ETV Bharat / state

ಅಕ್ಕನ ಜೊತೆ ಜಗಳ ತೆಗೆದಿದ್ದಕ್ಕೆ ಬಾವನ ಹೆಣ ಉರುಳಿಸಿದ ಬಾಮೈದ..! - ಬಾವನ ಕೊಂದ ಬಾಮೈದ

ಅಕ್ಕನ ಜೊತೆ ಪದೇ ಪದೇ ಗಲಾಟೆ ಮಾಡುತ್ತಿದ್ದ ಬಾವನ ಮೇಲೆ ರೊಚ್ಚಿಗೆದ್ದ ಬಾಮೈದ ನಿನ್ನೆ ರಾತ್ರಿ ಕಲ್ಲಿನಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ನಂದಿನಿ ಲೇಔಟ್​ನಲ್ಲಿ ನಡೆದಿದೆ.

murder-for-trivial-reason-in-nandini-layout-bangalore
ಅಕ್ಕನ ಜೊತೆ ಜಗಳ ತೆಗೆದಿದ್ದ ಭಾವನನ್ನೇ ಹತ್ಯೆ ಮಾಡಿದ ಬಾಮೈದ
author img

By

Published : Feb 15, 2021, 9:29 AM IST

ಬೆಂಗಳೂರು: ಅಕ್ಕನ ಜೊತೆ ಜಗಳ ತೆಗೆದ ಭಾವನನ್ನೇ ಬಾಮೈದ ಹಾಗೂ ಆತನ ಸಹಚರ‌ರು ಕೊಲೆ ಮಾಡಿರುವ ಘಟನೆ ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ.

ಅಜಿಮ್ ಉಲ್ಲಾ ಕೊಲೆಯಾದ ವ್ಯಕ್ತಿ. ಕೊಲೆ ಮಾಡಿದ ಬಾಮೈದ ಖಾದರ್ ಪರಾರಿಯಾಗಿದ್ದಾನೆ‌. ಖಾಸಗಿ ಟ್ರಾನ್ಸ್ ಪೋರ್ಟ್ ನಲ್ಲಿ ಕೆಲಸ ಮಾಡುತಿದ್ದ ಅಜೀಮ್ ಉಲ್ಲಾ ಹಲವು ವರ್ಷಗಳ ಹಿಂದೆ ಖಾದರ್ ಸಹೋದರಿಯನ್ನು ಮದುವೆಯಾಗಿದ್ದ. ಪತ್ನಿ ಜೊತೆ ನಂದಿನಿ ಬಡಾವಣೆಯ ಕಂಠೀರವ ನಗರದಲ್ಲಿ ವಾಸವಾಗಿದ್ದ.

ದಂಪತಿ ನಡುವೆ ಸಣ್ಣ-ಪುಟ್ಟ ವಿಷಯಗಳಿಗಾಗಿ ಆಗಾಗ್ಗೆ ಜಗಳ ನಡೆಯುತಿತ್ತು. ನಿನ್ನೆ ಸಹ ಕ್ಷುಲ್ಲಕ ಕಾರಣಕ್ಕಾಗಿ ಮನೆಯಲ್ಲಿ ಜಗಳ ಶುರುವಾಗಿ ರಾತ್ರಿವರೆಗೂ ಮುಂದುವರೆದಿತ್ತು. ಅಕ್ಕನ ಬಾವ ಗಲಾಟೆ ವಿಷಯ ಅರಿತ ಆರೋಪಿ ಖಾದರ್ ತಾನು ವಾಸವಿದ್ದ ಕೂಲಿ ನಗರದಿಂದ ತನ್ನ ಇಬ್ಬರು ಗೆಳೆಯರ ಜೊತೆ ಅಕ್ಕನ ಮನೆ ಬಳಿ ಬಂದಿದ್ದ. ಈ ವೇಳೆ ಬಾವನ ಜೊತೆ ಖಾದರ್ ಮಾತಿಗಿಳಿದಿದ್ದಾನೆ. ಮಾತಿಗೆ ಮಾತು ಬೆಳೆದು ಬಾವನ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲೇ ಇದ್ದ ಕಲ್ಲುಗಳಿಂದ ತಲೆಯ ಮೇಲೆ ಹಲವು ಬಾರಿ ಕಲ್ಲಿನಿಂದ ಹಲ್ಲೆ ಮಾಡಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ನಂದಿನಿ ಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಶೋಧಕಾರ್ಯ ನಡೆಸುತ್ತಿದ್ದಾರೆ.

ಓದಿ : ಬುರ್ಕಾ ಧರಿಸಿ ಬಸ್ಸಿನಲ್ಲಿ ಪ್ರಯಾಣಿಕರ ಜೇಬಿಗೆ ಕತ್ತರಿ.. ಸಿಕ್ಕಿಬಿದ್ದಾಗ ಚಾಲಾಕಿಗಳ ಮುಖವಾಡ​ ಬಯಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.