ETV Bharat / state

ಪ್ರಯಾಣಿಕರ ಗಮನಕ್ಕೆ.. ನ. 2ರಿಂದ ಮೈಸೂರು-ಬೆಂಗಳೂರು ಮೆಮು ರೈಲು ಸೇವೆ ರದ್ದು ಸೇರಿ ಈ ಎಲ್ಲ ಬದಲಾವಣೆ - ಮೆಮು ರೈಲು ಸೇವೆ ರದ್ದು

ಇಂದಿನಿಂದ ಅಕ್ಟೋಬರ್ 27ರವರೆಗೆ ದ್ವಿ-ಪಥ ಕಾಮಗಾರಿಯ ಕಾರ್ಯಾರಂಭಕ್ಕೆ ಸಂಬಂಧಪಟ್ಟಂತೆ ಭಟ್ಟನಗರ (ಪೂರ್ವ ರೈಲ್ವೆ) ಮತ್ತು ಬಾಲ್ಟಿಕುರಿ (ಆಗ್ನೇಯ ರೈಲ್ವೆ) ನಿಲ್ದಾಣದಲ್ಲಿ ಪೂರ್ವ- ಇಂಟರ್​ಲಾಕಿಂಗ್ ಮತ್ತು ನಾನ್-ಇಂಟರಲಾಕಿಂಗ್ ಕೆಲಸದ ನಿಮಿತ್ತವಾಗಿ ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ.

mysuru-bengaluru-memu-rail-service-to-be-cancelled
ಪ್ರಯಾಣಿಕರ ಗಮನಕ್ಕೆ... ನ 2ರಿಂದ ಮೈಸೂರು-ಬೆಂಗಳೂರು ಮೆಮು ರೈಲು ಸೇವೆ ರದ್ದು ಸೇರಿ ಈ ಎಲ್ಲ ಬದಲಾವಣೆ
author img

By

Published : Oct 23, 2021, 12:29 PM IST

ಬೆಂಗಳೂರು: ನಾಯಂಡಹಳ್ಳಿ ಯಾರ್ಡ್​​ನಲ್ಲಿ ಥಿಕ್ ವೆಬ್ ಸ್ವಿಚ್‌ಗಳ ಕೆಲಸದ ಅಳವಡಿಕೆ ಕಾರ್ಯಕ್ಕಾಗಿ ಲೈನ್ ಬ್ಲಾಕ್ ತೆಗೆದುಕೊಂಡಿದ್ದು, ಹಲವು ರೈಲುಗಳ ಸೇವೆಯನ್ನು ರದ್ದುಪಡಿಸಲಾಗಿದೆ. ನವೆಂಬರ್ 2ರಿಂದ ಹಲವು ಮಾರ್ಗಗಳ ರೈಲು ಸೇವೆ ರದ್ದಾಗಲಿದೆ. ಜೊತೆಗೆ ಇತರೆ ಮಾರ್ಗಗಳಲ್ಲೂ ಬದಲಾವಣೆ ಇರಲಿದೆ.

ಮೈಸೂರಿನಿಂದ ಚಲಿಸುವ (ರೈಲು ಸಂಖ್ಯೆ 06560) ಮೈಸೂರು - ಕೆಎಸ್‌ಆರ್ ಬೆಂಗಳೂರು ಮೆಮು ರೈಲು ಸೇವೆಯು ನವೆಂಬರ್​ 02ರಿಂದ ಮತ್ತು ನ.11ರವರೆಗೆ ರದ್ದುಗೊಂಡಿದೆ. ಹಾಗೆಯೇ ನ. 03ರಿಂದ 12ರವರೆಗೆ ಬೆಂಗಳೂರಿನಿಂದ ಚಲಿಸುವ ಕೆಎಸ್‌ಆರ್ ಬೆಂಗಳೂರು - ಮೈಸೂರು ಮೆಮು ರೈಲಿನ (ರೈಲು ಸಂಖ್ಯೆ 06559) ಸಂಚಾರವನ್ನೂ ಕೂಡ ರದ್ದುಗೊಳಿಸಲಾಗಿದೆ.

ರೈಲುಗಳ ಮಾರ್ಗ ಬದಲಾವಣೆ:

ಇಂದಿನಿಂದ ಅಕ್ಟೋಬರ್ 27ರವರೆಗೆ ದ್ವಿ-ಪಥ ಕಾಮಗಾರಿಯ ಕಾರ್ಯಾರಂಭಕ್ಕೆ ಸಂಬಂಧಪಟ್ಟಂತೆ ಭಟ್ಟನಗರ (ಪೂರ್ವ ರೈಲ್ವೆ) ಮತ್ತು ಬಾಲ್ಟಿಕುರಿ (ಆಗ್ನೇಯ ರೈಲ್ವೆ) ನಿಲ್ದಾಣದಲ್ಲಿ ಪೂರ್ವ- ಇಂಟರ್​ಲಾಕಿಂಗ್ ಮತ್ತು ನಾನ್-ಇಂಟರಲಾಕಿಂಗ್ ಕೆಲಸದ ನಿಮಿತ್ತವಾಗಿ ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ. ಈ ರೈಲುಗಳು ಹೌರಾ, ಅಂಡುಲ್, ಖರಗ್‌ಪುರದ ಮೂಲಕ ಚಲಿಸಲಿದೆ.

1. ಗುವಾಹಟಿದಿಂದ ಹೊರಡುವ ರೈಲು 02510 ಗುವಾಹಟಿ - ಬೆಂಗಳೂರು ಕಂಟೋನ್ಮೆಂಟ್ ಎಕ್ಸ್​​ಪ್ರೆಸ್ ವಿಶೇಷ ರೈಲು ಅಕ್ಟೋಬರ್​ 24 (ನಾಳೆ), ಅ. 25 ಮತ್ತು 26ರಂದು ದನಕುಣಿ ನಿಲ್ದಾಣದಲ್ಲಿ ನಿಲುಗಡೆಯೊಂದಿಗೆ ಹೌರಾ, ಅಂಡುಲ್ ಮತ್ತು ಖರಗ್‌ಪುರ ಮಾರ್ಗವಾಗಿ ಚಲಿಸಲಿದೆ.

2. ಮುಜಾಫರಪುರದಿಂದ ಹೊರಡುವ ರೈಲು 05228 ಮುಜಾಫರಪುರ - ಯಶವಂತಪುರ ಎಕ್ಸ್​ಪ್ರೆಸ್ ವಿಶೇಷ ರೈಲು ಅಕ್ಟೋಬರ್ 25ರಂದು ದನಕುಣಿ ನಿಲ್ದಾಣದಲ್ಲಿ ನಿಲುಗಡೆಯೊಂದಿಗೆ ಹೌರಾ, ಅಂಡುಲ್ ಮತ್ತು ಖರಗ್‌ಪುರ ಮಾರ್ಗವಾಗಿ ಸಂಚರಿಸಲಿದೆ.

3. ಭಾಗಲಪುರದಿಂದ ಹೊರಡುವ ರೈಲು 02254 ಭಾಗಲಪುರ - ಯಶವಂತಪುರ ಎಕ್ಸ್​ಪ್ರೆಸ್ ವಿಶೇಷ ರೈಲು ಅಕ್ಟೋಬರ್ 27ರಂದು ದನಕುಣಿ ನಿಲ್ದಾಣದಲ್ಲಿ ನಿಲುಗಡೆಯೊಂದಿಗೆ ಹೌರಾ, ಅಂಡುಲ್ ಮತ್ತು ಖರಗ್‌ಪುರ ಮಾರ್ಗವಾಗಿ ಚಲಿಸಲಿದೆ.

4. ಅಗರ್ತಲಾದಿಂದ ಹೊರಡುವ ರೈಲು ಸಂಖ್ಯೆ 02984 ಅಗರ್ತಲಾ - ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 26ರಂದು ದನಕುಣಿ ನಿಲ್ದಾಣದಲ್ಲಿ ನಿಲುಗಡೆಯೊಂದಿಗೆ ಹೌರಾ, ಅಂಡುಲ್ ಮತ್ತು ಖರಗ್‌ಪುರ ಮಾರ್ಗವಾಗಿ ತೆರಳಲಿದೆ.

5. ಕೆ.ಎಸ್. ಆರ್ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 02249 ಕೆ.ಎಸ್. ಆರ್ ಬೆಂಗಳೂರು - ನ್ಯೂ ಟಿನ್ಸುಕಿಯಾ ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 26ರಂದು ದನಕುಣಿ ನಿಲ್ದಾಣದಲ್ಲಿ ನಿಲುಗಡೆಯೊಂದಿಗೆ ಖರಗ್‌ಪುರ, ಆಂದುಲ್, ಹೌರಾ ಮಾರ್ಗ ಮೂಲಕ ಚಲಿಸಲಿದೆ.

6. ಬೆಂಗಳೂರು ಕಂಟೋನ್ಮೆಂಟ್‌ದಿಂದ ಹೊರಡುವ ರೈಲು ಸಂಖ್ಯೆ 05487 ಬೆಂಗಳೂರು ಕಂಟೋನ್ಮೆಂಟ್ - ಅಗರ್ತಲಾ ವಿಶೇಷ ಎಕ್ಸ್‌ಪ್ರೆಸ್ ರೈಲು ಅ. 26ರಂದು ದನಕುಣಿಯಲ್ಲಿ ನಿಲುಗಡೆಯೊಂದಿಗೆ ಖರಗ್‌ಪುರ, ಆಂದುಲ್, ಹೌರಾ ಮಾರ್ಗ ಮೂಲಕ ಸಂಚಾರ ಮಾಡಲಿದೆ.

ಇದನ್ನೂ ಓದಿ: ತಿರುಪತಿಯಲ್ಲಿ ಘೋರ ದುರಂತ..ರಾಯಚೂರಿನ ನವವಧು ವಾಹನದಲ್ಲೇ ಜಲಸಮಾಧಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.