ETV Bharat / state

ಆರ್​ಆರ್ ನಗರ ಅಭಿವೃದ್ಧಿಗೆ ಸರ್ಕಾರ 950 ಕೋಟಿ ರೂ. ನೀಡಿದೆ: ನಳಿನ್ ಕುಮಾರ್ ಕಟೀಲ್ - ರಾಜರಾಜೇಶ್ವರಿ ನಗರದ ಉಪಚುನಾವಣೆಗೆ ವರ್ಚುವಲ್ ಸಭೆ

ಕಾಂಗ್ರೆಸ್ ಒಳಜಗಳದ ಕಾರಣ, ಆಡಳಿತ ಪಕ್ಷದ ಶಾಸಕರು ಆಡಳಿತ ಪಕ್ಷ ತೊರೆದು ವಿರೋಧ ಪಕ್ಷ ಸೇರಿದ್ದು ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ. ಪುಣ್ಯಕೋಟಿಯ ಕತೆಯಂತೆ ಕೊಟ್ಟ ಮಾತಿಗೆ ತಪ್ಪದೆ ಮುನಿರತ್ನ ಅವರಿಗೆ ಟಿಕೇಟ್ ನೀಡಿ ಚುನಾವಣೆಗೆ ಮುಂದಾಗಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿಳಿಸಿದರು..

nalin-kumar-katil-talk-about-rr-nagara-by-election-canvas
ಆರ್​ಆರ್ ನಗರ ಅಭಿವೃದ್ಧಿಗೆ ಸರ್ಕಾರ 950 ಕೋಟಿ ರೂ. ನೀಡಿದೆ: ನಳೀನ್ ಕುಮಾರ್ ಕಟೀಲ್
author img

By

Published : Oct 30, 2020, 4:52 PM IST

Updated : Oct 30, 2020, 5:10 PM IST

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಅರವಿಂದ ಲಿಂಬಾವಳಿ ರಾಜರಾಜೇಶ್ವರಿ ನಗರದ ಉಪಚುನಾವಣೆಗೆ ವರ್ಚುವಲ್ ಸಭೆ ಮಾಡಿ, ಸಾಮಾಜಿಕ ಜಾಲತಾಣದ ಮೂಲಕ ಮತಯಾಚನೆ ಮಾಡಿದರು.

ಆರ್​ಆರ್ ನಗರ ಅಭಿವೃದ್ಧಿಗೆ ಸರ್ಕಾರ 950 ಕೋಟಿ ರೂ. ನೀಡಿದೆ: ನಳಿನ್ ಕುಮಾರ್ ಕಟೀಲ್

ಈ ವೇಳೆ ಮಾತನಾಡಿದ ಕಟೀಲ್, ಆರ್​ಆರ್ ನಗರದ ಅಭಿವೃದ್ಧಿಗೆ ಸಿಎಂ ಯಡಿಯೂರಪ್ಪ 950 ಕೋಟಿ ರೂಪಾಯಿ ಕೊಟ್ಟಿದ್ದಾರೆ. ಮುನಿರತ್ನ ಅವರು ಕೋವಿಡ್ ಸಂದರ್ಭದಲ್ಲಿ 70 ಸಾವಿರ ಕುಟುಂಬಗಳಿಗೆ ಊಟ ಕೊಟ್ಟರು. ಕಷ್ಟದಲ್ಲಿ ಕಣ್ಣೀರು ಒರೆಸಿದ ಮುನಿರತ್ನ ಅವರ ಕೈ ಹಿಡಿಯಿರಿ. ಸೋಲಿನ ಭೀತಿಯಲ್ಲಿ ಕಾಂಗ್ರೆಸ್ ಜಾತಿ ರಾಜಕಾರಣ ಮಾಡುತ್ತಿದೆ. ಅಭಿವೃದ್ಧಿ ಆಧಾರದಲ್ಲಿ ಬಿಜೆಪಿ ಮತಯಾಚನೆ ಮಾಡುತ್ತಿದ್ದು, ಮುನಿರತ್ನ ಅವರನ್ನು ಗೆಲ್ಲಿಸಿ ಎಂದರು.

ಕಾಂಗ್ರೆಸ್ ಒಳಜಗಳದ ಕಾರಣ, ಆಡಳಿತ ಪಕ್ಷದ ಶಾಸಕರು ಆಡಳಿತ ಪಕ್ಷ ತೊರೆದು ವಿರೋಧ ಪಕ್ಷ ಸೇರಿದ್ದು ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ. ಪುಣ್ಯಕೋಟಿಯ ಕತೆಯಂತೆ ಕೊಟ್ಟ ಮಾತಿಗೆ ತಪ್ಪದೆ ಮುನಿರತ್ನ ಅವರಿಗೆ ಟಿಕೆಟ್ ನೀಡಿ ಚುನಾವಣೆಗೆ ಮುಂದಾಗಿದ್ದೇವೆ. ಆರ್​ಆರ್ ನಗರದಲ್ಲಿ ಐವತ್ತು ಸಾವಿರಕ್ಕಿಂತ ಹೆಚ್ಚು ಮತ, ಶಿರಾದಲ್ಲೂ ಇಪ್ಪತ್ತು ಸಾವಿರಕ್ಕೂ ಹೆಚ್ಚು ಮತಗಳಿಂದ ಬಿಜೆಪಿ ಗೆಲ್ಲಲಿದೆ ಎಂದರು.

ಶಿರಾದಲ್ಲಿ ಯಾವುದೇ ಅಭಿವೃದ್ಧಿಯನ್ನು ಈ ಹಿಂದೆ ಆಡಳಿತ ನಡೆಸಿದ ಕಾಂಗ್ರೆಸ್, ಜೆಡಿಎಸ್ ನಡೆಸಿಲ್ಲ. ಹೀಗಾಗಿ, ಜನ ಬಿಜೆಪಿ ಬೆಂಬಲಿಸಿದ್ದಾರೆ. ಆರ್​ಆರ್ ನಗರದಲ್ಲಿ ಬಿಜೆಪಿಯ ಶಕ್ತಿ ಹೆಚ್ಚಾಗಿದೆ ಎಂದರು. ಬಳಿಕ ಪ್ರಧಾನಿ ಮೋದಿ ಹಾಗೂ ಸಿಎಂ ಯಡಿಯೂರಪ್ಪ ಅವರ ಯೋಜನೆಗಳ ಬಗ್ಗೆ ಹಾಡಿಹೊಗಳಿದ ನಳಿನ್ ಕುಮಾರ್ ಕಟೀಲ್, ಜಗತ್ತಿನ ಜನ ಇವತ್ತು ಪ್ರಧಾನಿ ಮೋದಿಯವರನ್ನು ವಿಶ್ವಾಸದಿಂದ ನೋಡುತ್ತಿದ್ದಾರೆ.

ಜನಧನ ಅಕೌಂಟ್ ಮೂಲಕ ಜನತೆಯನ್ನು ಸಧೃಢ ಮಾಡಲಾಯಿತು. ರೈತರ ಅಕೌಂಟ್​​ಗೆ ಹಣ, ಎಂಟು ಕೋಟಿ ಮಹಿಳೆಯರಿಗೆ ಶೌಚಾಲಯ, ಗ್ಯಾಸ್ ಸೌಲಭ್ಯ, ಬಡವರ ಮನೆಗೆ ವಿದ್ಯುತ್ ಕೊಟ್ಟು ಬೆಳಗಿಸಲಾಯಿತು. ಮೇಕ್ ಇನ್ ಇಂಡಿಯಾ, ಮುದ್ರಾ ಸಾಲ ಯೋಜನೆ, ಮಹಿಳೆಯರು, ಎಸ್‌ಸಿ ಎಸ್​ಟಿ ಜನತೆಗೆ ಸ್ಟಾರ್ಟ್ ಅಪ್ ಯೋಜನೆ ಅಡಿ ಸಾಲ ಕೊಡಲಾಗಿದೆ. ಯಾವುದೇ ಸಮಸ್ಯೆ ಬಂದರೂ ಬಿಜೆಪಿ ಎದುರಿಸಿತು.

ರಾಮಮಂದಿರಕ್ಕೆ ಶಿಲಾನ್ಯಾಸ, ಕಾಶ್ಮೀರಕ್ಕೆ ಸ್ವಾತಂತ್ರ್ಯ, ರಾಷ್ಟ್ರೀಯ ಶಿಕ್ಷಣ ನೀತಿಯನ್ನ ಬಿಜೆಪಿ ಜಾರಿ ಮಾಡಿದೆ. ಪ್ರತಿ ವ್ಯಕ್ತಿಯನ್ನು ಯೋಜನೆಗಳ ಮೂಲಕ ಬಿಜೆಪಿ ತಲುಪಿದೆ ಎಂದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರು, ರೈತರಿಗೆ ಪ್ರತ್ಯೇಕ ಬಜೆಟ್, ಹಾಲಿಗೆ ಪ್ರೋತ್ಸಾಹ ಧನ, ಭಾಗ್ಯಲಕ್ಷ್ಮಿ ಯೋಜನೆ, ಸಂಧ್ಯಾ ಸುರಕ್ಷಾ ಯೋಜನೆ, ನಗರೋತ್ಥಾನ ಯೋಜನೆ ಮೂಲಕ ಜನರ ಸೇವೆ ಮಾಡಿದಕ್ಕಾಗಿ ಮತ್ತೆ ಬಿಜೆಪಿ ಆಡಳಿತ ಬಂದಿದೆ.

ಕೋವಿಡ್ ನಿರ್ವಹಣೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ನಾಲ್ಕು ಪ್ರಯೋಗಾಲಯಗಳನ್ನು ನೂರು ಪ್ರಯೋಗಾಲಯಕ್ಕೆ ಏರಿಕೆ, ನಾಲ್ಕು ಸಾವಿರ ವೆಂಟಿಲೇಟರ್ ಗಳನ್ನು 30 ಸಾವಿರ ವೆಂಟಿಲೇಟರ್ ಮಾಡಲಾಯಿತು. ಕೆಜೆ ಹಳ್ಳಿ, ಡಿಜೆ ಹಳ್ಳಿಗೆ ಬೆಂಕಿ ಹಚ್ಚುವ ಕೆಲಸ, ಗಲಭೆ ಹಚ್ಚುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಈಗ ಬಿಜೆಪಿ ಆಡಳಿತ ಇರುವುದರಿಂದ ಎರಡು ಗಂಟೆಯಲ್ಲಿ ಈ ಗಲಭೆ ತಡೆಹಿಡಿಯಲಾಯಿತು.

ಹೀಗಾಗಿ, ಬೆಂಗಳೂರಿನ ಭವಿಷ್ಯದ ಪ್ರಶ್ನೆ ಇದು. ಜನರ ರಕ್ಷಣೆಗೆ, ಕಾನೂನು ಸುವ್ಯವಸ್ಥೆ ಕಾಪಾಡಲು ಬಿಜೆಪಿ ಬೇಕಾಗಿದೆ. ಡ್ರಗ್ಸ್ ಮಾಫಿಯಾದ ಜೊತೆ ಮಾಜಿ ಸಿಎಂ ಸಿದ್ಧರಾಮಯ್ಯ ಕೂಡ ಕೈಜೋಡಿಸಿದ್ದರು. ಆದರೆ, ಬಿಜೆಪಿ ಡ್ರಗ್ಸ್‌ ನಿಯಂತ್ರಣಕ್ಕೆ ಶ್ರಮಿಸುತ್ತಿದೆ. ಡ್ರಗ್ ಪೆಡ್ಲರ್‌ಗಳನ್ನು ಅರೆಸ್ಟ್ ಮಾಡಲಾಗ್ತಿದೆ. ಮಕ್ಕಳ ಭವಿಷ್ಯ ರಕ್ಷಿಸುವ ಕೆಲಸವನ್ನು ಯಡಿಯೂರಪ್ಪ ಮಾಡುತ್ತಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಮಾತನಾಡಿದರು.

ಕೇಂದ್ರದಲ್ಲಿ ನರೇಂದ್ರ ಮೋದಿಯವರ ಆಡಳಿತ, ಕಲ್ಯಾಣ ಕರ್ನಾಟಕಕ್ಕೆ ಯಡಿಯೂರಪ್ಪ, ಹಾಗೂ ಮುನಿರತ್ನ ಅವರನ್ನು ಬೆಂಬಲಿಸಿ ಎಂದರು. ರಾಜ್ಯ ಉಪಾಧ್ಯಕ್ಷ ಅರವಿಂದ ಲಿಂಬಾವಳಿ ಮಾತನಾಡಿ, ಹಿಂದಿನ ಸಮ್ಮಿಶ್ರ ಸರ್ಕಾರ ಜನಪರ ಆಡಳಿತ ಕೊಡಲು ವಿಫಲ ಆಗಿದ್ದಕ್ಕೆ ಅವರ ಶಾಸಕರು ರಾಜೀನಾಮೆ ಕೊಟ್ಟರು. ಎಲ್ಲಾ ವ್ಯಾಜ್ಯಗಳು ತೀರ್ಮಾನ ಆಗಿ ಈಗ ಆರ್​ಆರ್ ನಗರಕ್ಕೆ ಉಪಚುನಾವಣೆ ನಡೆಯುತ್ತಿದೆ.

ಕೊರೊನಾ ಹಿನ್ನೆಲೆ, ಹೆಚ್ಚಿನ ಸಂಖ್ಯೆಯಲ್ಲಿ ಮತಯಾಚನೆ ಮಾತನಾಡಲು ಸಾಧ್ಯವಾಗದೆ ವರ್ಚುವಲ್ ಸಭೆ ಮಾಡಲಾಗ್ತಿದೆ. ಬೆಂಗಳೂರು ಅಭಿವೃದ್ಧಿಗೆ ಹೆಚ್ಚು ಅನುದಾನ ಸಿಕ್ಕಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲಿ. ಹೊರವಲಯದ ಮಹದೇವಪುರ, ಕೆ.ಆರ್ ಪುರಂ, ದಾಸರಹಳ್ಳಿ, ಬಿಟಿಎಂ ಲೇಔಟ್ ಹಾಗೂ ಆರ್ ಆರ್ ನಗರಕ್ಕೂ ಅಗತ್ಯವಾದ ಅನುದಾನ ಬಿಜೆಪಿ ಸರ್ಕಾರ ಕೊಡುತ್ತಿದೆ.

ನೀರು, ರಸ್ತೆ, ರಾಜಕಾಲುವೆ, ಕೆರೆಗಳ ಅಭಿವೃದ್ಧಿ, ಟ್ರಾಫಿಕ್ ಪರಿಹಾರಕ್ಕೂ ಸರ್ಕಾರ ಅನೇಕ ಯೋಜನೆ ಮಾಡಿದೆ. 950 ಕೋಟಿ ರೂ ಗೂ ಹೆಚ್ಚು ಹಣವನ್ನು ಬಿಜೆಪಿ ಸರ್ಕಾರ ಆರ್ ಆರ್ ನಗರದ ಅಭಿವೃದ್ಧಿಗೆ ಕೊಟ್ಟಿದೆ. ಆದರೆ ಮಾಜಿ ಸಿಎಂ ಸಿದ್ಧರಾಮಯ್ಯ ಕಾಂಗ್ರೆಸ್ ಅವಧಿಯಲ್ಲಿ ಕೊಡಲಾಗಿದೆ ಅಂತಾರೆ.

ಅಭಿವೃದ್ಧಿಗೆ ಹಣ ಕೊಟ್ಟೂ ಸರ್ಕಾರ ಬೀಳಲು ಹೇಗೆ ಸಾಧ್ಯವಾಯಿತು ಎಂದು ಸವಾಲೆಸೆದರು. ಬಿಜೆಪಿ ಜಾತಿ‌ಧರ್ಮದ ಆಧಾರದಲ್ಲಿ ಮತ ಕೇಳುತ್ತಿಲ್ಲ, ಅಭಿವೃದ್ಧಿ ಆಧಾರದಲ್ಲಿ ಮತ ಕೇಳುತ್ತಿದ್ದೇವೆ ಎಂದರು. ನಗರದ ಅಭಿವೃದ್ಧಿಗಾಗಿ , ಮಾದರಿ ನಗರವನ್ನಾಗಿ ಮಾಡಲು ಬಿಜೆಪಿಗೆ ಮಾತ್ರ ಸಾಧ್ಯ. ಹೀಗಾಗಿ ಪ್ರತಿಯೊಬ್ಬರೂ ಮತಗಟ್ಟೆಗೆ ಬಂದು ಮತಚಲಾಯಿಸಿ, ಬಿಜೆಪಿಯನ್ನು ಬೆಂಬಲಿಸಿ ಎಂದರು.

Last Updated : Oct 30, 2020, 5:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.