ETV Bharat / state

ಪರಿಷತ್ ಚುನಾವಣೆ ಸ್ಪರ್ಧಿಸದಿರಲು ನಾರಾಯಣಸ್ವಾಮಿ ತೀರ್ಮಾನ?! ಮುಂದಿನ ಆಯ್ಕೆ! - ವಿಧಾನ ಪರಿಷತ್ ಚುನಾವಣೆ

2015ರಲ್ಲಿ ಬೆಂಗಳೂರು ನಗರದಿಂದ ವಿಧಾನಪರಿಷತ್​ಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಯ್ಕೆಯಾಗಿ ವಿಧಾನಪರಿಷತ್ ಪ್ರವೇಶ ಮಾಡಿದರು. ಪಕ್ಷ ಇವರನ್ನು 2020ರಲ್ಲಿ ವಿಧಾನ ಪರಿಷತ್ ಪ್ರತಿಪಕ್ಷದ ಸಚೇತಕರನ್ನಾಗಿ ನೇಮಕ ಮಾಡಿತ್ತು.

Legislative Council polls
N ನಾರಾಯಣಸ್ವಾಮಿ
author img

By

Published : Nov 15, 2021, 5:21 AM IST

ಬೆಂಗಳೂರು: ವಿಧಾನ ಪರಿಷತ್ ಪ್ರತಿಪಕ್ಷ ಕಾಂಗ್ರೆಸ್​ನ ಸಚೇತಕ ಎನ್ ನಾರಾಯಣಸ್ವಾಮಿ(N Narayanaswamy) ಮುಂಬರುವ ಪರಿಷತ್​ ಚುನಾವಣೆಯಲ್ಲಿ(Legislative Council polls) ಸ್ಪರ್ಧಿಸದಿರಲು ತೀರ್ಮಾನಿಸಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ವಿಧಾನಪರಿಷತ್​ನ ಉನ್ನತ ಸ್ಥಾನಕ್ಕೇರಿದ ನಾರಾಯಣಸ್ವಾಮಿ ಇದೇ ಬರುವ ಜ.5 ಕ್ಕೆ ತಮ್ಮ ಪರಿಷತ್ ಸದಸ್ಯತ್ವದ ಕಾಲಾವಧಿ ಪೂರ್ಣಗೊಳಿಸಲಿದ್ದಾರೆ. ಮುಂದಿನ ಅವಧಿಗಾಗಿ ಇದೇ ಬರುವ ಡಿಸೆಂಬರ್ 10ರಂದು ಚುನಾವಣೆ ನಡೆಯಲಿದ್ದು ಈ ಚುನಾವಣಾ ಕಣದಿಂದ ಹಿಂದೆ ಸರಿಯಲು ನಾರಾಯಣಸ್ವಾಮಿ ತೀರ್ಮಾನಿಸಿದ್ದಾರೆ ಎಂಬ ಮಾಹಿತಿ ಇದೆ. ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧಿಸಿದರೂ ಪಕ್ಷದ ಸಚೇತಕ ಸ್ಥಾನ ಸಿಗುವ ಅವಕಾಶ ಕಡಿಮೆ ಎನ್ನಲಾಗುತ್ತಿದೆ. ಅಲ್ಲದೇ ಪರಿಷತ್ ಚುನಾವಣೆಗೆ ಸ್ಪರ್ಧಿಸಿ ಗೆದ್ದರು ಒಬ್ಬ ಸದಸ್ಯರಾಗಿ ಉಳಿಯುವುದು ಇವರಿಗೆ ಒಪ್ಪಿಗೆ ಆಗುತ್ತಿಲ್ಲ ಎನ್ನಲಾಗುತ್ತಿಲ್ಲ.

ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ಸಾಕಷ್ಟು ಸ್ಪರ್ಧೆ ಏರ್ಪಟ್ಟಿದ್ದು ಆಯಕಟ್ಟಿನ ಸ್ಥಾನಗಳಿಗೆ ನಿಯೋಜಿಸುವಂತೆ ಸಾಕಷ್ಟು ಸದಸ್ಯರು ನಾಯಕರ ಮೇಲೆ ಒತ್ತಡ ತರುತ್ತಿದ್ದಾರೆ. ಕೆಲವರು ಪ್ರತಿಪಕ್ಷನಾಯಕ ಸಿದ್ದರಾಮಯ್ಯ ಮೇಲೆ ಒತ್ತಡ ತಂದರೆ ಮತ್ತೆ ಕೆಲವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸಕ್ಕೆ ಎಡತಾಕುತ್ತಿದ್ದಾರೆ.

ಇದನ್ನು ಓದಿ:ಪರಿಷತ್ ಚುನಾವಣೆ: ಕಾಂಗ್ರೆಸ್​ ಟಿಕೆಟ್​ಗಾಗಿ ಬೆಳಗಾವಿಯಲ್ಲಿ 7 ಆಕಾಂಕ್ಷಿಗಳ ಮಧ್ಯೆ ಫೈಟ್

ಪ್ರಭಾವಿ ವ್ಯಕ್ತಿಗಳ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳಲು ಸಾಕಷ್ಟು ಸದಸ್ಯರು ಪ್ರಯತ್ನಿಸುತ್ತಿರುವ ಸಂದರ್ಭ ತಮಗೆ ಈಗಾಗಲೇ ಅಧಿಕಾರ ಮತ್ತೊಮ್ಮೆ ಸಿಗುವ ಸಾಧ್ಯತೆ ಕಡಿಮೆ ಎಂಬ ಅರಿವು ನಾರಾಯಣಸ್ವಾಮಿಗೆ ಬಂದಿದೆ. ಇದರಿಂದ ಪರಿಷತ್​ ಪ್ರತಿಪಕ್ಷ ಸದಸ್ಯರ ಸ್ಥಾನದಲ್ಲಿ ಕುಳಿತು ಅವಾಗ ಈವಾಗಲೊಮ್ಮೆ ಅವಕಾಶಕ್ಕಾಗಿ ಕಾಯುವುದಕ್ಕಿಂತ ಪರ್ಯಾಯ ಮಾರ್ಗ ಹುಡುಕಿಕೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದಾರೆ.

ಮುಂದಿನ ಆಯ್ಕೆ ಕೆಳಮನೆ

ಮೇಲ್ಮನೆ ಸದಸ್ಯರಾಗಿ ಪ್ರತಿಪಕ್ಷ ಸಚೇತಕ ಹುದ್ದೆಯನ್ನು ಅಲಂಕರಿಸಿ ಒಂದಿಷ್ಟು ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿರುವ ಎಂ ನಾರಾಯಣಸ್ವಾಮಿ ಈಗಾಗಲೇ ಕೆಳಮನೆ ಪ್ರವೇಶಕ್ಕೆ ಒಂದು ಪ್ರಯತ್ನ ನಡೆಸಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಶಾಸಕ ಬೈರತಿ ಬಸವರಾಜ ರಾಜೀನಾಮೆಯಿಂದ ತೆರವಾಗಿದ್ದ ಕೆಆರ್ ಪುರ ವಿಧಾನಸಭಾ ಕ್ಷೇತ್ರಕ್ಕೆ 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಎಂ ನಾರಾಯಣಸ್ವಾಮಿ ಸ್ಪರ್ಧಿಸಿದ್ದರು.

ಪಕ್ಷ ಹಾಗೂ ವೈಯಕ್ತಿಕ ವರ್ಚಸ್ಸನ್ನು ಉಪಯೋಗಿಸಿಕೊಂಡು ಶೇಕಡಾ 33.57ರಷ್ಟು ಮತವನ್ನು ಪಡೆದಿದ್ದರು. ಹಿಂದಿನ ಶಾಸಕರು ಹಾಗೂ ಪ್ರಭಾವಿ ವ್ಯಕ್ತಿಯೂ ಆಗಿದ್ದ ಬೈರತಿ ಬಸವರಾಜ್ ಸಹಜವಾಗಿ ಆಡಳಿತ ಪಕ್ಷವಾದ ಬಿಜೆಪಿ ಅಲೆಯಲ್ಲಿ 63,443 ಮತಗಳ ಬಾರಿ ಅಂತರದ ಗೆಲುವು ಸಾಧಿಸಿದ್ದರು. ಒಟ್ಟು 76,436 ಮತಗಳನ್ನು ಪಡೆದಿದ್ದ ನಾರಾಯಣಸ್ವಾಮಿ ಸಾಕಷ್ಟು ಉತ್ತಮ ಪೈಪೋಟಿಯನ್ನೇ ನೀಡಿದ್ದರು. ಪಕ್ಷದ ಎಲ್ಲ ನಾಯಕರ ಒಲವು ಹೊಂದಿರುವ ನಾರಾಯಣಸ್ವಾಮಿ ಮೇಲ್ಮನೆ ಪ್ರವೇಶಕ್ಕಿಂತ ಇನ್ನೊಂದು ವರ್ಷ ಕಾಯ್ದು ಕೆಳಮನೆ ಪ್ರವೇಶಿಸುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.

ಈಗಾಗಲೇ ಬಿಜೆಪಿ ಸರ್ಕಾರ ತನ್ನ ವರ್ಚಸ್ಸನ್ನು ಕಡಿಮೆಗೊಳಿಸಿ ಕೊಂಡಿದ್ದು ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ನಿರೀಕ್ಷೆ ಅವರದ್ದಾಗಿದೆ. ಒಂದೊಮ್ಮೆ ಕೆಆರ್ ಪುರ ಮತದಾರರು ಕೈಹಿಡಿದರೆ ತಾವು ಮಂತ್ರಿ ಸಹ ಆಗಬಹುದು ಎಂಬ ನಿರೀಕ್ಷೆ ಹೊಂದಿದ್ದಾರೆ ಎನ್ನಲಾಗುತ್ತಿದೆ.

ನಾರಾಯಣಸ್ವಾಮಿ ಹಿನ್ನೆಲೆ

ಪಕ್ಷದ ತಳಮಟ್ಟದ ಸಂಘಟಕರಾಗಿ ಬೆಳೆದುಬಂದಿರುವ ನಾರಾಯಣಸ್ವಾಮಿ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅದು 1985 ರಿಂದ 87ರ ಅವಧಿಯಲ್ಲಿ ಎನ್ಎಯುಐ(NSUI) ಪ್ರಧಾನ ಕಾರ್ಯದರ್ಶಿಯಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಕಾಂಗ್ರೆಸ್ ಸಂಘಟನೆಯಲ್ಲಿ ಭಾಗಿಯಾಗಿದ್ದ ಅವರು 87 ರಿಂದ 92ರ ಅವಧಿಯಲ್ಲಿ ಅಧ್ಯಕ್ಷರಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ.

1992 ರಿಂದ 98 ರ ಅವಧಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಹಾಗೂ 98 ರಿಂದ 2001ರ ಅವಧಿಗೆ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್​ಗೆ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. 2001ರಿಂದ 2004ರ ಅವಧಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಅವರು 2001, 2005, 2011ರಲ್ಲಿ ಕೆಪಿಸಿಸಿಗೆ ಚುನಾಯಿತ ಸದಸ್ಯರಾಗಿ ಆಯ್ಕೆಯಾದರು. 2015ರಲ್ಲಿ ಬೆಂಗಳೂರು ನಗರದಿಂದ ವಿಧಾನಪರಿಷತ್​ಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಯ್ಕೆಯಾಗಿ ವಿಧಾನಪರಿಷತ್ ಪ್ರವೇಶ ಮಾಡಿದರು. ಪಕ್ಷ ಇವರನ್ನು 2020ರಲ್ಲಿ ವಿಧಾನ ಪರಿಷತ್(Legislative Council ) ಪ್ರತಿಪಕ್ಷದ ಸಚೇತಕರನ್ನಾಗಿ ನೇಮಕ ಮಾಡಿತ್ತು.

ಇದೀಗ ರಾಜಕೀಯದ ಇನ್ನೊಂದು ಹಂತ ತಲುಪುವ ನಿಟ್ಟಿನಲ್ಲಿ ಪ್ರಯತ್ನಕ್ಕೆ ಮುಂದಾಗಿರುವ ಅವರು ಮುಂಬರುವ ಅವಧಿಯಲ್ಲಿ ಕೆಆರ್ ಪುರಂ ಮೂಲಕವೇ ಕೆಳಮನೆ ಪ್ರವೇಶದ ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಇದಕ್ಕಾಗಿ ವಿಧಾನಪರಿಷತ್ತಿಗೆ ಸ್ಪರ್ಧಿಸಲು ಅವರು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾಹಿತಿ ಇದೆ.

ಇದನ್ನು ಓದಿ:ಕಾಂಗ್ರೆಸ್ ಘಟಾನುಘಟಿಗಳ ಅವಧಿಯೇ ಮುಕ್ತಾಯ; ಪರಿಷತ್​ನಲ್ಲಿ ಕಾಡಲಿದೆಯೇ ಹಿರಿತನದ ಕೊರತೆ?!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.