ಬೆಂಗಳೂರು/ಮಂಗಳೂರು: ಬಸವರಾಜ ಬೊಮ್ಮಾಯಿ ಅವರು ಪೂರ್ಣಾವಧಿಗೆ ಸಿಎಂ ಆಗಿರಲಿದ್ದಾರೆ. ಮುಂದಿನ ಚುನಾವಣೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಮಾರ್ಗದರ್ಶನ ಹಾಗೂ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದರು.
ಸಿಎಂ ಬದಲಾವಣೆ ಬಗ್ಗೆ ಕಾಂಗ್ರೆಸ್ ಟ್ವೀಟ್ಗೆ ತಿರುಗೇಟು ನೀಡಿರುವ ಅವರು, ಸಿದ್ದರಾಮಯ್ಯ ಉತ್ಸವ ಮೂಲಕ ಕಾಂಗ್ರೆಸ್ ಒಳಜಗಳ, ಬೀದಿ ಜಗಳ ದೊಡ್ಡದಾಗಿದೆ. ಕೋಳಿವಾಡ ಅಂಥವರೇ ಇಂದು ಸಿದ್ದರಾಮಯ್ಯ ಅವರನ್ನು ಬೈಯ್ಯುವಂತಹ ಸ್ಥಿತಿಗೆ ಬಂದಿದೆ. ಮುಂದಿನ ಮುಖ್ಯಮಂತ್ರಿಗಳ ಹೋರಾಟ ಜಾಸ್ತಿಯಾಗುತ್ತಿದೆ. ಕಾಂಗ್ರೆಸ್ನಲ್ಲಿನ ಆಂತರಿಕ ಜಗಳ, ಗೊಂದಲ ಮುಚ್ಚಿಡುವುದಕ್ಕೆ ಬಿಜೆಪಿ 3ನೇ ಸಿಎಂಗೆ ಕಸರತ್ತು ಎಂಬುದಾಗಿ ಟ್ವೀಟ್ ಮಾಡಿದೆ. ಬಿಜೆಪಿ ಸರ್ಕಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದರು.
ಗೊಂದಲ ಸೃಷ್ಟಿ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಬಿಜೆಪಿಯಲ್ಲಿ ಯಾವುದೇ ಗೊಂದಲಗಳಿಲ್ಲ. ಗೊಂದಲಗಳನ್ನು ಸೃಷ್ಟಿಸುವ ಕಾಂಗ್ರೆಸ್ನ ಯಾವುದೇ ಆಟ ನಡೆಯಲ್ಲ. ಕಾಂಗ್ರೆಸ್ ಮೊದಲಿಗೆ ಅವರ ಜಗಳ ಬಗೆಹರಿಸಿ ಒಟ್ಟಾಗಿ ಚುನಾವಣೆಗೆ ಹೋಗಲಿ. ಕಾಂಗ್ರೆಸ್ ಭವಿಷ್ಯ ಏನೆಂಬುದು ಮುಂದಿನ ಚುನಾವಣೆಯಲ್ಲಿ ಗೊತ್ತಾಗಲಿದೆ. ಪಕ್ಷದ ಹಗರಣಗಳು ಬಯಲಿಗೆ ಬಂದಿದೆ. ಇವೆಲ್ಲ ಗೊಂದಲಗಳನ್ನು ಮುಚ್ಚಿ ಹಾಕಲು ಕಾಂಗ್ರೆಸ್ ಇಂತಹ ಟ್ವೀಟ್ ಮಾಡುತ್ತಿದೆ ಎಂದು ಕಟೀಲ್ ಆರೋಪಿಸಿದರು.
ಇದನ್ನೂ ಓದಿ: ಕೈಗೊಂಬೆ ಸಿಎಂ ಬೊಮ್ಮಾಯಿ ಅವರ ಗೊಂಬೆಯಾಟ ಮುಗಿಯುವ ಹಂತ ಬಂದಿದೆ: ಕಾಂಗ್ರೆಸ್ ಟೀಕೆ