ಹೊಸಕೋಟೆ: ಪಕ್ಷ ಬಿಡೋಕೂ ಪ್ರಾಮಾಣಿಕತೆಗೂ ಏನು ಸಂಬಂಧ? ಪಾರದರ್ಶಕತೆ, ಪ್ರಾಮಾಣಿಕತೆಯಿಂದ ಜನಪ್ರತಿನಿಧಿ ಕರ್ತವ್ಯ ನಿರ್ವಹಿಸಬೇಕು ಎಂದು ಎಂಟಿಬಿ ನಾಗರಾಜ್ ಹೇಳಿದ್ರು.
ಸಿದ್ದರಾಮಯ್ಯ ಎಲ್ಲಿದ್ರು? ಅವರೂ ಕೂಡ ಬೇರೆ ಪಕ್ಷದಿಂದ ಬಂದವರೇ ತಾನೆ? ರಾಜಕೀಯ ಅನ್ನೋದು ಅವನಿಗೇನು ಗೊತ್ತು? ಅಂತಾ ಬೈರತಿ ವಿರುದ್ದ ಗರಂ ಆದ ಎಂಟಿಬಿ ನಾಗರಾಜ್, ನಾನು ಪಕ್ಷ ಬಿಡೋಕೆ ಕಾರಣ ಕುಮಾರಸ್ವಾಮಿ. ಅವರು ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು ರಾಜೀನಾಮೆ ನೀಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.
ಇನ್ನು ಬಚ್ಚೇಗೌಡ ಹಾಗೂ ಪುತ್ರ ಶರತ್ ಬಚ್ಚೇಗೌಡ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಪಕ್ಷದಲ್ಲಿರುವ ತಮಗೆ ಟಿಕೆಟ್ ನೀಡದೇ, ಅನರ್ಹ ಶಾಸಕರಾದ ಎಂಟಿಬಿಗೆ ಟಿಕೆಟ್ ನೀಡುತ್ತಿದ್ದಾರೆಂದು ಬೇಸರಗೊಂಡ ಶರತ್ ಬಚ್ಚೇಗೌಡ ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಆದ್ರೆ ನಾನು, ಬಚ್ಚೇಗೌಡ ಮತ್ತು ಶರತ್ ಬಚ್ಚೇಗೌಡ ಒಪ್ಪಿಗೆ ಮೇರೆಗೆ ಬಿಜೆಪಿಗೆ ಬಂದಿರೋದು, ಶರತ್ ಬಚ್ಚೇಗೌಡ ಆಟ ತೋರಿಸುತ್ತಿದ್ದಾರೆ ಎಂದು ಎಂಟಿಬಿ ನಾಗರಾಜ್ ವಾಗ್ದಾಳಿ ನಡೆಸಿದ್ದಾರೆ.
ನನಗೆ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶವನ್ನು ನೀಡಿದರೆ ಮಾತ್ರ ನಾನು ರಾಜೀನಾಮೆ ಕೊಡುತ್ತೇನೆ ಎಂದು ಮೊದಲೇ ಮಾತನಾಡಿ ಬಂದಿದ್ದೇನೆ. ಇಲ್ಲದಿದ್ದರೆ ನಾನು ಯಾಕೆ ಕಾಂಗ್ರೆಸ್ ಬಿಟ್ಟು ಬರುತ್ತಿದ್ದೆ ಎಂದರು. ಅವರು ಒಪ್ಪಿಕೊಂಡ ಮೇಲೆ ನಾನು ರಾಜೀನಾಮೆ ನೀಡಿದ್ದು, ನಾನು ಸುಳ್ಳು ಹೇಳಿದರೂ, ಮುಖ್ಯಮಂತ್ರಿಗಳು ಸುಳ್ಳು ಹೇಳುತ್ತಾರಾ? ಎಂದು ಪ್ರಶ್ನಿಸಿದ್ರು.
ಹೊಸಕೋಟೆ ಉಪಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ ಹಾಗೂ ಪರಿಶೀಲನೆ ಮುಕ್ತಾಯವಾಗಿದ್ದು ಎಂಟಿಬಿ ಹಾಗೂ ಕಾಂಗ್ರೆಸ್ ನಡುವೆ ಮಾತಿನ ವಾಕ್ಸಮರ ಜೋರಾಗಿ ನಡೆಯುತ್ತಿದೆ. ಇತ್ತ ಕಾಂಗ್ರೆಸ್ ಎಂಟಿಬಿ ವಿರುದ್ದ ಚಾಟಿ ಬೀಸುತ್ತಿದ್ರೆ, ಅತ್ತ ಶರತ್ ಬೆಂಬಲಿಗರು ಎಂಟಿಬಿ ವಿರುದ್ದ ನೀತಿಸಂಹಿತೆ ದೂರು ದಾಖಲಿಸೋ ಮುಖಾಂತರ ರಾಜಕೀಯ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಆದ್ರೆ, ಗೆಲ್ಲುವ ಅಭ್ಯರ್ಥಿಯ ಹಣೆಬರಹವನ್ನು ಜನ ಯಾರಿಗೆ ಬರೆಯುತ್ತಾರೆ ಅನ್ನೋದು ಕಾದು ನೋಡಬೇಕಿದೆ.