ETV Bharat / state

ರೈತರ ಪರ ಮಾತಾಡಿದ್ರೆ ಶೋಕಾಸ್​ ನೋಟಿಸ್...ಕೇಂದ್ರದ ವಿರುದ್ದ ಗುಡುಗಿದ ನಾಡಗೌಡ

ಕಳೆದ ಎರಡು ದಿನಗಳ‌ ಹಿಂದೆ ಕೇಂದ್ರ ನೀಡಿರುವ 1200 ಕೋಟಿ ರೂ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಕೊಡಗಿನಲ್ಲಿ ಉಂಟಾಗಿದ್ದ ನೆರೆ ಪರಿಹಾರದ ಹಣ ಅದು. ಈಗ ನಮ್ಮ ಉತ್ತರ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಪರಿಹಾರ ನೀಡಿಲ್ಲ ಎಂದು ಕೇಂದ್ರದ ವಿರುದ್ಧ ನಾಡಗೌಡ ಕಿಡಿಕಾರಿದ್ದಾರೆ.

ನಾಡಗೌಡ
author img

By

Published : Oct 10, 2019, 1:46 PM IST

ಬೆಂಗಳೂರು: ಮೈತ್ರಿ ಸರ್ಕಾರದ ಅವಧಿಯಲ್ಲಿ ಆದ ನೆರೆ ಅನುದಾನ ಈಗ ಬಿಡುಗಡೆ ಆಗಿದೆ. ಕುಮಾರಸ್ವಾಮಿ ಅವ್ರಿಗೆ ಅನುದಾನ ಕೊಟ್ಟಿಲ್ಲ ಅದನ್ನ ಈಗ ಕೊಟ್ಟಿದ್ದಾರೆ ಎಂದು ಮಾಜಿ ಸಚಿವ ನಾಡಗೌಡ ಬಾಂಬ್​ ಸಿಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ನಾಡಗೌಡ

ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ಪರಿಹಾರ ನೀಡುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವುದನ್ನು ವಿರೋಧಿಸಿ ಇಂದು ಜೆಡಿಎಸ್ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ ನಾಡಗೌಡ, ರಾಜ್ಯದಲ್ಲಿ ನೆರೆ ಉಂಟಾಗಿ ಸಾಕಷ್ಟು ಹಾನಿಯಾಗಿದೆ. ರೈತರ ಬದುಕು ನಾಶವಾಗಿದೆ. ಹೀಗಾಗಿ ದೇವೇಗೌಡ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯುತ್ತೇವೆ ಎಂದರು.

ಕಳೆದ ಎರಡು ದಿನಗಳ‌ ಹಿಂದೆ ಕೇಂದ್ರ ನೀಡಿರುವ 1,200 ಕೋಟಿ ರೂ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ವೇಳೆ ಕೊಡಗಿನಲ್ಲಿ ಉಂಟಾಗಿದ ನೆರೆ ಪರಿಹಾರದ ಹಣವಾಗಿದೆ. ಈಗ ನಮ್ಮ ಉತ್ತರ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಪರಿಹಾರ ನೀಡಿಲ್ಲ ಎಂದರು.

ಯತ್ನಾಳ್ ಅವರ ಹೇಳಿಕೆ ನೋಡಿದ್ರೆ ಸರ್ಕಾರದಲ್ಲಿ ಏನೇನ್ ಆಗ್ತಿದೆ ಅಂತ ಗೊತ್ತಾಗ್ತಿದೆ. ರೈತರ ಪರ ಮಾತಾಡಿದ್ರೆ ಶೋಕಾಸ್​ ನೋಟಿಸ್ ಕೊಡ್ತಾರೆ. ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಎರಡೂ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ಈಗ ನಮ್ಮ ಉತ್ತರ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಪರಿಹಾರ ನೀಡಿಲ್ಲ. ಅಲ್ಲದೇ ನಮ್ಮ ಸರ್ಕಾರದಲ್ಲಿ ನಡೆದ ಕೆಲಸ ನಿಲ್ಲಿಸಿದ್ದಾರೆ. ನನ್ನ ಕ್ಷೇತ್ರಕ್ಕೆ ಅನುದಾನ ನಿಲ್ಲಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಮ್ಯಾನೇಜ್ ಮಾಡೋಕೆ ಆಗ್ದೇ ದಿಕ್ಕು ತಪ್ಪಿದ್ದಾರೆ. ಆ ಹಣವನ್ನ ಯಾರಿಗೆ ಕೊಟ್ಟಿದ್ದಾರೆ, ಎಲ್ಲಿಗೆ ಹೋಗ್ತಿದೆ ಅನ್ನೋ ಮಾಹಿತಿಯೇ ಇಲ್ಲ . ಇದರ ವಿರುದ್ಧ ಸದನದಲ್ಲಿ ಮಾತನಾಡುತ್ತೇನೆ ಎಂದರು. ಅಲ್ಲದೇ ಸದನದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ನಾಡಗೌಡ, ಸದನದಲ್ಲಿ ಫೇಸ್ ಮಾಡೋಕೆ ಆಗಲ್ಲ ಅನ್ನೋದು ಅವ್ರಿಗೆ ಅರ್ಥ ಆಗಿದೆ. ಹೀಗಾಗಿಯೇ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿದ್ದಾರೆ ಎಂದರು.

Intro:ಜೆಪಿ ಭವನದಲ್ಲಿ ಮಾಜಿ ಸಚಿವ ನಾಡಗೌಡ ಹೇಳಿಕೆ .

ಮೈತ್ರಿ ಸರ್ಕಾರದಲ್ಲಿ ಆದಂತಹ ನೆರೆ ಅನುದಾನ ಈಗ ಬಿಡುಗಡೆ ಆಗಿದೆ.ಕುಮಾರಸ್ವಾಮಿ ಅವ್ರಿಗೆ ಅನುದಾನ ಕೊಟ್ಟಿಲ್ಲ ಅದನ್ನ ಈಗ ಕೊಟ್ಟಿದ್ದಾರೆ ಎಂದು ಮಾಜಿ ಸಚಿವ ನಾಡಗೌಡ ಹೇಳಿದ್ದಾರೆ. ನೆರೆಸಂತ್ರಸ್ತರಿಗೆ ಕೇಂದ್ರ ಸರ್ಕಾರ ಪರಿಹಾರ ನೀಡುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವದ ವಿರೋಧಿಸಿ ಇಂದು ಜೆಡಿಎಸ್ ನಡೆಸುತ್ತಿರುವ ಪ್ರತಿಭಟನೆಲ್ಲಿ ಮಾತನಾಡಿದ ಮಾಜಿ ಸಚಿವ ನಾಡಗೌಡ ರಾಜ್ಯದಲ್ಲಿ ನೆರೆ ಉಂಟಾಗಿ ಸಾಕಷ್ಟು ಹಾನಿಯಾಗಿದೆ.ರೈತರ ಬದುಕು ನಾಶವಾಗಿದೆ ಹೀಗಾಗಿ ದೇವೇಗೌಡ ರವರ ನೇತೃತ್ವದಲ್ಲಿ ಪ್ರತಿಭಟನೆ ಇಂದು ಪ್ರತಿಭಟನೆ ಮಾಡುತ್ತಿದ್ದೇವೆ. ಪ್ರತಿಭಟನೆ ಮೂಲಕ ಸರ್ಕಾರದ ಗಮನ ಸೆಳೆಯುತ್ತೇವೆ . ಯತ್ನಾಳ್ ಅವರ ಹೇಳಿಕೆ ನೋಡಿದ್ರೆ ಸರ್ಕಾರದ ಏನೇನ್ ಆಗ್ತಿದೆ ಅಂತ ಗೊತ್ತಾಗ್ತಿದೆ. ರೈತರ ಪರ ಮಾತಾಡಿದ್ರೆ ಶೋಕಾಶ್ ನೋಟಿಸ್ ಕೊಡ್ತಾರೆ.ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆBody:.ಕಳೆದ ಎರಡುದಿನಗಳ‌ಹಿಂದೆ
ನೀಡಿರುವ ೧೨೦೦ ಕೋಟಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಕೊಡಗಿನಲ್ಲಿಉಂಟಾಗಿದ
ನೆರೆ ಪರಿಹಾರದ ಹಣ ಅದು.ಈಗ ನಮ್ಮ ಉತ್ತರ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಪರಿಹಾರ ನೀಡಿಲ್ಲ.ಅಲ್ಲದೆ
ನಮ್ಮ ಸರ್ಕಾರದಲ್ಲಿ ನಡೆದ ಕೆಲಸ ನಿಲ್ಲಿಸಿದ್ದಾರೆ .ನನ್ನ ಕ್ಷೇತ್ರದಲೇ ನೂರು ಕೋಟಿ ರೂ ಅನುದಾನ ನಿಲ್ಲಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಮ್ಯಾನೇಜ್ ಮಾಡೋಕೆ ಆಗ್ದೇ ದಿಕ್ಕು ತಪ್ಪಿದ್ದಾರೆ.ಆ ಹಣವನ್ನ ಯಾರಿಗೆ ಕೊಟ್ಟಿದ್ದಾರೆ, ಎಲ್ಲಿಗೆ ಹೋಗ್ತಿದೆ ಅನ್ನೋ ಮಾಹಿತಿಯೇ ಇಲ್ಲ . ಇದರ ವಿರುದ್ಧ ಸದನದಲ್ಲಿ ಮಾತಾಡ್ತೆವೆ ಎಂದರು .ಅಲ್ಲದೆ ಸದನದಲ್ಲಿ ಮಾಧ್ಯಮಗಳಿ ನಿರ್ಬಂಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಸದನದಲ್ಲಿ ಫೇಸ್ ಮಾಡೋಕೆ ಆಗಲ್ಲ ಅನ್ನೋದು ಅವ್ರಿಗೆ ಅರ್ಥ ಆಗಿದೆ. ಹೀಗಾಗಿಯೇ ಮಾಧ್ಯಮ ನಿರ್ಬಂಧ ಮಾಡ್ತಿದ್ದಾರೆ.ಜನರು ಜೀವನ ಜನರು ಹೆದರಿಸುವ ನೈತಿಕತೆ ಇಲ್ಲ.ಹಾಗಾಗಿ ಮಾದ್ಯಮ ದವ್ರನ್ನ ಒಳಗೆ ಬಿಡ್ತಿಲ್ಲ ಎಂದು ಹೇಳಿದರು.

ಸತೀಶ ಎಂಬಿ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.