ETV Bharat / state

ತಾಳ್ಮೆಯಿಂದ ಇರಿ, ಎಲ್ಲವೂ ಸರಿ ಹೋಗುತ್ತೆ: ಎಂಟಿಬಿಗೆ ಸಮಾಧಾನ ಮಾಡಿದ ಸಿಎಂ

ನಾವೆಲ್ಲರೂ ಬಿಜೆಪಿಗೆ ಸೇರೋದು ಎಲ್ಲರಿಗೂ ಗೊತ್ತಿರುವ ವಿಚಾರ. ತೀರ್ಪು ಬಂದ ನಂತರ ಬಿಜೆಪಿ ಸೇರುತ್ತೇವೆ. ನಾವು ಬಿಜೆಪಿ ಸೇರೋದಕ್ಕೆ ಮೂಲ ಬಿಜೆಪಿ ನಾಯಕರು ಒಪ್ಪಿಕೊಳ್ಳುತ್ತಾರೆ ಎಂದು ಮೂಲ ಬಿಜೆಪಿಗರ ವಿರುದ್ಧದ ಆರೋಪವನ್ನು ಎಂಟಿಬಿ ತಳ್ಳಿಹಾಕಿದ್ದಾರೆ.

ಎಂಟಿಬಿ ನಾಗರಾಜ್
author img

By

Published : Oct 28, 2019, 7:10 PM IST

ಬೆಂಗಳೂರು: ಸುಪ್ರೀಂ ಕೋರ್ಟ್​ನಲ್ಲಿ ನಿಮ್ಮ ಪರವೇ ತೀರ್ಪು ಬರಲಿದೆ. ತಾಳ್ಮೆಯಿಂದ ಇರಿ, ಎಲ್ಲವೂ ಒಳ್ಳೆಯದೇ ಆಗುತ್ತದೆ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್​ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಮಾಧಾನ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಿಎಂ ಭೇಟಿ ಮಾಡಿದ ಎಂಟಿಬಿ ನಾಗರಾಜ್​

ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಬಂಡಾಯ ಹಿನ್ನೆಲೆಯಲ್ಲಿ ಶರತ್ ಬಚ್ಚೇಗೌಡ ಮನವೊಲಿಕೆಗೆ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಪಟ್ಟು ಹಿಡಿದಿದ್ದು, ಈ ಸಂಬಂಧ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಿಎಸ್​ವೈ ಭೇಟಿ ಮಾಡಿ ಶರತ್ ಬಚ್ಚೇಗೌಡ ಮನವೊಲಿಸುವಂತೆ ಒತ್ತಾಯಿಸಿದರು. ಈಗಾಗಲೇ ಉಪ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಶರತ್ ಬಚ್ಚೇಗೌಡ, ಹೊಸಕೋಟೆಯಲ್ಲಿ ಬಂಡಾಯವಾಗಿ ಸ್ಪರ್ಧಿಸಲು ಸಿದ್ಧತೆ ಆರಂಭಿಸಿ ಕ್ಷೇತ್ರದಲ್ಲೂ ಬಿರುಸಿನ ಪ್ರಚಾರ ಆರಂಭಿಸಿದ್ದಾರೆ. ಅಲ್ಲದೆ ಟಿಪ್ಪು ಜಯಂತಿ ಆಚರಿಸುವುದಾಗಿ ಹೇಳಿಕೆ ಕೊಟ್ಟು ಕ್ಷೇತ್ರದಲ್ಲಿ ಸಂಚಲನ ಉಂಟು ಮಾಡಿದ್ದಾರೆ. ಹೀಗಾಗಿ ಶರತ್ ಬಚ್ಚೇಗೌಡರನ್ನು ಕರೆದು ಬುದ್ಧಿ ಹೇಳಿ. ದಯಮಾಡಿ ನನ್ನ ರಾಜಕೀಯ ಹಾದಿಯನ್ನು ಸುಗಮ ಮಾಡಿಕೊಡಬೇಕು ಎಂದು‌ ಮನವಿ ಮಾಡಿದರು.

ನಂತರ ಅನರ್ಹರ ಅರ್ಜಿ ಕುರಿತಾದ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆಯೂ ಚರ್ಚೆ ನಡೆಸಿದರು. ಈ ವೇಳೆ ಎಂಟಿಬಿಗೆ ಧೈರ್ಯ ಹೇಳಿದ ಸಿಎಂ, ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ. ನಮ್ಮ ಪರವೇ ತೀರ್ಪು ಬರಲಿದೆ. ತಾಳ್ಮೆಯಿಂದ ಇರಿ, ಎಲ್ಲವೂ ಒಳ್ಳೆಯದೇ ಆಗುತ್ತೆ ಎಂದು ಸಮಧಾನಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಸಿಎಂ ಭೇಟಿ ಬಳಿಕ ಮಾತನಾಡಿದ ಎಂಟಿಬಿ ನಾಗರಾಜ್, ಕ್ಷೇತ್ರದ ಅಭಿವೃದ್ಧಿಗೆ ಅನುದಾನದ ಬಗ್ಗೆ ಚರ್ಚೆ ಮಾಡಿದ್ದೇನೆ. ಅನುದಾನ ಬಿಡುಗಡೆ ಮಾಡುವುದಾಗಿ ಸಿಎಂ ಭರವಸೆ ಕೊಟ್ಟಿದ್ದಾರೆ. ಸುಪ್ರೀಂ ಕೋರ್ಟ್​ನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ಇದ್ದು, ನವೆಂಬರ್ 5 ಅಥವಾ 6ರೊಳಗೆ ತೀರ್ಪು ಬರಲಿದೆ. ನಮ್ಮ ಪರವೇ ತೀರ್ಪು ಬರುವ ವಿಶ್ವಾಸ ಇದೆ ಎಂದರು.

ನಾವೆಲ್ಲರೂ ಬಿಜೆಪಿಗೆ ಸೇರೋದು ಎಲ್ಲರಿಗೂ ಗೊತ್ತಿರುವ ವಿಚಾರ. ತೀರ್ಪು ಬಂದ ನಂತರ ಬಿಜೆಪಿ ಸೇರುತ್ತೇವೆ. ನಾವು ಬಿಜೆಪಿ ಸೇರೋದಕ್ಕೆ ಮೂಲ ಬಿಜೆಪಿ ನಾಯಕರು ಒಪ್ಪಿಕೊಳ್ಳುತ್ತಾರೆ ಎಂದು ಮೂಲ ಬಿಜೆಪಿಗರ ವಿರುದ್ಧದ ಆರೋಪವನ್ನು ತಳ್ಳಿಹಾಕಿದರು.

ಡಿಸೆಂಬರ್ ನಂತರ ‌ಸರ್ಕಾರ ಪತನ ಆಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನಾವು ಯಾವುದೇ ಕಾರಣಕ್ಕೂ ಸರ್ಕಾರ ಬೀಳುವುದಕ್ಕೆ ಬಿಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಮನಸ್ಸಲ್ಲಿ ಇರೋದನ್ನು ಕುಮಾರಸ್ವಾಮಿ ಬಾಯಲ್ಲಿ ಹೇಳಿದ್ದಾರೆ. ಅದನ್ನು ನಾವು ಕೂಡ ಒಪ್ಪಿಕೊಳ್ಳಬೇಕಾಗುತ್ತೆ ಅಲ್ವಾ? ಉಪ ಚುನಾವಣೆ ನಂತರ ಸರ್ಕಾರ ಪತನ ಆಗುತ್ತದೆ ಎಂದು ಸಿದ್ದರಾಮಯ್ಯ ಕನಸು ಕಾಣ್ತಿದ್ದಾರೆ. ಅದೆಲ್ಲಾ ಏನು ಆಗಲ್ಲ‌. ಈಗಿನ ಸರ್ಕಾರ ಮುಂದಿನ ಮೂರು ವರ್ಷ ಸುಭದ್ರವಾಗಿರುತ್ತದೆ. ಆಡಳಿತ ಕೂಡ ನಡೆಸಲಿದೆ. ಇದರಲ್ಲಿ ಯಾರಿಗೂ ಯಾವುದೇ ಅನುಮಾನ ಬೇಡ. ಈ ಬಗ್ಗೆ ಎಲ್ಲರಲ್ಲೂ ನಂಬಿಕೆ ಇದೆ ಎಂದು‌ ಮಾಜಿ ಸಿಎಂ ಸಿದ್ದರಾಮಯ್ಯಗೆ ಎಂಟಿಬಿ ನಾಗರಾಜ್ ಟಾಂಗ್ ಕೊಟ್ಟರು.

ಕಾಂಗ್ರೆಸ್​​ನಲ್ಲಿ ಮೂರು ಗುಂಪುಗಳಾಗಿವೆ. ಪರಮೇಶ್ವರ್, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಗುಂಪುಗಾರಿಕೆ ಶುರುವಾಗಿದೆ. ಕಾಂಗ್ರೆಸ್​ನ ಈ ಗುಂಪುಗಾರಿಕೆಯಿಂದಲೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನ ಗೆದ್ದಿದ್ದು. ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲೇ ಕರ್ನಾಕಟದಿಂದ ಕಾಂಗ್ರೆಸ್ ಕೇವಲ ಒಂದು ಸ್ಥಾನ ಗೆದ್ದಿದ್ದು ಇಲ್ಲ. ಲೋಕಸಭಾ ಚುನಾವಣೆಯಲ್ಲೂ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲೂ ಸೀಟು ಇಲ್ಲ. ಈಗ ಎರಡು ರಾಜ್ಯಗಳ ಚುನಾವಣೆಯಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿಲ್ಲ. ನಾಯಕತ್ವದ ಕೊರತೆ, ಗುಂಪುಗಾರಿಕೆಯಿಂದಲೇ ಕಾಂಗ್ರೆಸ್​​ಗೆ ಹಿನ್ನಡೆ ಆಗಿದೆ. ಮುಂದಿನ ದಿನಗಳಲ್ಲೂ ಇದೇ ಉದ್ಭವ ಆಗಲಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಡಿ.ಕೆ.ಶಿವಕುಮಾರ್ ಬಂದರೆ ನಾನು ಸ್ವಾಗತ ಮಾಡುತ್ತೇನೆ. ಹೊಸಕೋಟೆಯ ರಣರಂಗಕ್ಕ ಬರಲಿ ಎಂದು ಆಹ್ವಾನ ನೀಡಿ ಹೊಸಕೋಟೆಯ ರಣರಂಗದಲ್ಲಿ ನನ್ನ ನಿಮ್ಮ ಭೇಟಿ ಎಂಬ ಡಿಕೆಶಿ ಹೇಳಿಕೆಗೆ ಟಾಂಗ್ ನೀಡಿದರು.

Intro:

ಬೆಂಗಳೂರು: ಸುಪ್ರೀಂ ಕೋರ್ಟ್ ನಲ್ಲಿ ನಿಮ್ಮ ಪರವೇ ತೀರ್ಪು ಬರಲಿದೆ ತಾಳ್ಮೆಯಿಂದ ಇರಿ,ಎಲ್ಲವೂ ಒಳ್ಳೆಯದೇ ಆಗುತ್ತದೆ ಎಂದು ಅನರ್ಹ ಶಾಸಕ ಎಂ.ಟಿ.ಬಿ ನಾಗರಾಜ್ ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಮಾಧಾನಪಡಿಸಿದ್ದಾರೆ.

ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಬಂಡಾಯ ಹಿನ್ನೆಲೆಯಲ್ಲಿ ಶರತ್ ಬಚ್ಚೇಗೌಡ ಮನವೊಲಿಕೆಗೆ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಪಟ್ಟು ಹಿಡಿಸಿದ್ದು ಈ ಸಂಬಂಧ , ಸಿಎಂ ಬಿಎಸ್ವೈ ಭೇಟಿ ಮಾಡಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಿಎಸ್ವೈ ಭೇಟಿ ಮಾಡಿ ಶರತ್ ಬಚ್ಚೇಗೌಡ ಮನವೊಲಿಸುವಂತೆ ಒತ್ತಾಯಿಸಿದರು.ಈಗಾಗಲೇ ಉಪ ಚುನಾವಣೆಗೆ ಸಿದ್ದತೆ ಆರಂಭಿಸಿರುವ ಶರತ್ ಬಚ್ಚೇಗೌಡ, ಹೊಸಕೋಟೆಯಲ್ಲಿ ಬಂಡಾಯವಾಗಿ ಸ್ಪರ್ಧಿಸಲು ಸಿದ್ದತೆ ಆರಂಭಿಸಿ ಕ್ಷೇತ್ರದಲ್ಲೂ ಬಿರುಸಿನ ಪ್ರಚಾರ ಆರಂಭಿಸಿದ್ದಾರೆ ಅಲ್ಲದೆ ಟಿಪ್ಪು ಜಯಂತಿ ಆಚರಿಸುವುದಾಗಿ ಹೇಳಿಕೆ ಕೊಟ್ಟು ಕ್ಷೇತ್ರದಲ್ಲಿ ಸಂಚಲನ ಉಂಟು ಮಾಡಿದ್ದಾರೆ ಹೀಗಾಗಿ ಶರತ್ ಬಚ್ಚೇಗೌಡರನ್ನು ಕರೆದು ಬುದ್ದಿ ಹೇಳಿ ದಯಮಾಡಿ ನನ್ನ ರಾಜಕೀಯ ಹಾದಿಯನ್ನು ಸುಗಮ ಮಾಡಿಕೊಡಬೇಕು ಎಂದು‌ ಮನವಿ ಮಾಡಿದರು.

ನಂತರ ಅನರ್ಹರ ಅರ್ಜಿ ಕುರಿತಾದ ಸುಪ್ರೀಂಕೋರ್ಟ್ ನ ತೀರ್ಪಿನ ಬಗ್ಗೆಯೂ ಚರ್ಚೆ ನಡೆಸಿದರು. ಈ ವೇಳೆ ಎಂಟಿಬಿಗೆ ಧೈರ್ಯ ಹೇಳಿದ ಸಿಎಂ ಯಾವುದಕ್ಕೂ ತಲೆಕೆಡೆಸಿಕೊಳ್ಳಬೇಡಿ, ನಮ್ಮ ಪರವೇ ತೀರ್ಪು ಬರಲಿದೆ ತಾಳ್ಮೆಯಿಂದ ಇರಿ, ಎಲ್ಲವೂ ಒಳ್ಳೆಯದೇ ಆಗುತ್ತೆ ಎಂದು ಸಮಧಾನಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಸಿಎಂ ಭೇಟಿ ಬಳಿಕ ಮಾತನಾಡಿದ ಎಂ.ಟಿ.ಬಿ ನಾಗರಾಜ್,
ಕ್ಷೇತ್ರದ ಅಭಿವೃದ್ಧಿಗೆ ಅನುದಾನದ ಬಗ್ಗೆ ಚರ್ಚೆ ಮಾಡಿದ್ದೇನೆ. ಅನುದಾನ ಬಿಡುಗಡೆ ಮಾಡುವುದಾಗಿ ಸಿಎಂ ಭರವಸೆ ಕೊಟ್ಟಿದ್ದಾರೆ, ಸುಪ್ರೀಂಕೋರ್ಟ್ ನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ಇದ್ದು, ನವೆಂಬರ್ 5 ಅಥವಾ 6 ರೊಳಗೆ ತೀರ್ಪು ಬರಲಿದೆ, ನಮ್ಮ ಪರವೇ ತೀರ್ಪು ಬರುವ ವಿಶ್ವಾಸ ಇದೆ ಬಂದರು.

ಟಿಪ್ಪು ಜಯಂತಿ ಆಚರಿಸುವ ಶರತ್ ಬಚ್ಚೇಗೌಡರ ಹೇಳಿಕೆಗೆ ಅವರೇ ಸಮರ್ಥನೆ ಮಾಡಿಕೊಳ್ಳಬೇಕು, ಈಗಾಗಲೇ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದಾರೆ.ಒಂದು ತಿಂಗಳಿನಿಂದಲೂ ಅವರು ಮನೆ ಮನೆ ಪ್ರಚಾರ ನಡೆಸುತ್ತಿದ್ದಾರೆ, ಅವರು ಪ್ರಚಾರ ಮಾಡಿಕೊಳ್ಳಿ, ಆದರೆ ನಾನೇನು ಆ ಬಗ್ಗೆ ತಲೆ ಕೆಡೆಸಿಕೊಳ್ಳೋದಿಲ್ಲ‌. ನ್ಯಾಯಾಲಯದಿಂದ ತೀರ್ಪು ಬಂದ ನಂತರ ಮುಂದಿನ ತೀರ್ಮಾನ ಮಾಡುತ್ತೇನೆ ಎಂದರು.

ನಾವೆಲ್ಲರೂ ಬಿಜೆಪಿಗೆ ಸೇರೋದು ಎಲ್ಲರಿಗೂ ಗೊತ್ತಿರುವ ವಿಚಾರ, ತೀರ್ಪು ಬಂದ ನಂತರ ಬಿಜೆಪಿ ಸೇರುತ್ತೇವೆ.ನಾವು ಬಿಜೆಪಿ ಸೇರೋದಕ್ಕೆ ಮೂಲ ಬಿಜೆಪಿ ನಾಯಕರು ಒಪ್ಪಿಕೊಳ್ಳುತ್ತಾರೆ ಎಂದು ಮೂಲ ಬಿಜೆಪಿಗರ ವಿರೋಧ ಆರೋಪವನ್ನು ತಳ್ಳಿಹಾಕಿದರು.

ಡಿಸೆಂಬರ್ ನಂತರ ‌ಸರ್ಕಾರ ಪತನ ಆಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ನಾವು ಯಾವುದೇ ಕಾರಣಕ್ಕೂ ಸರ್ಕಾರ ಬೀಳುವುದಕ್ಕೆ ಬಿಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಅವರು ಮನಸ್ಸಲ್ಲಿ ಇರೋದನ್ನು ಕುಮಾರಸ್ವಾಮಿ ಬಾಯಲ್ಲಿ ಹೇಳಿದ್ದಾರೆ ಅದನ್ನು ನಾವು ಕೂಡ ಒಪ್ಪಿಕೊಳ್ಳಬೇಕಾಗುತ್ತೆ ಅಲ್ವಾ? ಉಪ ಚುನಾವಣೆ ನಂತರ ಸರ್ಕಾರ ಪತನ ಆಗುತ್ತದೆ ಎಂದು ಸಿದ್ದರಾಮಯ್ಯ ಕನಸು ಕಾಣ್ತಿದ್ದಾರೆ ಅದೆಲ್ಲಾ ಏನು ಆಗಲ್ಲ‌ ಈಗಿನ ಸರ್ಕಾರ ಮುಂದಿನ ಮೂರು ವರ್ಷ ಸುಭದ್ರವಾಗಿರುತ್ತದೆ ಆಡಳಿತ ಕೂಡ ನಡೆಸಲಿದೆ.ಇದರಲ್ಲಿ ಯಾರಿಗೂ ಯಾವುದೇ ಅನುಮಾನ ಬೇಡ, ಈ ಬಗ್ಗೆ ಎಲ್ಲರಲ್ಲೂ ನಂಬಿಕೆ ಇದೆ ಎಂದು‌ ಮಾಜಿ ಸಿಎಂ ಸಿದ್ದರಾಮಯ್ಯಗೆ ಎಂಟಿಬಿ ನಾಗರಾಜ್ ಟಾಂಗ್ ಕೊಟ್ಟರು.

ಕಾಂಗ್ರೆಸ್ ನಲ್ಲಿ ಮೂರು ಗುಂಪುಗಳಾಗಿವೆ ಪರಮೇಶ್ವರ್, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಗುಂಪುಗಾರಿಕೆ ಶುರುವಾಗಿದೆ ಕಾಂಗ್ರೆಸ್ ನ ಈ ಗುಂಪುಗಾರಿಕೆಯಿಂದಲೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನ ಗೆದ್ದಿದ್ದು ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲೇ ಕರ್ನಾಕಟದಿಂದ ಕಾಂಗ್ರೆಸ್ ಕೇವಲ ಒಂದು ಸ್ಥಾನ ಗೆದ್ದಿದ್ದು ಇಡೀ ಇತಿಹಾಸದಲ್ಲೇ ಇಲ್ಲ. ಲೋಕಸಭಾ ಚುನಾವಣೆಯಲ್ಲೂ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲೂ ಸೀಟು ಇಲ್ಲ.ಈಗ ಎರಡು ರಾಜ್ಯಗಳ ಚುನಾವಣೆಯಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿಲ್ಲ. ನಾಯಕತ್ವದ ಕೊರತೆ, ಗುಂಪು ಗಾರಿಕೆಯಿಂದಲೇ ಕಾಂಗ್ರೆಸ್ ಗೆ ಹಿನ್ನಡೆ ಆಗಿದೆ ಮುಂದಿನ ದಿನಗಳಲ್ಲೂ ಇದೇ ಉದ್ಭವ ಆಗಲಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಡಿಕೆ ಶಿವಕುಮಾರ್ ಬಂದರೆ ನಾನು ಸ್ವಾಗತ ಮಾಡುತ್ತೇನೆ ಹೊಸಕೋಟೆಯ ರಣರಂಗಕ್ಕ ಬರಲಿ ಎಂದು ಆಹ್ವಾನ ನೀಡಿ
ಹೊಸಕೋಟೆಯ ರಣರಂಗದಲ್ಲಿ ನನ್ನ ನಿಮ್ಮ ಭೇಟಿ ಎಂಬ ಡಿಕೆಶಿ ಹೇಳಿಕೆಗೆ ಟಾಂಗ್ ನೀಡಿದರು.

Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.