ETV Bharat / state

ನಿವೃತ್ತ ಪ್ರಾಂಶುಪಾಲರಿಗೆ ಹನಿಟ್ರ್ಯಾಪ್: 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಗ್ಯಾಂಗ್​ ಅಂದರ್​

author img

By

Published : Nov 4, 2021, 8:24 PM IST

ನಿವೃತ್ತ ಪ್ರಾಂಶುಪಾಲರಿಗೆ ಹನಿಟ್ರ್ಯಾಪ್ ಮಾಡಿ ಅವರಿಂದ 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಗ್ಯಾಂಗ್​ ಅನ್ನು ನಂದಿನಿ ಲೇಔಟ್​​ ಪೊಲೀಸರು ಬಂಧಿಸಿದ್ದಾರೆ.

honey trap gang
ಹನಿಟ್ರ್ಯಾಪ್ ಗ್ಯಾಂಗ್​

ಬೆಂಗಳೂರು: ಸಿಲಿಕಾನ್​​ ಸಿಟಿಯಲ್ಲಿ ಹನಿ ಟ್ರ್ಯಾಪ್ ಮಾಡುತ್ತಿದ್ದ ತಂಡವನ್ನು ನಂದಿನಿ ಲೇಔಟ್​​ ಪೊಲೀಸರು ಬಂಧಿಸಿದ್ದಾರೆ. ಓರ್ವ ಯುವತಿ ಸೇರಿ ಮುತ್ತು, ಪೆದ್ದರೆಡ್ಡಿ, ದಾಮೋದರ್​​ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಶಿವರುದ್ರಯ್ಯ ಎಂಬ ನಿವೃತ್ತ ಪ್ರಾಂಶುಪಾಲರು ಬಾರ್​ ಲೈಸೆನ್ಸ್​ ಪಡೆದುಕೊಳ್ಳಲು ಹುಡುಕಾಟ ನಡೆಸುತ್ತಿದ್ದರು. ಈ ಸಮಯದಲ್ಲಿ ಹನಿಟ್ರ್ಯಾಪ್​ ಗ್ಯಾಂಗ್​ನ ಯುವತಿ ಪರಿಚಯವಾಗಿತ್ತು. ತನ್ನ ಪರಿಚಯದವರ ಬಳಿ ಬಾರ್​ ಲೈಸೆನ್ಸ್ ಇದೆ ಎಂದೇಳಿ ಸ್ನೇಹ ಬೆಳಸಿ ಪ್ಲಾನ್​ ರೂಪಿಸಿದ್ದರು.

ಬಳಿಕ ಬಾರ್​ ಲೈಸೆನ್ಸ್​​ ವಿಚಾರವಾಗಿ ಮಾತುಕತೆ ನಡೆಸಲು ಯುವತಿ ಶಿವರುದ್ರಯ್ಯರನ್ನು ಮನೆಗೆ ಕರೆಸಿಕೊಂಡಿದ್ದಳು. ಯುವತಿ ಜೊತೆ ಮಾತಾಡುತ್ತಿದ್ದಾಗ ಗ್ಯಾಂಗ್​ನಲ್ಲಿದ್ದ ಇನ್ನಿತರ ಆರೋಪಿಗಳು ಮನೆ ಒಳಗೆ ನುಗ್ಗಿದ್ದರು. ಈ ವೇಳೆ ನಕಲಿ ಪ್ರೆಸ್ ಕಾರ್ಡ್ ತೋರಿಸಿ 5 ಲಕ್ಷಕ್ಕೆ ಬೇಡಿಕೆ ಇಟ್ಟು ಪ್ರಾಂಶುಪಾಲರಿಂದ ಆರೋಪಿಗಳು 3 ಲಕ್ಷ ರೂ. ಹಣ ಪಡೆದಿದ್ದಾರೆ. ನಂತರ ಉಳಿದ ಹಣಕ್ಕಾಗಿ ಗ್ಯಾಂಗ್​ ಒತ್ತಾಯಿಸಿತ್ತು.

ಇದರಿಂದ ಬೇಸತ್ತ ಶಿವರುದ್ರಯ್ಯ ನಂದಿನಿ ಲೇಔಟ್​​ ಪೊಲೀಸ್​​ ಠಾಣೆಯಲ್ಲಿ ಹನಿ ಟ್ರ್ಯಾಪ್ ಮಾಡಿರುವುದಾಗಿ​ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಖಾಕಿ ನಾಲ್ವರು ಆರೋಪಿಗಳನ್ನು ಬಂಧಿಸಿದೆ.

ಇದನ್ನೂ ಓದಿ: ದೇವಸ್ಥಾನದಲ್ಲಿ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆರೋಪ: ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.