ಬೆಂಗಳೂರು: ಹೋಗಬೇಕಿದ್ದ ಮಾರ್ಗದ ಬದಲಿಗೆ ಬೇರೆ ಮಾರ್ಗದ ಮೆಟ್ರೋ ರೈಲು ಹತ್ತಿದ ಪ್ರಯಾಣಿಕರು ತಪ್ಪು ಗ್ರಹಿಕೆಯಿಂದ ತುರ್ತು ನಿರ್ಗಮನದ ಬಟನ್ ಒತ್ತಿದ್ದರಿಂದ ಶನಿವಾರ ಮೆಟ್ರೋ ಸಂಚಾರ ಕೆಲ ಕಾಲ ವಿಳಂಬವಾಗಿ ಗೊಂದಲದ ವಾತಾವರಣ ಉಂಟಾದ ಘಟನೆ ಬೆಳಕಿಗೆ ಬಂದಿದೆ.
ತರಕಾರಿ ಹೊತ್ತು ಬಂದಿದ್ದ ಇಬ್ಬರು ಕುವೆಂಪು ಮೆಟ್ರೋ ನಿಲ್ದಾಣದಿಂದ ಮೆಟ್ರೋ ರೈಲು ಹತ್ತಿದ್ದರು. ನಾಗಸಂದ್ರ ಮೆಟ್ರೋ ನಿಲ್ದಾಣಕ್ಕೆ ಹೋಗಬೇಕಿದ್ದ ಇವರು ತಪ್ಪಿ ಕೋಣನಕುಂಟೆ ಮಾರ್ಗಕ್ಕೆ ತೆರಳುತ್ತಿದ್ದ ಮೆಟ್ರೊ ರೈಲು ಹತ್ತಿದ್ದರು. ರೈಲು ಹತ್ತಿದ ನಂತರ ಗಾಬರಿಯಲ್ಲಿ ತುರ್ತು ನಿರ್ಗಮನದ ದ್ವಾರದ ಬಟನ್ ಒತ್ತಿದ್ದಾರೆ ಎಂದು ಬಿ.ಎಂ.ಆರ್.ಸಿ.ಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಇಬ್ಬರು ಪ್ರಯಾಣಿಕರು ತಪ್ಪಾಗಿ ಬೇರೆ ಪ್ಲಾಟ್‌ಫಾರ್ಮ್‌ನಿಂದ ಕೋಣನಕುಂಟೆ ರೈಲು ಏರಿದ್ದಾರೆ. ಕೆಲವೇ ಸಮಯದ ಬಳಿಕ ತಪ್ಪಿನ ಅರಿವಾಗಿದೆ. ಇದರಿಂದ ಗೊಂದಲಕ್ಕೆ ಒಳಗಾಗಿ ಪ್ರಯಾಣಿಕರ ಸಲಹೆ ಮೇರೆಗೆ ಎಮರ್ಜೆನ್ಸಿ ದ್ವಾರದ ಬಟನ್ ಒತ್ತಿದ್ದಾರೆ. ಮೆಟ್ರೋ ನಿಲ್ದಾಣದಲ್ಲಿ ನಿಲ್ಲಬೇಕಿದ್ದ ರೈಲು ದಾರಿಯ ಮಧ್ಯೆ ನಿಂತಿದೆ. ಇದರ ಪರಿಣಾಮದಿಂದಾಗಿ ಮೆಟ್ರೋ ರೈಲು ಸಂಚಾರ ನಿನ್ನೆ ಸಂಜೆ 6 ಗಂಟೆಯ ಸಮಯದಲ್ಲಿ ಸುಮಾರು 20 ನಿಮಿಷ ವ್ಯತ್ಯಯವಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
ಎಮರ್ಜೆನ್ಸಿ ಬಾಗಿಲು ಬಂದ್ ಮಾಡಿದ ಸಿಬ್ಬಂದಿ : ಹೀಗಾದ ಸಮಯದಲ್ಲಿ ನಮ್ಮ ಮೆಟ್ರೋ ರೈಲ್ವೆ ಸಿಬ್ಬಂದಿ ಆಗಮಿಸಿ ಎಮರ್ಜೆನ್ಸಿ ಬಾಗಿಲು ಬಂದ್ ಮಾಡಿ ಕೂಡಲೇ ಮತ್ತೆ ಮೆಟ್ರೋ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ನಿಲ್ದಾಣದಲ್ಲಿ ಆ ಇಬ್ಬರನ್ನು ಅವರು ತೆರಳಬೇಕಾದ ಮಾರ್ಗ ಕುರಿತು ತಿಳಿಸಿ ಕಳುಹಿಸಲಾಯಿತು ಎಂದು ಹೇಳಿದ್ದಾರೆ.
ರೈಲು ಹೀಗೆ ದಿಢೀರನೇ ನಿಂತಿದ್ದರಿಂದ ಪ್ರಯಾಣಿಕರಿಗೆ ಏನಾಯ್ತು ಎಂಬ ಆತಂಕದಿಂದ ಪರದಾಡಿದರು. ನಮ್ಮ ಮೆಟ್ರೋ ರೈಲ್ವೆ ಸಿಬ್ಬಂದಿ ಆಗಮಿಸಿ ಎಮರ್ಜೆನ್ಸಿ ಬಾಗಿಲು ಬಂದ್ ಮಾಡಿ ಮತ್ತು ಮೆಟ್ರೋ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ನಿಲ್ದಾಣದಲ್ಲಿ ಆ ಇಬ್ಬರನ್ನು ಅವರು ತೆರಳಬೇಕಾದ ಮಾರ್ಗ ಕುರಿತು ತಿಳಿಸಲಾಯಿತು ಎಂದಿದ್ದಾರೆ.
ಓದಿ : ಕುವೈತ್ನಿಂದ ಆಗಮಿಸಿ ಗಣರಾಜ್ಯೋತ್ಸವ ಧ್ವಜಯಾತ್ರೆ ಕೈಗೊಂಡಿದ್ದ ವ್ಯಕ್ತಿ ನಾಪತ್ತೆ: ಕುಟುಂಬಸ್ಥರಲ್ಲಿ ಆತಂಕ