ETV Bharat / state

ಕನ್ನಡ ಬಾವುಟದ ನೇತಾರ ಮ.ರಾಮಮೂರ್ತಿ ಪತ್ನಿಗೆ ಆರ್ಥಿಕ ನೆರವು ನೀಡಿ: ಸರ್ಕಾರಕ್ಕೆ ಮಹೇಶ್‌ ಜೋಶಿ ಪತ್ರ - ETV Bharath Kannada news

ನಾಡಿನಲ್ಲಿ ಕನ್ನಡ ಚಳವಳಿಗೆ ನಾಂದಿ ಹಾಡಿದ ಮ.ರಾಮಮೂರ್ತಿ ಅವರ ಪತ್ನಿಗೆ ಮಾಸಿಕ 37 ಸಾವಿರ ರೂ ನೀಡುವಂತೆ ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಸಿಎಂಗೆ ಪತ್ರ ಬರೆದಿದ್ದಾರೆ.

Nadoja Dr Mahesh Joshi  letter to CM to help ramamurthys wife kamlamma
ಮಹೇಶ್ ಜೋಶಿ ಸಿಎಂಗೆ ಪತ್ರ
author img

By

Published : Feb 10, 2023, 10:52 PM IST

ಬೆಂಗಳೂರು: ಕನ್ನಡದ ವೀರಸೇನಾನಿ, ಕನ್ನಡ ಬಾವುಟದ ನೇತಾರ ಹಾಗೂ ಮೊದಲ ಬಾರಿಗೆ ಸಾರ್ವಜನಿಕವಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಪ್ರಾರಂಭಿಸಿದ ಮ.ರಾಮಮೂರ್ತಿ ಅವರ ಧರ್ಮಪತ್ನಿ ಕಮಲಮ್ಮ ಅವರಿಗೆ ಗೌರವ ಸಂಕೇತವಾಗಿ ಸರ್ಕಾರ ವೃದ್ಯಾಪ್ಯವೇತನ, ಜೀವನೋಪಾಯ ಹಾಗೂ ಶುಶ್ರೂಷೆಗಾಗಿ ಆರ್ಥಿಕ ನೆರವು ನೀಡಬೇಕು. ತೀರಾ ಕಷ್ಟದಲ್ಲಿ ಇರುವ ಕಮಲಮ್ಮನವರಿಗೆ ಈಗ 97 ವರ್ಷ. ಅವರ ಜೀವನದ ಸಂಧ್ಯಾಕಾಲದಲ್ಲಿ ಸರ್ಕಾರ ಆರ್ಥಿಕ ನೆರವು ಒದಗಿಸುವ ಮೂಲಕ ಕನ್ನಡ ಸೇನಾನಿಗೆ ಗೌರವ ಸಲ್ಲಿಸಬೇಕು ಎಂದು ಒತ್ತಾಯಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಡಾ.ಮಹೇಶ್‌ ಜೋಶಿ ಪತ್ರದ ಸಾರಾಂಶ: ನಾಡಿನಲ್ಲಿ ಕನ್ನಡ ಚಳವಳಿಗೆ ನಾಂದಿ ಹಾಡಿ, ಕನ್ನಡಿಗರನ್ನು ಎಚ್ಚರಿಸಿ, ಕನ್ನಡಿಗರ ಹೃದಯದಲ್ಲಿ ಕನ್ನಡದ ಕೆಚ್ಚಿನ ಜ್ಯೋತಿ ಬೆಳಗಿಸಿ, ಕ್ರಾಂತಿ ಮಂತ್ರವನ್ನು ಘೋಷಿಸಿದವರಲ್ಲಿ ಪ್ರಮುಖರಾದವರು "ಕನ್ನಡದ ವೀರಸೇನಾನಿ" ಎಂದೇ ಪ್ರಖ್ಯಾತರಾದವರು ಮ.ರಾಮಮೂರ್ತಿ. ಕನ್ನಡ ರಾಜ್ಯೋತ್ಸವ ಆಚರಣೆ ಪ್ರಾರಂಭದ ರೂವಾರಿಯಾಗಿ, ಕನ್ನಡ ಬಾವುಟದ ನೇತಾರರಾಗಿ ಕನ್ನಡ ನಾಡು-ನುಡಿಗೆ ಇವರ ಸೇವೆ ಅನನ್ಯ ಹಾಗೂ ಅನುಪಮ.

ಕೇವಲ ಕನ್ನಡ ಹೋರಾಟಗಾರಷ್ಟೇ ಅಲ್ಲದೇ, ಪತ್ರಕರ್ತರಾಗಿ, ಕಾದಂಬರಿಕಾರರಾಗಿ, ಪ್ರಕಾಶಕರಾಗಿ, ಅಧ್ಯಯನಕಾರರಾಗಿ ಕನ್ನಡ ಸಾರಸ್ವತ ಲೋಕಕ್ಕೂ ತಮ್ಮ ವಿಶಿಷ್ಟವಾದ ಸೇವೆಯನ್ನು ರಾಮಮೂರ್ತಿ ಕನ್ನಡ ನಾಡಿನ ಪ್ರಾತಃ ಸ್ಮರಣಿಯರಲ್ಲಿ ಒಬ್ಬರು. ಇಂಥ ಭವ್ಯ ವ್ಯಕ್ತಿತ್ವದ ಕನ್ನಡದ ಅಪೂರ್ವ ಚಳವಳಿಗಾರ ತನ್ನ ಇಬ್ಬರು ಚಿಕ್ಕ ಮಕ್ಕಳಾದ ದಿನಕರ ಹಾಗೂ ಮಂಜುನಾಥ ಇವರನ್ನು 1967ರ ಡಿಸಂಬರ್ 25ರಂದು ಅವರ ತೋಟದಲ್ಲಿ ತೋಡಿಸುತ್ತಿದ್ದ ಬಾವಿಯ ಕೆಲಸ ವೀಕ್ಷಿಸಲು ಹೋಗಿ ಮಣ್ಣು ಜಾರಿ ಒಂದೇ ಬಾವಿಯಲ್ಲಿ ಬಿದ್ದು ತಂದೆ ಮಕ್ಕಳು ಮೂವರು ಸಹ ವಿಧಿವಶರಾದುದು ಕನ್ನಡ ನಾಡು ಕಂಡ ಘೋರ ದುರಂತ ಇದಾಗಿದೆ. ಈ ಘಟನೆಯಿಂದ ಒಬ್ಬಂಟಿಯಾದ ಮ. ರಾಮಮೂರ್ತಿ ಅವರ ಧರ್ಮಪತ್ನಿ ಕಮಲಮ್ಮನವರು ತಮ್ಮ ಜೀವನದುದ್ದಕ್ಕೂ ಕಷ್ಟವನ್ನು ಎದುರಿಸಿದವರು. ಈಗ ಅವರ ಸ್ಥಿತಿ ತೀರಾ ಹದಗೆಟ್ಟಿದೆ. 97ರ ಹಿರಿಯ ಜೀವಕ್ಕೆ ಆರ್ಥಿಕ ಸಹಾಯವನ್ನು ಒದಗಿಸುವುದು ತೀರಾ ಜರೂರಾಗಿದೆ.

ಈ ಕುರಿತು ಕಮಲಮ್ಮ ರಾಮಮೂರ್ತಿಯವರು ತಮ್ಮ ಇಳಿವಯಸ್ಸಿನಲ್ಲಿ ಬದುಕಿಗೆ ಸಹಾಯವನ್ನು ಅಪೇಕ್ಷಿಸಿ, ವೃದ್ಧಾಪ್ಯವೇತನ, ಜೀವನೋಪಾಯ ಹಾಗೂ ಶುಶ್ರೂಷೆಗಾಗಿ ಆರ್ಥಿಕ ಸಹಾಯವನ್ನು ಒದಗಿಸಬೇಕೆಂದು ದಿನಾಂಕ 09-06-2022 ರಂದು ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಆಗ ಸರಕಾರಕ್ಕೆ ಇವರ ಮನವಿಯನ್ನು ಆದ್ಯತೆ ಮೇರೆಗೆ ಪೂರೈಸುವಂತೆ ಕೋರಿ ಕನ್ನಡಪರ ಚಿಂತಕರಾದ ಬೇಲಿಮಠ ಮಹಾಸಂಸ್ಥಾನದ ಪೂಜ್ಯಶ್ರೀ ಶಿವರುದ್ರ ಮಹಾಸ್ವಾಮಿಗಳು ಹಾಗೂ ಹಿರಿಯ ಮುತ್ಸದ್ಧಿ ರಾಜಕಾರಣಿ, ಇತ್ತೀಚಿಗಷ್ಟೇ ‘ಪದ್ಮವಿಭೂಷಣ’ ಪ್ರಶಸ್ತಿಗೆ ಭಾಜನರಾದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರೂ ಸಹ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದರು. ಆದರೆ ಸರಕಾರದಿಂದ ಸೂಕ್ತ ಉತ್ತರ ನೀಡದೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅವರ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ದಾಖಲೆ ಸಹಿತ ಪತ್ರ ಬರೆಯಲಾಗಿದೆ.

ಕನ್ನಡ ಪರ ಹೋರಾಟಗಾರರಿಗೆ ಅಪಮಾನ: ಒಬ್ಬ ಧೀಮಂತ ಕನ್ನಡ ಚಳುವಳಿಗಾರರ ಕುಟುಂಬಕ್ಕೆ ಅಗೌರವ ತೋರಿಸುವುದು, ಕನ್ನಡಪರ ಹೋರಾಟಗಾರರಿಗೆ ಅಪಮಾನ ಮಾಡಿದಂತೆ. ಈ ಘಟನೆ ಸರಕಾರದ ಅಧಿಕಾರಿಗಳಲ್ಲಿ ನಾಡು-ನುಡಿ, ಸಂಸ್ಕೃತಿಯ ಬಗ್ಗೆ ಹೊಂದಿರುವ ತಾತ್ಸಾರ ಮನೋಭಾವನೆಯನ್ನು ಎತ್ತಿ ತೋರಿಸುತ್ತದೆ. ಕನ್ನಡದ ಹೋರಾಟದ ಇತಿಹಾಸವನ್ನು ಅರಿತು, ಆಡಳಿತಶಾಹಿ ಧೋರಣೆಯನ್ನು ತೋರದೇ ಮಾನವೀಯ ಮೌಲ್ಯಗಳನ್ನು ಗೌರವಿಸುವ ಜವಾಬ್ದಾರಿಯನ್ನು ಅಧಿಕಾರಿಗಳು ಹೊಂದಬೇಕಾಗಿದೆ. ಸ್ವತಃ ಕಮಲಮ್ಮನವರೇ ತಮ್ಮ ಕಡುಕಷ್ಟವನ್ನು ತೋಡಿಕೊಂಡಾಗಲೂ ಸಹಾಯದ ನೆರವು ನೀಡದೇ ಅವರ ಮನವಿಯನ್ನು ಸಾಕಾರಗೊಳಿಸದೇ ತಿರಸ್ಕರಿಸಿರುವುದು ಸರಿಯಲ್ಲ.

37 ಸಾವಿರ ಸರ್ಕಾರಕ್ಕೆ ಭಾರವಲ್ಲ: ಕಮಲಮ್ಮನವರಿಗೆ ಅವರು ಕೋರಿರುವಂತೆ ತಿಂಗಳಿಗೆ ರೂಪಾಯಿ 37 ಸಾವಿರ ರೂಪಾಯಿಗಳನ್ನು ನೀಡುವುದು ಸರ್ಕಾರಕ್ಕೆ ಭಾರವಲ್ಲ. ಕನ್ನಡಪರ ಅಪಾರ ಕಾಳಜಿಯುಳ್ಳ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಕಮಲಮ್ಮ ರಾಮಮೂರ್ತಿ ಅವರಿಗೆ ಜೀವನೋಪಾಯಕ್ಕಾಗಿ ವೃದ್ಯಾಪ್ಯವೇತನವನ್ನು ಹಾಗೂ ಶುಶ್ರೂಷೆಯನ್ನು ಭರಿಸಲು ಸರ್ಕಾರದಿಂದ ಅಗತ್ಯ ಆರ್ಥಿಕ ಸಹಾಯ ಮತ್ತು ಸಹಕಾರವನ್ನು ಒದಗಿಸಬೇಕು ಎಂದು ಸರಕಾರಕ್ಕೆ ಪತ್ರದ ಮೂಲಕ ಮಹೇಶ್ ಜೋಶಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಯೋಜನೆಗಳನ್ನು ಫಲಾನುಭವಿಗಳಿಗೆ ಮುಟ್ಟಿಸಲು ಜಿಲ್ಲಾ ಮಟ್ಟದ ಸಮ್ಮೇಳನ ನಡೆಸಿ: ಅಧಿಕಾರಿಗಳಿಗೆ ಸಿಎಸ್‌ ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.