ETV Bharat / state

ವಿದ್ಯುತ್ ದರ ಏರಿಕೆ- ಎಂಎಸ್​ಎಂಇಗಳಿಗೆ ಹೊರೆ: ಕಾಸಿಯಾ ಬೇಸರ - ಕಾಸಿಯಾ

ಕೊರೊನಾ ತಂದೊಡ್ಡಿದ ಸಂಕಷ್ಟದಿಂದಾಗಿ ಅತಿ ಸಣ್ಣ ಮತ್ತು ಸಣ್ಣ ಉದ್ಯಮಗಳು ನಷ್ಟಕ್ಕೊಳಗಾಗಿದ್ದು, ಇದೀಗ ಪ್ರತಿ ಯೂನಿಟ್‌ ವಿದ್ಯತ್​ಗೆ ಕೆಇಆರ್‌ಸಿ ದರ ಹೆಚ್ಚಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಕಾಸಿಯಾ ಅಧ್ಯಕ್ಷ ಕೆ.ಬಿ.ಅರಸಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

Kasia President
ಕಾಸಿಯಾ ಅಧ್ಯಕ್ಷ ಕೆ.ಬಿ.ಅರಸಪ್ಪ
author img

By

Published : Nov 6, 2020, 1:59 PM IST

ಬೆಂಗಳೂರು: ರಾಜ್ಯಾದ್ಯಂತ ಪ್ರತಿ ಯೂನಿಟ್‌ ವಿದ್ಯುತ್​ಗೆ 25 ಪೈಸೆ ಹಾಗೂ ಮಾಸಿಕ ನಿಗದಿತ ಶುಲ್ಕವನ್ನು ರೂ.10.00 ಹೆಚ್ಚಳ ಮಾಡಿರುವುದಾಗಿ ಕರ್ನಾಟಕ ವಿದ್ಯುಚ್ಯಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಪ್ರಕಟಿಸಿದೆ. ಇದರಿಂದಾಗಿ ಕಾಸಿಯಾ ಸಾಕಷ್ಟು ಆಘಾತಕ್ಕೊಳಗಾಗಿದೆ ಎಂದು ಕಾಸಿಯಾ ಅಧ್ಯಕ್ಷ ಕೆ.ಬಿ.ಅರಸಪ್ಪ ಹೇಳಿದರು.

ಕಾಸಿಯಾ ಅಧ್ಯಕ್ಷ ಕೆ.ಬಿ.ಅರಸಪ್ಪ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಎಸ್‌ಎಂಇಗಳು ಕೋವಿಡ್ ಸಾಂಕ್ರಾಮಿಕ ರೋಗ ಬೀರಿದ ಪರಿಣಾಮದಿಂದಾಗಿ ತತ್ತರಿಸಿದೆ ಹಾಗೂ ಇದರ ಆರ್ಥಿಕತೆಯು ತೀವ್ರ ಮಂದಗತಿಯಿಂದ ಸಾಗಿದ್ದು, ಇದೀಗ ತನ್ನ ಕಾರ್ಯಾಚರಣೆ ಪುನರುಜ್ಜೀವಗೊಳಿಸಲು ಹೆಣಗಾಡುತ್ತಿದೆ. ಇಂತಹ ಸಂದರ್ಭದಲ್ಲಿ ವಿದ್ಯುತ್​​ ಶುಲ್ಕವನ್ನು ಹೆಚ್ಚಿಸಿರುವ ಪರಿಣಾಮ ನಮ್ಮ ಮೇಲೆ ಬರೆ ಎಳೆದಂತಾಗಿದೆ ಎಂದರು.

ವಿದ್ಯುತ್ ದರದ ವಿಚಾರಣೆಯ ಸಮಯದಲ್ಲಿ ಉದ್ಯಮದ ಮೇಲಿನ ವಿದ್ಯುತ್ ದರಗಳನ್ನು ಹೆಚ್ಚಿಸದೇ, ಕಡಿಮೆ ಮಾಡುವುದರಿಂದ ಹೆಚ್ಚಿನ ಆದಾಯ ಪಾವತಿಸುವ ಈ ಉತ್ಪಾದಕ ಕ್ಷೇತ್ರವನ್ನು ಉಳಿಸಿಕೊಳ್ಳಬಹುದು ಎಂದು ನಾವು ಕೆ.ಇ.ಆರ್.ಸಿ.ಗೆ ಈ ಹಿಂದೆ ಒತ್ತಾಯಿಸಿದ್ದೆವು. ವಿತರಣಾ ಕಂಪನಿಗಳ ಆದಾಯಕ್ಕೆ ಸಂಬಂಧಿಸಿದಂತೆ ತಮ್ಮ ಕಾರ್ಯಾಚರಣೆಯ ದಕ್ಷತೆ ಅಥವಾ ನಿರ್ವಹಣಾ ಅಭ್ಯಾಸಗಳ ಬಗ್ಗೆ ಹೆಚ್ಚಿನ ಗಮನ ಹರಿಸದೇ ವಾರ್ಷಿಕವಾಗಿ ದರ ಪರಿಷ್ಕರಣೆ ಮಾಡುವುದನ್ನು ಕೇವಲ ಪದ್ದತಿಯಾಗಿ ಮಾರ್ಪಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು, ಉದ್ಯಮದಲ್ಲಿ ಅತಿ ಸಣ್ಣ ಮತ್ತು ಸಣ್ಣ ಉದ್ಯಮಗಳ ಉಳಿವಿಗಾಗಿ ವಿದ್ಯತ್ ದರ ಹೆಚ್ಚಳದ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಕೆಇಆರ್‌ಸಿ ಮತ್ತು ಸರ್ಕಾರವನ್ನು ನಾವು ಒತ್ತಾಯಿಸುತ್ತೇವೆ. ಅದಲ್ಲದೇ ಬೆಳಗ್ಗೆ 6.00 ರಿಂದ 10.00 ಗಂಟೆಯವರೆಗೆ ಪೀಕ್/ಗರಿಷ್ಠ ಸಮಯದಲ್ಲಿನ ವಿದ್ಯುತ್ ಬಳಕೆಗಾಗಿ ಉದ್ಯಮದ ಮೇಲೆ ವಿಧಿಸುತ್ತಿದ್ದ ಒಂದು ರೂಪಾಯಿ/ಯುನಿಟ್ ದಂಡವನ್ನು ತೆಗೆದುಹಾಕುವ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ಎಂದು ಇದೇ ವೇಳೆ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.