ETV Bharat / state

ದಬ್ಬಾಳಿಕೆಗೆ ಬೇಸತ್ತು ಕೊಲೆ.. ವ್ಯಕ್ತಿ ಹತ್ಯೆಗೈದು ಶವ ರಾಜಕಾಲುವೆಗೆ ಎಸೆದ ಐವರ ಬಂಧನ - Oppression on accused

ಕೊಲೆಯಾದ ಧನ್‌ಸಿಂಗ್ ದಾಮಿ ಆರೋಪಿಗಳಿಗಿಂತ ವಯಸ್ಸಿನಲ್ಲಿ ದೊಡ್ಡವನಾಗಿದ್ದು, ಆರೋಪಿಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದ. ಮದ್ಯ ಕುಡಿಸಿ, ಸಿಗರೇಟ್ ಕೊಡಿಸಿ ಎಂದು ಬೇಡಿಕೆ ಇಡುತ್ತಿದ್ದ ಎಂದು ಆರೋಪಿಗಳು ಹೇಳಿಕೆ ನೀಡಿದ್ದಾರೆ.

Accused
ಕೊಲೆ ಮಾಡಿದ ಆರೋಪಿಗಳು
author img

By

Published : Dec 5, 2022, 7:32 AM IST

Updated : Dec 5, 2022, 2:48 PM IST

ಬೆಂಗಳೂರು: ಕಾಲೇಜು ದಿನಗಳಿಂದಲೂ ತಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾನೆ ಎಂಬ ಆರೋಪದ ಮೇಲೆ ಸಹೋದ್ಯೋಗಿಯೊಬ್ಬನನ್ನು ಕೊಂದು ರಾಜಕಾಲುವೆಗೆ ಎಸೆದಿದ್ದ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಸೇರಿ ಐವರು ಆರೋಪಿಗಳನ್ನು ಘಟನೆ ನಡೆದ ಎರಡೇ ಗಂಟೆಯಲ್ಲಿ ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ.

ಬಾಬುಸಾಬ್ ಪಾಳ್ಯದ ದಿನೇಶ್ ಸಿಂಗ್ ದಾಮಿ(19), ಶೇರ್‌ಸಿಂಗ್ ದಾಮಿ(20), ದೀಪಕ್(19), ನರೇಂದ್ರ(20) ಬಂಧಿತರು. ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ. ಆರೋಪಿಗಳು ನ.30ರಂದು ನೇಪಾಳ ಮೂಲದ ಧನ್‌ಸಿಂಗ್ ದಾಮಿ(23) ಎಂಬಾತನನ್ನು ಕೊಲೆಗೈದು ಬಾಬುಸಾಬು ಪಾಳ್ಯದ ರಾಜಕಾಲುವೆಯಲ್ಲಿ ಎಸೆದಿದ್ದರು. ಆರೋಪಿಗಳು ಮತ್ತು ಕೊಲೆಯಾದ ವ್ಯಕ್ತಿ ನೇಪಾಳ ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ.

ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್

ಕೊಲೆ ರಹಸ್ಯ ಬಯಲು: ಭಾನುವಾರ ಸಂಜೆ ಬಾಬುಸಾಬ್ ಪಾಳ್ಯದ ರಾಜಕಾಲುವೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ಮೃತದೇಹ ಹೊರತೆಗೆದು ಪರಿಶೀಲಿಸಿದಾಗ, ಆತನ ದೇಹಗಳ ಮೇಲೆ ಗಾಯದ ಗುರುತು, ಊದಿಕೊಂಡಿರುವುದು ಪತ್ತೆಯಾಗಿತ್ತು. ನಂತರ ಕೊಲೆ ಪ್ರಕರಣ ದಾಖಲಿಸಿಕೊಂಡು ಮೃತನ ಮಾಹಿತಿ ಸಂಗ್ರಹಿಸಿದ ಪೊಲೀಸರಿಗೆ ಕೊಲೆಯಾದ ಯುವಕ ನೇಪಾಳ ಮೂಲದವನಾಗಿದ್ದು, ಬಾಬುಸಾಬ್ ಪಾಳ್ಯದ ನಂಜಪ್ಪ ಗಾರ್ಡನ್‌ನಲ್ಲಿರುವ ಪಿಜಿಯಲ್ಲಿ ಹೌಸ್‌ಕೀಪಿಂಗ್ ಕೆಲಸ ಮಾಡುತ್ತಿದ್ದ ವಿಚಾರ ಗೊತ್ತಾಗಿದೆ. ಬಳಿಕ ಅಲ್ಲೇ ಇದ್ದ ಕೆಲಸಗಾರರನ್ನು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ದಬ್ಬಾಳಿಕೆ ಮಾಡುತ್ತಿದ್ದ ಕೊಲೆಯಾದ ವ್ಯಕ್ತಿ: ನಾಲ್ಕು ತಿಂಗಳ ಹಿಂದೆ ಭಾರತಕ್ಕೆ ಬಂದು ಎರಡು ತಿಂಗಳಿಂದ ನಗರದ ಬಾಬುಸಾಬ್ ಪಾಳ್ಯದ ಎಸ್.ಎಸ್.ಪಿಜಿಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಕೊಲೆಯಾದ ಧನ್‌ಸಿಂಗ್ ದಾಮಿ ಆರೋಪಿಗಳಿಗಿಂತ ವಯಸ್ಸಿನಲ್ಲಿ ದೊಡ್ಡವನಾಗಿದ್ದು, ಆರೋಪಿಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದ. ಮದ್ಯ ಕುಡಿಸಿ, ಸಿಗರೇಟ್ ಕೊಡಿಸಿ ಎಂದು ಬೇಡಿಕೆ ಇಡುತ್ತಿದ್ದ. ಕೆಲವೊಮ್ಮೆ ಮದ್ಯ ಸೇವಿಸಿ ಹಲ್ಲೆ ಕೂಡ ಮಾಡಿದ್ದಾನೆ. ಜತೆಗೆ ಈ ಮೊದಲೇ ನೇಪಾಳದಲ್ಲಿ ಕಾಲೇಜಿನಲ್ಲಿ ಓದುವಾಗಲೂ ದಬ್ಬಾಳಿಕೆ ಮಾಡುತ್ತಿದ್ದನಂತೆ. ಅದರಿಂದ ಬೇಸತ್ತು ಕೊಲೆಗೆ ಸಂಚು ರೂಪಿಸಿದೆವು ಎಂದು ಆರೋಪಿಗಳು ಹೇಳಿಕೆ ನೀಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಮೊದಲೇ ಪ್ಲಾನ್​ ಮಾಡಿ ಕೊಲೆ: ನ.30 ರಂದು ರಾತ್ರಿ 11.30ರ ಸುಮಾರಿಗೆ ಮದ್ಯ ಸೇವಿಸಿ ಪಿಜಿಗೆ ಬಂದಿದ್ದ ಧನ್​ಸಿಂಗ್ ದಾಮಿ, ಸಿಗರೇಟ್ ಕೊಡಿಸುವಂತೆ ಆರೋಪಿಗಳನ್ನು ಪೀಡಿಸಿದ್ದಾನೆ. ಅಷ್ಟರಲ್ಲಿ ಈತನ ಕೊಲೆಗೆ ಸಂಚು ರೂಪಿಸಿದ್ದ ಆರೋಪಿಗಳಲ್ಲಿ ಮೂವರು ಬಾಬುಸಾಬ್ ಪಾಳ್ಯದ ರಾಜಕಾಲುವೆ ಬಳಿ ಕಾಯುತ್ತಿದ್ದರು. ಇಬ್ಬರು ಸಿಗರೇಟ್ ಕೊಡಿಸುವುದಾಗಿ ಪಿಜಿಯಿಂದ ಹೊರಗಡೆ ಕರೆತಂದಿದ್ದಾರೆ. ನಂತರ ರಾಜಕಾಲುವೆ ಬಳಿ ಕರೆದೊಯ್ದು ಹಲ್ಲೆ ನಡೆಸಿ, ಧನ್​ಸಿಂಗ್ ಧರಿಸಿದ್ದ ಬೆಲ್ಟ್​ ಬಿಚ್ಚಿ ಕುತ್ತಿಗೆಗೆ ಬಿಗಿದು ಕೊಲೆಗೈದಿದ್ದಾರೆ. ನಂತರ ಮೃತದೇಹವನ್ನು ರಾಜಕಾಲುವೆಗೆ ಎಸೆದಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.

ಇದನ್ನೂ ಓದಿ: ಉಳ್ಳಾಲದ ಬಾವಿಯಲ್ಲಿ ಬೆಂಗಳೂರು ಯುವಕನ ಮೃತದೇಹ ಪತ್ತೆ

Last Updated : Dec 5, 2022, 2:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.