ಹೊಸಕೋಟೆ: ನಾನು ಇದೀಗ ಎಂಪಿಯಾಗಿದ್ದೀನಿ. ರಾಜ್ಯ ರಾಜಕಾರಣದ ಬಗ್ಗೆ ಮಾತನಾಡಲ್ಲವೆಂದು ಸಂಸದ ಬಿ ಎನ್ ಬಚ್ಚೇಗೌಡ ಹೇಳಿದ್ದಾರೆ.
ಹೊಸಕೋಟೆ ನಗರಸಭೆ ಚುನಾವಣೆ ಮತದಾನ ಹಿನ್ನೆಲೆಯಲ್ಲಿ ತಮ್ಮ ಪತ್ನಿಯೊಂದಿಗೆ ನಗರದ ಸರ್ಕಾರಿ ಪ್ರೌಢಶಾಲೆ ಮತಗಟ್ಟೆ ಕೇಂದ್ರ ತಮ್ಮ ಹಕ್ಕು ಚಲಾಯಿಸಿದ ಬಳಿಕ ಮಾತನಾಡಿದ ಅವರು, ಕಳೆದ ಉಪ ಚುನಾವಣೆಯಲ್ಲಿ ಯಾರ ಪರವೂ ಪ್ರಚಾರ ಮಾಡಿಲ್ಲ. ನಗರಸಭೆಯಲ್ಲೂ ಮತ ಕೇಳಿಲ್ಲ. ಶರತ್ ಅವರನ್ನು ಪಕ್ಷಕ್ಕೆ ಕರೆದುಕೊಳ್ಳುವ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ಆ ಬಗ್ಗೆ ನನಗೆ ಗೊತ್ತಿಲ್ಲ. ಎಂಎಲ್ಸಿ ಚುನಾವಣೆಯಲ್ಲಿ ಶರತ್ ಯಾರ ಪರ ಮತ ಚಲಾಯಿಸುತ್ತಾರೆಂಬುದು ನನಗೆ ಗೊತ್ತಿಲ್ಲ ಅಂದರು.
ಪದೇಪದೆ ಬಚ್ಚೇಗೌಡ ನನ್ನನ್ನ ಸೋಲಿಸಿದ ಅನ್ನೋ ಎಂಟಿಬಿ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಯಾರ ಪರ ಪ್ರಚಾರ ಮಾಡಿದೆ. ಯಾವುದೇ ವೇದಿಕೆ ಹತ್ತಿಲ್ಲ, ಪಾಂಪ್ಲೆಟ್ ಹಾಕಿಲ್ಲ, ಪ್ರತ್ಯಕ್ಷ್ಯ ಅಥವಾ ಪರೋಕ್ಷವಾಗಿಯೂ ಆಗಲಿ ನಾನು ಯಾರ ಪರವೂ ಪ್ರಚಾರ ಮಾಡಿಲ್ಲ. ನಾನೇನೂ ತಪ್ಪು ಮಾಡಿದ್ದೀನಿ? ಯಾವಾಗಲೂ ನನ್ನನ್ನು ದೂರುತ್ತಾರೆ ಅಂತಾ ಹೇಳಿದರು.