ETV Bharat / state

ನಡ್ಡಾ ವಿರುದ್ಧ ಕಿಡಿ, ಬಿಜೆಪಿಗೆ ಹಲವು ಪ್ರಶ್ನೆ ಕೇಳಿದ ಸಿದ್ದರಾಮಯ್ಯ - Opposition leader Siddaramaiah

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಸದುದ್ದೇಶ, ರಚನಾತ್ಮಕ ಟೀಕೆಯನ್ನು ಸಹಿಸಿಕೊಳ್ಳಲಾಗದಷ್ಟು ಅಸಹಿಷ್ಣು ಆಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಟೀಕೆ, ಉದ್ಧಟತನ ಅವರ ಕೀಳುಮಟ್ಟದ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Collection image
ಸಂಗ್ರಹ ಚಿತ್ರ
author img

By

Published : Apr 2, 2020, 11:51 PM IST

Updated : Apr 3, 2020, 9:24 AM IST

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಕುರಿತಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಹೇಳಿಕೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಸದುದ್ದೇಶದ, ರಚನಾತ್ಮಕ ಟೀಕೆಯನ್ನು ಸಹಿಸಿಕೊಳ್ಳಲಾಗದಷ್ಟು ಅಸಹಿಷ್ಣು ಆಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಟೀಕೆ, ಉದ್ಧಟತನ ಅವರ ಕೀಳುಮಟ್ಟದ ಮನಸ್ಥಿತಿಯನ್ನು ಬಿಂಬಿಸುತ್ತದೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಸಾವಿನಿಂದ ಹಿಡಿದು ರೋಗದವರೆಗೆ ಎಲ್ಲದರಲ್ಲಿಯೂ ರಾಜಕೀಯ ಲಾಭದ ಲೆಕ್ಕಾಚಾರ ಮಾಡುತ್ತಿರುವ ಬಿಜೆಪಿ ನಾಯಕರ ದುರಾಲೋಚನೆಯನ್ನು ಸಹಿಸಿಕೊಂಡರೆ ಜನತೆಗೆ ನಾವು ದ್ರೋಹ ಬಗೆದಂತಾಗುತ್ತದೆ. ನಾವು ಪ್ರಶ್ನೆ ಮಾಡುತ್ತೇವೆ, ನೀವು ಉತ್ತರಿಸಬೇಕು. ದೇಶದ ಮೊದಲ ಕೊರೊನಾ ವೈರಸ್ ಪೀಡಿತ ವ್ಯಕ್ತಿ ಪತ್ತೆಯಾಗಿರುವುದು ಜನವರಿ 30ರಂದು. ಈ ಬಗ್ಗೆ ಎಚ್ಚರದಿಂದ ಇರಬೇಕು, ನಿರ್ಲಕ್ಷ್ಯ ಮಾಡಬಾರದೆಂದು ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿರುವುದು ಫೆ. 12ರಂದು. ಇದರಲ್ಲಿ ಯಾವ ಕೀಳು ರಾಜಕೀಯ ಇತ್ತು ನಡ್ಡಾ ಅವರೇ? ಎಂದು ಪ್ರಶ್ನಿಸಿದ್ದಾರೆ.

ಟ್ರಂಪ್ ಬಂದಾಗ ಜನ ಸೇರಿಸಿದ್ದು ಯಾಕೆ?: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿದಾಗ ಆ ದೇಶದಲ್ಲಿ 80 ಜನರಿಗೆ ಕೊರೊನಾ ಸೋಂಕು ತಗಲಿತ್ತು. ಭಾರತದಲ್ಲಿ 20 ಜನರಲ್ಲಿ ಸೋಂಕು ಪತ್ತೆಯಾಗಿತ್ತು. ಹೀಗಿದ್ದರೂ ಗುಜರಾತ್‌ನಲ್ಲಿ ಲಕ್ಷ ಲಕ್ಷ ಜನರನ್ನು ಸೇರಿಸಿ ಜಾತ್ರೆ ಮಾಡಿದವರು ಯಾರು? ಈ ನಿರ್ಲಕ್ಷ್ಯಕ್ಕೆ ಯಾರು ಹೊಣೆ? ಮಾ. 16ರವರೆಗೆ ಆರು ದೇಶಗಳನ್ನು ಹೊರತುಪಡಿಸಿ ಉಳಿದೆಲ್ಲಾ ದೇಶಗಳ ವಿಮಾನ ಪ್ರಯಾಣಿಕರನ್ನು ಪರೀಕ್ಷೆ ಮಾಡದೆ ದೇಶದೊಳಗೆ ಬಿಟ್ಟವರು ಯಾರು? ಹೀಗೆ ಬಂದಿದ್ದ ಎರಡು ಲಕ್ಷ ಪ್ರಯಾಣಿಕರಲ್ಲಿ ಪರೀಕ್ಷೆಗೊಳಗಾದವರು ಎಷ್ಟು ಮಂದಿ? ಇದು ನಿಮ್ಮ ಸಿದ್ಧತೆಯಾ ನಡ್ಡಾ ಅವರೇ? ಎಂದು ಪ್ರಶ್ನಿಸಿದ್ದಾರೆ.

ಅಧಿವೇಶನ ನಡೆಸಿದ್ದು ಯಾರು?: ಅಧಿವೇಶನ ಮುಂದೂಡುವಂತೆ ಕಾಂಗ್ರೆಸ್ ಪಕ್ಷ ಒತ್ತಾಯಿಸಿದ ನಂತರವೂ ಲೋಕಸಭಾ ಅಧಿವೇಶನ ಮತ್ತು ಕರ್ನಾಟಕದಲ್ಲಿ ವಿಧಾನಸಭಾ ಅಧಿವೇಶನ ನಡೆಸಿದ್ದು ಯಾರು? ಜನತಾ ಕರ್ಫ್ಯೂ ಹೇರಿದ ನಂತರ ಲಾಕ್‌ಡೌನ್ ಆಗುವವರೆಗಿನ‌ ಮೂರು ದಿನಗಳ ಅವಧಿಯಲ್ಲಿ ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲ ನಡೆಸಿ ಅಧಿಕಾರ ಹಿಡಿಯುವುದು ಕೊರೊನಾ ಎದುರಿಸುವ ಸಿದ್ಧತೆಗಿಂತಲೂ ಆದ್ಯತೆಯ ವಿಷಯವಾಗಿತ್ತೇ ನಡ್ಡಾ ಅವರೇ?

ಚಪ್ಪಾಳೆ ತಟ್ಟಲು ಹೇಳಿದ್ದು ಯಾರು: ಜನತಾ ಕರ್ಫ್ಯೂ ಹೇರಿ ಚಪ್ಪಾಳೆ ತಟ್ಟಲು ಹೇಳಿ, ಜನ ಬೀದಿಗಿಳಿದು ಮೆರವಣಿಗೆ ಮಾಡುವಂತೆ ಮಾಡಿದ್ದು ಯಾರು? ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಮದುವೆಗೆ ಹೋಗ್ತಾರೆ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುಂಪು ಕಟ್ಟಿಕೊಂಡು ದೇವಸ್ಥಾನಕ್ಕೆ ಹೋಗ್ತಾರೆ. ಇವರಿಗೆ ಲಾಕ್‌ಡೌನ್ ಇರಲಿಲ್ಲವೇ? ಜನರಿಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಅವಕಾಶ ನೀಡದೆ, ದಿಢೀರನೆ ಲಾಕ್​ಡೌನ್ ಘೋಷಿಸಿ ಅರಾಜಕತೆ ಸೃಷ್ಟಿಸಿದ್ದು ಯಾರು? ಬಡಜನತೆ ಮೈಲುಗಟ್ಟಲೆ ಕಾಲ್ನಡಿಗೆಯಲ್ಲಿ ಊರಿಗೆ ಹೊರಟು ಬೀದಿಪಾಲಾಗುವಂತೆ ಮಾಡಿದ್ದು ಯಾರು ನಡ್ಡಾ ಅವರೇ?

ಅಡ್ಡಕಸುಬಿ ನಿರ್ಧಾರ: ನಿಮ್ಮ ಪ್ರಧಾನಿಯವರು ಕೈಗೊಳ್ಳುವ ಅಡ್ಡಕಸುಬಿ ನಿರ್ಧಾರಗಳಿಂದ ಜನ ಬವಣೆ ಪಡುತ್ತಿರುವಾಗ ಮತ್ತು ಅದರಿಂದಾಗಿಯೇ ಕೊರೊನಾ ವೈರಸ್ ಸೋಂಕು ಉಲ್ಬಣಗೊಳ್ಳುತ್ತಿರುವಾಗ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ನಾವು ಸುಮ್ಮನಿರಬೇಕೆಂದು ನೀವು ಬಯಸುತ್ತೀರಾ? ಕ್ಷಮಿಸಿ ನಡ್ಡಾ ಅವರೇ, ನಾವು ದೇಶದ ಜನತೆಗೆ ನಿಷ್ಠರಾಗಿರುವವರು. ಅವರ ಪರವಾಗಿ ದನಿ ಎತ್ತುವುದನ್ನು ನಿಲ್ಲಿಸುವುದಿಲ್ಲ. ನಿಮ್ಮ ಸಂಸ್ಕೃತಿ ಹೀನ, ಉದ್ಧಟತನದ ಟೀಕೆಗೆ ಬಗ್ಗುವುದಿಲ್ಲ. ನಾವು ಪ್ರಶ್ನೆ ಕೇಳುತ್ತೇವೆ, ನೀವು ಉತ್ತರಿಸಬೇಕಾಗುತ್ತದೆ ಎಂದು ಕಿಡಿಕಾರಿದ್ದಾರೆ.

Last Updated : Apr 3, 2020, 9:24 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.