ಬೆಂಗಳೂರು: ಇಂಧನ ದರ ಏರಿಕೆ, ಖಾದ್ಯ ತೈಲ ದರ ಏರಿಕೆಯಿಂದಾಗಿ ತತ್ತರಿಸಿರುವ ಗ್ರಾಹಕರಿಗೆ ಮತ್ತೊಂದು ಶಾಕ್ ಕಾದಿದ್ದು, ಶೀಘ್ರದಲ್ಲೇ ನಂದಿನಿ ಹಾಲಿನ ದರ ಕೂಡ ಏರಿಕೆಯಾಗಲಿದೆ. ಈ ಬಗ್ಗೆ ಸೋಮವಾರ ಕರ್ನಾಟಕ ಹಾಲು ಒಕ್ಕೂಟ ನಿರ್ದೇಶಕ ಸತೀಶ್ ಮಾತನಾಡಿ, ಹಾಲಿನ ಪಾಕೆಟ್ ದರ ಹೆಚ್ಚಳಕ್ಕೆ 14 ಜಿಲ್ಲೆಗಳ ಹಾಲಿನ ಒಕ್ಕೂಟದವರು ಒತ್ತಾಯ ಮಾಡುತ್ತಿದ್ದಾರೆ. ದರ ಹೆಚ್ಚಳ ಮಾಡಿದರೆ ಅದನ್ನು ರೈತರಿಗೆ ನೀಡುತ್ತೇವೆ ಎಂದು ತಿಳಿಸಿದರು.
ಈ ಸಂಬಂಧ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಾಧಕ ಬಾಧಕ ನೋಡಿದ ಬಳಿಕ ನಿರ್ಧಾರ ತಗೆದುಕೊಳ್ಳೋಣ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ ಎಂದು ಸತೀಶ್ ಹೇಳಿದರು.
ಗ್ರಾಹಕರಿಗೆ ಸಣ್ಣ ಹೊರೆ: ಪ್ರಸ್ತುತ ಪ್ರತೀ ಲೀಟರ್ ಹಾಲಿನ ಪಾಕೆಟ್ ದರ 37 ರೂ. ಇದ್ದು, ಸರ್ಕಾರ ಒಪ್ಪಿದರೆ 40 ರೂ ಆಗಲಿದೆ. ಹೀಗಾಗಿ ಗ್ರಾಹಕರಿಗೆ ಸಣ್ಣ ಹೊರೆಯಾದರೂ ಆ ದರವನ್ನು ಕಷ್ಟದಲ್ಲಿರುವ ಹಾಲು ಉತ್ಪಾದಕರಿಗೆ ನೀಡಲಾಗುತ್ತದೆ. ದರ ಹೆಚ್ಚಿಗೆಗೆ ಗ್ರಾಹಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಇದನ್ನೂ ಓದಿ : ಹಾಲಿನ ಉತ್ಪನ್ನಗಳ ಮೇಲಿನ ದರ ಹೆಚ್ಚಳದಿಂದ ಜನಾಕ್ರೋಶ... ಕೊಂಚ ಇಳಿಕೆ ಮಾಡಿ ಕೆಎಂಎಫ್ ಎಂಡಿ ಆದೇಶ!