ETV Bharat / state

ಫ್ಲಿಪ್​​ಕಾರ್ಟ್​ನಿಂದ 250 ಕಾರ್ಮಿಕರಿಗೆ ಗೇಟ್ ಪಾಸ್: ಅಧಿಕಾರಿಗಳಿಗೆ ಕ್ಲಾಸ್‌ ತೆಗೆದುಕೊಂಡ ಎಂಟಿಬಿ - ಫ್ಲಿಫ್​ಕಾರ್ಟ್​ನಿಂದ ಕೆಲಸಗಾರರ ವಜಾ

ಸಮಸ್ಯೆ ಬಗೆಹರಿಸಲು ತೆರಳಿದ್ದ ತಿರುಮಲ ಶೆಟ್ಟಿ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಕೆಂಪೇಗೌಡ ಅವರು ಕಂಪನಿಯವರಿಗೆ ಭದ್ರತೆ ಒದಗಿಸಿ, ನೌಕರರನ್ನು ಹೊರಗೆ ಕಳುಹಿಸಿದ್ದಾರೆ ಎಂದು ನೌಕರರು ದೂರು ನೀಡಿದ ಹಿನ್ನೆಲೆ ವೃತ್ತ ನಿರೀಕ್ಷಕರಿಗೆ ದೂರವಾಣಿ ಕರೆ ಮಾಡಿ ತೀವ್ರ ತರಾಟೆಗೆ ತೆಗೆದುಕೊಂಡರು.

ಎಂಟಿಬಿ ನಾಗರಾಜ್​
ಎಂಟಿಬಿ ನಾಗರಾಜ್​
author img

By

Published : Nov 24, 2020, 4:30 AM IST

Updated : Nov 24, 2020, 6:09 AM IST

ಹೊಸಕೋಟೆ: ತಾಲೂಕಿನ ತಿರುಮಲ ಶೆಟ್ಟಿಹಳ್ಳಿ ಬಳಿ ಇರುವ ಫ್ಲಿಪ್‌ಕಾರ್ಟ್‌ ಕಂಪನಿಯಿಂದ 250 ನೌಕರರನ್ನು ಏಕಾಏಕಿ ವಜಾಗೊಳಿಸಿದ ಹಿನ್ನೆಲೆ ನೌಕರರಿಗೆ ನ್ಯಾಯಕೊಡಿಸಲು ವಿಧಾನ ಪರಿಷತ್‌ ಸದಸ್ಯ ಎಂಟಿಬಿ ನಾಗರಾಜ್‌ ಅಖಾಡಕ್ಕಿಳಿದಿದ್ದಾರೆ.

ಕಂಪನಿ ಕೆಲಸದಿಂದ ಏಕಾಏಕಿ ವಜಾಗೊಳಿಸಿದ ಹಿನ್ನೆಲೆ ಎಂಟಿಬಿ ನಾಗರಾಜ್‌ ಅವರ ನೆರವು ಕೇಳಿದ ನೌಕರರಿಗೆ ನ್ಯಾಯ ಕೊಡಿಸಲು ಮುಂದಾಗಿರುವ ಅವರು ಕಂಪನಿ ಹಾಗೂ ಪೊಲೀಸರಿಗೆ ತೀವ್ರ ತರಾಟೆಗೆ ತೆಗೆದುಕೊಂಡರು. ಈ ಹಿಂದೆಯೂ ಒಮ್ಮೆ ಈ ಕಂಪನಿ ನೌಕರರನ್ನು ವಜಾಗೊಳಿಸಿದ್ದ ಸಂದರ್ಭದಲ್ಲಿ ನಾನೇ ಖುದ್ದಾಗಿ ಕಂಪನಿ ಬಳಿಗೆ ತೆರಳಿ ನ್ಯಾಯ ಒದಗಿಸಿದ್ದೆ. ಆದರೆ, ಈಗ ಮತ್ತೊಮ್ಮೆ ಕಂಪನಿ ಅದೇ ಕ್ಯಾತೆಯನ್ನು ತೆಗೆದಿದೆ ಎಂದು ಸಿಡಿಮಿಡಿಗೊಂಡರು.

ಫ್ಲಿಫ್​ ಕಾರ್ಟ್​ ವಿರುದ್ಧ ಪ್ರತಿಭಟನೆ

"ಇವರು ಹಣ ಮಾಡಿಕೊಳ್ಳಲು ಸ್ಥಳೀಯ ರೈತರ ಭೂಮಿ ಬೇಕು. ಆದರೆ, ಸ್ಥಳೀಯ ರೈತರ ಮಕ್ಕಳಿಗೆ ಮಾತ್ರ ಕೆಲಸ ಕೊಡಲ್ಲ. ಈ ರೀತಿಯ ಧೋರಣೆಯನ್ನು ನಾನು ಎಂದಿಗೂ ಸಹಿಸಲ್ಲ. ಕಂಪನಿಯವರು ಕೂಡಲೇ ಎಚ್ಚೆತ್ತುಕೊಂಡು ನೌಕರರಿಗೆ ಕಾನೂನು ರೀತಿಯ ನ್ಯಾಯ ಕೊಡಬೇಕು. ಇಲ್ಲದಿದ್ದಲ್ಲಿ ಕಂಪನಿ ಮುಂದೆ ನಾನೇ ಪ್ರತಿಭಟನೆಗೆ ಕೂರುತ್ತೇನೆ" ಎಂದು ಖಡಕ್ ಎಚ್ಚರಿಕೆ ನೀಡಿದರು.

ಸಮಸ್ಯೆ ಬಗೆಹರಿಸಲು ತೆರಳಿದ್ದ ತಿರುಮಲ ಶೆಟ್ಟಿ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಕೆಂಪೇಗೌಡ ಅವರು ಕಂಪನಿಯವರಿಗೆ ಭದ್ರತೆ ಒದಗಿಸಿ, ನೌಕರರನ್ನು ಹೊರಗೆ ಕಳುಹಿಸಿದ್ದಾರೆ ಎಂದು ನೌಕರರು ದೂರಿದ ಹಿನ್ನೆಲೆ ವೃತ್ತ ನಿರೀಕ್ಷಕರಿಗೆ ದೂರವಾಣಿ ಕರೆ ಮಾಡಿ ಎಂಟಿಬಿ ತೀವ್ರ ತರಾಟೆಗೆ ತೆಗೆದುಕೊಂಡರು.

ಬಡವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿ, ಅದನ್ನು ಬಿಟ್ಟು ಕಂಪನಿಯವರಿಗೆ ಭದ್ರತೆ ನೀಡಿದರೆ ಪೊಲೀಸರಿಗೆ ಗ್ರಹಚಾರ ಬಿಡಿಸುತ್ತೇನೆ. ಅನ್ಯಾಯವನ್ನು ನಾನು ಎಂದಿಗೂ ಸಹಿಸಲ್ಲ. ಕಂಪನಿ ಹಾಗೂ ಗುತ್ತಿಗೆದಾರರನ್ನು ಕರೆಯಿಸಿ ಕಾನೂನು ರೀತಿ ನೌಕರರಿಗೆ ಸಹಾಯ ಮಾಡಿ ಎಂದು ತಾಕೀತು ಮಾಡಿದರು. ಎರಡು ದಿನದಲ್ಲಿ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

Last Updated : Nov 24, 2020, 6:09 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.