸ್ಯಾಮುಯಲ್ ಜೇಕಬ್, 3.ಸಿನಾನ್ ಫ್ರಾನ್ಸಿಸ್.

ಗುಂಪು ‘ಎ’ 550 ಸಿಸಿ ವರೆಗೂ: 1. ಸುಹೇಲ್ ಅಹ್ಮದ್ (07:51.57), 2. ಸಿನಾನ್ ಫ್ರಾನ್ಸಿಸ್, 3. ಕೌಸ್ತುಭ ಎಂ.

ಗುಂಪು ‘ಬಿ’ 261 ಸಿಸಿ ಯಿಂದ 400 ಸಿಸಿ: 1. ನರೇಶ್ ವಿ.ಎಸ್ (08:09.32), 2. ಅಖಂಡ ಪ್ರತಾಪ್ ಸಿಂಗ್, 3. ಸುಹೇಲ್ ಅಹ್ಮದ್.

ಗುಂಪು ‘ಸಿ’ 166 ಸಿಸಿ ಯಿಂದ 260 ಸಿಸಿ: 1. ಸಚಿನ್ ಡಿ (07:51.61 ), 2. ಯೋಗೇಶ್ ಪಿ., 3. ನಿತ್ಯನ್ ಎಲ್.

ಗುಂಪು ‘ಡಿ’ 131 ಸಿಸಿ ಯಿಂದ 165 ಸಿಸಿ: 1. ವರುಣ್ ಕುಮಾರ್ (08:12.09), 2. ಅಬ್ರಾರ್ ಪಾಷಾ, 3. ಭರತ್ ಎಲ್.

ಬುಲೆಟ್ ಕ್ಲಾಸ್: 1. ನರೇಶ್ ವಿ.ಎಸ್ (08:03.35), 2. ಸುಹೇಲ್ ಅಹ್ಮದ್, 3. ಅಸಾದ್ ಖಾನ್.

ಸ್ಕೂಟರ್ ಕ್ಲಾಸ್: 1. ಸುಬ್ರಮಣ್ಯ (08:39.07), 2. ಪಿಂಕೇಶ್ ಥಾಕ್ಕರ್, 3. ಕಾರ್ತಿಕ್ ನಾಯ್ಡು.

ಮಹಿಳೆಯರ ವಿಭಾಗ 260 ಸಿಸಿವರೆಗೂ: 1. ರೀಹಾನಾ (08:49.29), 2. ಸ್ನೇಹಾ ಸಿ.ಸಿ, 3. ಶತಾಬ್ದಿ ಸಮಂತಾ.

ವಲಯ ಸ್ಟಾರ್: 1. ಯೋಗೇಶ್ ಪಿ (07:53.90), 2. ಸಂಜಯ್ ಸೋಮಶೇಖರ್, 3. ವಿನಯ್ ಪ್ರಸಾದ್.

ಇದನ್ನೂ ಓದಿ: ಹೊಗೆನಕಲ್​ನಲ್ಲಿ ರೋಮಾಂಚಕ ತೆಪ್ಪಗಳ ರೇಸ್; ಗೆದ್ದವರಿಗೆ 4 ಗ್ರಾಂ ಚಿನ್ನ ಬಹುಮಾನ

Last Updated : Jul 3, 2023, 9:15 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.