ETV Bharat / state

ಬೆಂಗಳೂರಲ್ಲಿ ನಿಗೂಢ ಶಬ್ದ: ಭೂಮಿ ಕಂಪಿಸಿದ ಅನುಭವದಿಂದ ಆತಂಕಕ್ಕೊಳಗಾದ ಜನರು

ಬೆಂಗಳೂರಿನ ಹಲವೆಡೆ ಇಂದು ಸ್ಫೋಟದ ಸದ್ದಿನೊಂದಿಗೆ ಭೂಕಂಪನದ ಅನುಭವವಾಗಿದೆ.

loud sound heard in Bengaluru
ಬೆಂಗಳೂರಲ್ಲಿ ನಿಗೂಢ ಶಬ್ದ
author img

By

Published : Nov 26, 2021, 1:51 PM IST

Updated : Nov 26, 2021, 3:33 PM IST

ಬೆಂಗಳೂರು: ನಗರದಲ್ಲಿ ಇಂದು ಸ್ಫೋಟದ ಸದ್ದಿನೊಂದಿಗೆ ಭೂಕಂಪನದ ಅನುಭವವಾಗಿದೆ. ಬೆಳಗ್ಗೆ 11-50ರಿಂದ 12-15ರ ಸಮಯದಲ್ಲಿ ಶಬ್ದವು ಕೇಳಿಬಂದಿದ್ದು, ಜನರು ಭಯಭೀತರಾಗಿದ್ದರು.

ಭಾರಿ ಶಬ್ದದಿಂದ ನಗರದ ಹೆಮ್ಮಿಗೆಪುರ, ಕೆಂಗೇರಿ, ಜ್ಞಾನಭಾರತಿ, ಆರ್.ಆರ್. ನಗರ, ಕಗ್ಗಲಿಪುರದ ಸುತ್ತಮುತ್ತಲಿನ ನಿವಾಸಿಗಳಲ್ಲಿ ಆತಂಕ ಮನೆ ಮಾಡಿತ್ತು.

ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಸ್ಥಳೀಯವಾಗಿ ಭೂಕಂಪನದ ಯಾವುದೇ ಮಾಹಿತಿ ದಾಖಲಾಗಿಲ್ಲ. ಭೂಕಂಪ ಮಾಪನ ಸಿಸ್ಮೋಗ್ರಾಫ್​​ನಲ್ಲಿ ಭೂಕಂಪನವಾದ ಮಾಹಿತಿ ಇಲ್ಲದಿರುವುದರಿಂದ ಭೂಕಂಪನ ಆಗಿಲ್ಲ ಎಂದು ಸ್ಪಷ್ಟಪಡಿಸಿದೆ.

ಸ್ಥಳೀಯರು ಹೇಳಿದ್ದೇನು?

ಇದನ್ನೂ ಓದಿ: ಜನರೇ ಎಚ್ಚರ: ಮತ್ತೆ ರಾಜ್ಯದಲ್ಲಿ ಮೂರು ದಿನಗಳ ಕಾಲ ಭಾರಿ ಮಳೆ!

Last Updated : Nov 26, 2021, 3:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.