ಬೆಂಗಳೂರು: ತಾಯಿ ಮೊಬೈಲ್ ಕೊಟ್ಟಿಲ್ಲ ಎಂದು ಕೋಪಗೊಂಡ ಮಗಳು ನೇಣಿಗೆ ಶರಣಾಗಿರುವ ಘಟನೆ ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
16 ವರ್ಷದ ಬಾಲಕಿ ಘಟನೆಯಲ್ಲಿ ಮೃತಪಟ್ಟಿದ್ದಾಳೆ.
ಹನುಮಂತ ನಗರದ ಮನೆಯೊಂದರಲ್ಲಿ ಪ್ರಿಯಾಂಕ ಕುಟುಂಬ ವಾಸವಾಗಿತ್ತು. ಎಸ್ಸೆಸ್ಸೆಲ್ಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿ ಇಂದು ಸ್ನೇಹಿತೆಯ ಮನೆಗೆ ಹೋಗುವಾಗ ಮೊಬೈಲ್ ತೆಗೆದುಕೊಂಡು ಹೋಗುವುದಾಗಿ ತಾಯಿ ಬಳಿ ಕೇಳಿದ್ದಳು. ಇದಕ್ಕೆ ತಾಯಿ ಬುದ್ಧಿವಾದ ಹೇಳಿ ಮೊಬೈಲ್ ತೆಗೆದುಕೊಂಡು ಹೋಗಲು ಅವಕಾಶ ನೀಡಿರಲಿಲ್ಲ. ಇಷ್ಟಕ್ಕೆ ಅಸಮಾಧಾನಗೊಂಡ ಮಗಳು ತನ್ನ ತಾಯಿ ಜೊತೆ ಜಗಳವಾಡಿ ಸ್ನೇಹಿತೆ ಮನೆಗೆ ಹೋಗದೆ ಮನೆಯಲ್ಲೇ ಉಳಿದುಕೊಂಡಿದ್ದಳು. ಸಂಜೆ ತಾಯಿ ದೇವಸ್ಥಾನಕ್ಕೆ ಹೋಗಿದ್ದಾಗ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾಳೆ.
ದೇವಸ್ಥಾನದಿಂದ ಮನೆಗೆ ಬಂದಾಗ ತಾಯಿಗೆ ವಿಷಯ ಗೊತ್ತಾಗಿದೆ. ಈ ಕುರಿತು ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.