ETV Bharat / state

ಬೆಂಗಳೂರು ಪೊಲೀಸ್ ಠಾಣೆ ಬಳಿ ವ್ಯಕ್ತಿಯ ಹತ್ಯೆ... ಗಣೇಶೋತ್ಸವ ಜಗಳ ಕೊಲೆಯಲ್ಲಿ ಅಂತ್ಯ! - ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆ

ಗಣೇಶೋತ್ಸವದಲ್ಲಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಮುರುಳಿ ಎಂಬುವವರ ತಂಡದಿಂದ ಛಲಪತಿ ಎಂಬುವವರ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದೆ ಎಂದು ಪ್ರಕರಣ ದಾಖಲಾಗಿದೆ.

ಕೊಲೆಯಾಗಿರುವ ಛಲಪತಿ
author img

By

Published : Sep 15, 2019, 12:21 PM IST

ಬೆಂಗಳೂರು: ಗಣೇಶೋತ್ಸವದಲ್ಲಿ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆ ಸಮೀಪದಲ್ಲೇ ಶುಕ್ರವಾರ ಮುರುಳಿ ಎಂಬುವವರ ತಂಡವು ಛಲಪತಿ ಎಂಬುವವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದೆ ಎಂದು ತಿಳಿದುಬಂದಿದೆ.

ಮುರುಳಿ ಎಂಬಾತ ಇಂಜಿನಿಯರಿಂಗ್​​ ವರ್ಕ್ಸ್​​​ ಶಾಪ್​ ಇಟ್ಟುಕೊಂಡು ಕೆಲಸ ಮಾಡುತ್ತಿದ್ದರು. ಇವರ ಕೈಕೆಳಗೆ ಇಬ್ಬರು ಕೆಲಸ ಮಾಡುತ್ತಿದ್ದರು. ಇನ್ನು ಶುಕ್ರವಾರ ಬೆಳಗ್ಗೆ 10ರ ಸುಮಾರಿಗೆ ಮುರುಳಿ ಗ್ಯಾಂಗ್​ ಛಲಪತಿ ಮೇಲೆ ಅಟ್ಯಾಕ್​ ಮಾಡಿ, ಮನಸೋ ಇಚ್ಛೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ನಂತರ ಛಲಪತಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದರೂ ಸಾವನ್ನಪ್ಪಿದ್ದಾನೆ.

ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ, ಕೊಲೆಯಲ್ಲಿ ಅಂತ್ಯ...!

ಏನಿದು ಪ್ರಕರಣ...?

ಕೆಲ ದಿನಗಳ ಹಿಂದೆ ಗಣೇಶೋತ್ಸವ ಮೆರವಣಿಗೆ ಸಂದರ್ಭದಲ್ಲಿ ಛಲಪತಿ ಹಾಗೂ ಮುರುಳಿ ಮಧ್ಯೆ ಕ್ಷುಲ್ಲಕ ಕಾರಣಕ್ಕಾಗಿ ಮಾತಿಗೆ ಮಾತು ಬೆಳೆದು ಬಡಿದಾಡಿಕೊಂಡಿದ್ದರು. ತನ್ನ ತಂದೆಯನ್ನು ಏಕವಚನದಲ್ಲಿ ನಿಂದಿಸಿದ್ದ ಎನ್ನುವ ಕಾರಣಕ್ಕಾಗಿ ಮುರಳಿ ಹಾಗೂ ಛಲಪತಿ ನಡುವೆ ಗಲಾಟೆ ನಡೆದಿತ್ತು.

ಈ ಬಗ್ಗೆ ಇಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿ ರಾಜಿ ಸಂಧಾನ ಕೂಡಾ ಆಗಿತ್ತು, ಆದರೇ ಇದೇ ವಿಚಾರವಾಗಿ ಎಲ್ಲರ ಮುಂದೆ ಮಾನ ಮರ್ಯಾದೆ ತೆಗೆದ ಎಂಬ ಕಾರಣಕ್ಕಾಗಿ ಮುರಳಿ ಕತ್ತಿ ಮಸೆಯುತ್ತಿದ್ದ ಎನ್ನಲಾಗಿದೆ. ತನ್ನ ಸಹಚರರೊಂದಿಗೆ ಛಲಪತಿ ಕೆಲಸ ಮಾಡುತ್ತಿದ್ದಾಗ ಮುರುಳಿ ಬಂದು ಹಲ್ಲೆ ಮಾಡಿ ಕೊಲೆ ಗೈದಿದ್ದಾನೆ. ಈ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಮಹದೇವಪುರ.

ಗಣೇಶೊತ್ಸವ ಮೆರವಣಿಗೆಯಲ್ಲಿ ಕಿರಿಕ್ ವಾರ್ ನಿಂದ ಓರ್ವನ ಕೊಲೆ

ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಗಲಭೆ ನಡೆದು ಕೈಕೈ ಮಿಲಾಯಿಸಿಕೊಂಡು, ಪೋಲಿಸರ ಸಮ್ಮುಖದಲ್ಲಿ ರಾಜಿ ಸಂಧಾನವೂ ನಡೆದಿದ್ದರು, ಆದರೇ ಇಷ್ಟಕ್ಕೆ ಸುಮ್ಮನಾಗದ ಅವರ ಕೋಪದಿಂದ ಇಂದು ಬೆಳ್ಳಂಬೆಳಿಗ್ಗೆಯೇ ಮೂವರು ದುಷ್ಕರ್ಮಿಗಳ ತಂಡ ಕಾರಿನಲ್ಲಿ ಬಂದು ಓರ್ವನನ್ನು ಮಚ್ಚು ಲಾಂಗುಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆ ಸಮೀಪದಲ್ಲೆ ನಡೆದಿದೆ.

ಆತ ಇಂಜಿನಿಯರಿಂಗ್ ವರ್ಕ್ಸ್ ಒಂದರ ಮಾಲೀಕ ,ಇಬ್ಬರು ಕೆಲಸಗಾರರನ್ನು ಇಟ್ಟು ಕೊಂಡು ಲೇತ್ ಮೆಷಿನ್ ಕೆಲಸ ಮಾಡುತ್ತಿದ್ದ ಆತನ ಹೆಸರು ಛಲಪತಿ ವಯಸ್ಸು 38 ಗರುಡಾಚಾರ್ ಪಾಳ್ಯ ಸಮೀಪದ ಅಂಬೇಡ್ಕರ್ ನಗರ ನಿವಾಸಿ...ಶುಕ್ರವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ತನ್ನ ಗಾಯಿತ್ರಿ ಇಂಜಿನಿಯರಿಗ್ ವರ್ಕ್ಸ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸ್ಪಿಪ್ಟ್ ಡಿಸೈರ್ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಮಚ್ಚು,ಲಾಂಗುಗಳಿಂದ ಛಲಪತಿ ಮೇಲೆ ಮನಸೋಇಚ್ಚೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ...ಕೂಡಲೇ ಸ್ಥಳೀಯರು ಹಲ್ಲೆಗೊಳಗಾದ ಛಲಪತಿಯನ್ನು ಆಸ್ಪತ್ರೆಗೆ ಸಾಗಿಸಲು ಮುಂದಾದರಾದರು, ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಮಾರ್ಗಮದ್ಯೆಯೇ ಸಾವನ್ನಪ್ಪಿದ್ದಾನೆ...

Body: ಕೆಲ ದಿನಗಳ ಹಿಂದೆ ಗಣೇಶೊತ್ಸವ ಮೆರವಣಿಗೆ ಸಂದರ್ಭದಲ್ಲಿ ಸಾವನ್ನಪ್ಪಿದ ಛಲಪತಿಗೂ ಇದೇ ಅಂಬೇಡ್ಕರ್ ನಗರದ ನಿವಾಸಿ ಮುರುಳಿ ಎಂಬಾತನಿಗೂ ಕ್ಷುಲ್ಲಕ ಕಾರಣಕ್ಕಾಗಿ ಮಾತಿಗೆ ಮಾತು ಬೆಳೆದು ಬಡಿದಾಡಿಕೊಂಡಿದ್ದರು, ತನ್ನ ತಂದೆಯನ್ನು ಎಕವಚನದಲ್ಲಿ ನಿಂದಿಸಿದ್ದ ಎನ್ನುವ ಕಾರಣಕ್ಕಾಗಿ ಮುರಳಿ ಹಾಗೂ ಛಲಪತಿ ನಡುವೆ ಗಲಾಟೆ ನಡೆದಿತ್ತು, ಈ ಬಗ್ಗೆ ಇಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿ ರಾಜಿ ಸಂಧಾನ ಕೂಡಾ ಆಗಿತ್ತು, ಆದರೇ ಇದೇ ವಿಚಾರವಾಗಿ ಎಲ್ಲರ ಮುಂದೆ ಮಾನ ಮರ್ಯಾದೆ ತೆಗೆದ ಎಂಬ ಕಾರಣಕ್ಕಾಗಿ ಮುರಳಿ ಕತ್ತಿ ಮಸೆಯುತ್ತಿದ್ದ ಎನ್ನಲಾಗಿದ್ದು, ಇಂದು ತನ್ನ ಸಹಚರರೊಂದಿಗೆ ಬಂದು ಚಲಪತಿ ಕೆಲಸ ಮಾಡುತ್ತಿದ್ದಾಗ ಒಳನುಗ್ಗಿ ಕೆಲಸ ಮಾಡುತ್ತಿದ್ದ ಇನ್ನಿಬ್ಬರನ್ನು ಬೆದರಿಸಿ ಆಚೆ ಕಳಿಸಿ ಛಲಪತಿಯನ್ನು ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ....

Conclusion:ಒಟ್ಟಾರೆ ಮೃತ ಛಲಪತಿ ಹಾಗೂ ಆರೋಪಿಗಳಾದ ಮುರಳಿ ಹಾಗೂ ಮಂಜುನಾಥ್ ರಾಜಕೀಯ ಪಕ್ಷಗಳ ಕಾರ್ಯಕರ್ತರಾಗಿದ್ದು ಕೊಲೆಗೆ ನಿಖರ ಕಾರಣ ಏನೆಂಬುದು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ ನಂತರವಷ್ಟೇ ತಿಳಿಯಬೇಕಿದೆ.

ಬೈಟ್: ಜಬಿವುಲ್ಲಾ, ಪ್ರತ್ಯಕ್ಷದರರ್ಶಿ

ಬೈಟ್: ಜಯಪ್ಪ, ತಂದೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.