ಬೆಂಗಳೂರು: ಅಪರಿಚಿತನಿಂದ ಕೊಲೆ ಬೆದರಿಕೆ ಬಂದಿರುವ ಹಿನ್ನೆಲೆ ಕ್ರಮ ಕೈಗೊಳ್ಳುವಂತೆ ಹೊನ್ನಾಳ್ಳಿ ಶಾಸಕ, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಅವರು ಸದಾಶಿವನಗರ ಪೊಲೀಸ್ ಠಾಣೆಗೆ ಇಂದು ದೂರು ನೀಡಿದ್ದಾರೆ. ಬುಧವಾರ ಬೆಳಗ್ಗೆ ಶಾಸಕರಿಗೆ ಅಪರಿಚಿತನಿಂದ ಮೂರ್ನಾಲ್ಕು ಬಾರಿ ಕರೆ ಬಂದಿದ್ದು, ಅಧಿವೇಶನದಲ್ಲಿದ್ದಿದ್ದರಿದ ಕರೆ ಸ್ವೀಕರಿಸಿರಲಿಲ್ಲವಂತೆ.
ಸಂಜೆ 4 ಗಂಟೆ ಸುಮಾರಿಗೆ ಮತ್ತೆ ಅದೇ ನಂಬರಿನಿಂದ ಬಂದ ಕರೆ ಸ್ವೀಕರಿಸಿದಾಗ, ಅವಾಚ್ಯ ಪದಗಳಿಂದ ನಿಂದಿಸುತ್ತಲೇ ಮಾತನ್ನಾರಂಭಿಸಿರುವ ಅನಾಮಧೇಯ ವ್ಯಕ್ತಿ, 'ಹಿಜಾಬ್, ಹಲಾಲ್ ಬಗ್ಗೆ ಮಾತನಾಡುತ್ತೀರಾ? ಇಷ್ಟು ದಿನ ಇಲ್ಲದಿರುವುದು ಈಗ್ಯಾಕೆ? ಇನ್ನೊಮ್ಮೆ ಮಾತನಾಡಿದ್ರೆ ಕೊಚ್ಚಿ ಕೊಲೆಗೈಯ್ತೀನಿ' ಅಂತಾ ಬೆದರಿಕೆ ಹಾಕಿದ್ದನಂತೆ.
ಇದನ್ನೂ ಓದಿ : 2021ನೇ ಸಾಲಿನ ಮುಖ್ಯಮಂತ್ರಿ ಪದಕ ಪಟ್ಟಿ ಪ್ರಕಟ
ಬೆದರಿಕೆ ಹಾಕಿದವನೊಂದಿಗೆ ಮಾತನಾಡುತ್ತಲೇ ಶಾಸಕ ರೇಣುಕಾಚಾರ್ಯ ಸದಾಶಿವನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.