ETV Bharat / state

100 ರೂಪಾಯಿಗೆ ಕೊಲೆ ಮಾಡಿ ಅಪಘಾತದ ಕಥೆ ಕಟ್ಟಿದ ಆರೋಪಿಗಳು.. 2 ತಿಂಗಳ ಬಳಿಕ ಸತ್ಯಾಂಶ ಬಯಲು

author img

By

Published : Dec 17, 2021, 2:36 PM IST

ಕೇವಲ 100 ರೂಪಾಯಿ ವಿಚಾರವಾಗಿ ಆರಂಭವಾಗಿದ್ದ ಜಗಳ ವಿಕೋಪಕ್ಕೆ ತಿರುಗಿ ಓರ್ವ ಆಸ್ಪತ್ರೆ ದಾಖಲಾಗಿದ್ದ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆತನ ಮೃತಪಟ್ಟಿದ್ದ. ಆದರೆ, ಗಲಾಟೆ ವಿಚಾರ ಮರೆಮಾಚಿದ ಆರೋಪಿಗಳು ಇದೊಂದು ಅಪಘಾತ ಪ್ರಕರಣ ಎಂದು ನಂಬಿಸಿದ್ದರು. ಪೊಲೀಸರ ತನಿಖೆಯಲ್ಲಿ ಕೊಲೆ ಅಂಶ ಬೆಳಕಿಗೆ ಬಂದಿದೆ.

murder-case-cracked-by-police-after-2-months
100 ರೂಪಾಯಿಗೆ ಕೊಲೆ ಮಾಡಿ ಅಪಘಾತದ ಕಥೆ ಕಟ್ಟಿದ ಆರೋಪಿಗಳು

ಬೆಂಗಳೂರು: ಅಪಘಾತವಾಗಿರುವುದಾಗಿ ಹೇಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ವ್ಯಕ್ತಿಯೊಬ್ಬರು ಮೃತಪಟ್ಟು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕೊಲೆ ಎಂದು ಕಂಡು ಬಂದಿದ್ದರಿಂದ ತನಿಖೆ ಚುರುಕುಗೊಳಿಸಿದ ಕೊಡಿಗೆಹಳ್ಳಿ ಪೊಲೀಸರು ಎರಡು ತಿಂಗಳ ಬಳಿಕ ಆರೋಪಿಯ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಡಿಗೆಹಳ್ಳಿ ನಿವಾಸಿ ಶಂಶೀರ್ ಬಂಧಿತ ಆರೋಪಿಯಾಗಿದ್ದು, ವಿಚಾರಣೆ ನಡೆಸಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಿದ್ದಾರೆ. ಮತ್ತಿಕೆರೆ ನಿವಾಸಿ 31 ವರ್ಷದ ಪ್ರತೀಕ್ ಯಾದವ್ ಕೊಲೆಯಾದ ದುದೈರ್ವಿಯಾಗಿದ್ದಾರೆ.

ಪ್ರಕರಣ ಸಂಬಂಧ ಸಂಚಾರ ಪಶ್ಚಿಮ ವಿಭಾಗದ ಡಿಸಿಪಿ ಕುಲ್​​ದೀಪ್ ಜೈನ್ ಪ್ರತಿಕ್ರಿಯೆ

ನಡೆದಿದ್ದೇನು..?

ಮತ್ತಿಕೆರೆಯಲ್ಲಿ ಕರ್ನಾಟಕ ಪೋರ್ಕ್ ಸ್ಟಾಲ್​ನಲ್ಲಿ ಆರೋಪಿ ಶಂಶೀರ್ ಕೆಲಸ ಮಾಡುತ್ತಿದ್ದ. ಶಾಪ್ ಮಾಲೀಕ ಸುರೇಶ್​ಗೆ ಪ್ರತೀಕ್ ಪರಿಚಯನಾಗಿದ್ದರಿಂದ ಕಳೆದ ಅ.17ರಂದು ಶಾಪ್ ಬಳಿ ಪ್ರತೀಕ್ ಬಂದಿದ್ದ. ಅಲ್ಲೇ ಕೆಲಸ ಮಾಡುತ್ತಿದ್ದ ಶಂಶೀರ್ ಜೊತೆ 100 ರೂಪಾಯಿ ವಿಚಾರಕ್ಕಾಗಿ ಮಾತಿನ ಚಕಮಕಿ ನಡೆದಿತ್ತು. ಗಲಾಟೆ ಜೋರಾಗುತ್ತಿದ್ದಂತೆ ತೂಕದ ಕಲ್ಲಿನಿಂದ ಪ್ರತೀಕ್ ತಲೆಗೆ ಹೊಡೆದಿದ್ದಾನೆ‌.

ಕುಸಿದು ಬಿದ್ದ ಪ್ರತೀಕ್​​ನನ್ನು ಅಂಗಡಿ ಮಾಲೀಕ ಸುರೇಶ್ ಸಹೋದರ ಸುಬ್ರಮಣ್ಯ ಎಂಬುವರು ಆಟೋದಲ್ಲಿ ಕೆ.ಸಿ‌ ಜನರಲ್ ಆಸ್ಪತ್ರೆಗೆ ಕರೆದೊಯ್ದಿದ್ದರು.‌ ಹೊರ ರೋಗಿ ವಿಭಾಗದಲ್ಲಿ ಹೆಚ್ಚಿನ ಚಿಕಿತ್ಸೆ ಪಡೆದು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ತೋರಿಸುವಂತೆ ವೈದ್ಯರು ಶಿಫಾರಸು ಮಾಡಿದ್ದರು.

ತಲೆಯಲ್ಲಿ ಆಗಿರುವ ಗಾಯದ ಬಗ್ಗೆ ಮನೆಯವರು ಪ್ರಶ್ನಿಸಿದಾಗ ಬೈಕ್​​ನಲ್ಲಿ ಹೋಗುವಾಗ ಬಿದ್ದು ಗಾಯ ಮಾಡಿಕೊಂಡಿರುವುದಾಗಿ ಪ್ರತೀಕ್ ತಿಳಿಸಿದ್ದ‌.‌ ತಲೆನೋವು ಹೆಚ್ಚಾಗಿದ್ದರಿಂದ ನಿಮ್ಹಾನ್ಸ್ ಆಸ್ಪತ್ರೆಗೆ ಹೋಗಿ ಬಂದಿದ್ದ. ಅ.20 ರಂದು ಮನೆಯಲ್ಲಿ ಇರಬೇಕಾದರೆ ತಲೆಯಲ್ಲಿ ರಕ್ತಹೆಪ್ಪು ಗಟ್ಟಿ ಕುಸಿದುಬಿದ್ದಿದ್ದ.

ಕೂಡಲೇ ಬ್ಯಾಪಿಸ್ಟ್ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದ. ಪ್ರತೀಕ್ ಆಗಿರುವ ಗಾಯ ಕುರಿತು ಅನುಮಾನ ವ್ಯಕ್ತಪಡಿಸಿ ಯಶವಂತಪುರ ಟ್ರಾಫಿಕ್ ಇನ್ಸ್​​ಪೆಕ್ಟರ್​ ರಾಘವೇಂದ್ರಗೆ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಸ್ಥಳಕ್ಕೆ ದೌಡಾಯಿಸಿ ಮೃತ ಕುಟುಂಬಸ್ಥರ ಹೇಳಿಕೆ ದಾಖಲಿಸಿಕೊಂಡ ಇನ್ಸ್​ಪೆಕ್ಟರ್ ರಾಘವೇಂದ್ರ ನೇತೃತ್ವದ ತಂಡ ಅಪಘಾತವಾಗಿರುವ ಸ್ಥಳದ ಬಗ್ಗೆ‌ ಕುಲಂಕಷವಾಗಿ ಪರಿಶೀಲಿಸಿದ್ದಾರೆ‌.

ಸಿಸಿಟಿವಿ ಸೇರಿದಂತೆ ಹಲವು ರೀತಿಯಲ್ಲಿ ಪರಿಶೀಲಿಸಿದರೂ ಅಪಘಾತದ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಮೃತನ‌ ಮೊಬೈಲ್​​​ಗೆ ಬಂದಿದ್ದ ಕರೆ ಆಧರಿಸಿ ತನಿಖೆ ನಡೆಸಿದಾಗ ಅಂಗಡಿ ಮಾಲೀಕ ಸುರೇಶ್ ಬಗ್ಗೆ ಗೊತ್ತಾಗಿದೆ.

ಬಳಿಕ ಹೆಚ್ಚಿನ ವಿಚಾರಣೆ ನಡೆಸಿದಾಗ ಆರೋಪಿ ಶಂಶೀರ್ ಹಾಗೂ ಪ್ರತೀಕ್ ನಡುವೆ ಜಗಳವಾಗಿ ಹಲ್ಲೆ ಮಾಡಿರುವ ಸಂಗತಿ ಪೊಲೀಸರಿಗೆ ತಿಳಿದು ಬಂದಿದೆ. ಘಟನೆ ಬಳಿಕ ಶಂಶೀರ್ ನಾಪತ್ತೆಯಾಗಿರುವುದು ಖಚಿತವಾಗುತ್ತಿದ್ದಂತೆ ಇದೊಂದು ಅಪಘಾತವಲ್ಲ ಕೊಲೆ‌ ಎಂಬುದು ಖಚಿತವಾಗುತ್ತದೆ.

ಇದನ್ನೂ ಓದಿ: ಮದುವೆ ವಾರ್ಷಿಕೋತ್ಸವ ದಿನದಂದು ಅಪಘಾತ : ಪತ್ನಿ ಸಾವು, ಗಂಡ-ಮಕ್ಕಳು ಪ್ರಾಣಾಪಾಯದಿಂದ ಪಾರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.