ETV Bharat / state

ಆರ್ಥಿಕ ಬೆಳವಣಿಗೆಯಲ್ಲಿ ಎಂಎಸ್​ಎಂಇ ಉದ್ದಿಮೆಗಳ ಕೊಡುಗೆ ಅಪಾರ

ಈ ವರ್ಷ ಎಂಎಸ್ಎಂಇ - ಕ್ಲಸ್ಟರ್ ಅಭಿವೃದ್ಧಿ ಯೋಜನೆಯಡಿ ಒಟ್ಟು 12 ಕ್ಲಸ್ಟರ್‌ಗಳ ಅಭಿವೃದ್ಧಿ ಚಟುವಟಿಕೆಗಳನ್ನು ಪ್ರಾರಂಭಿಸಲಾಗಿದೆ. ಇದರಲ್ಲಿ ರಾಜ್ಯ ಸರ್ಕಾರ ತನ್ನ ಪಾಲಿನ ಒಟ್ಟು 10.70 ಕೋಟಿ ರೂ.ಗಳ ಸಹಾಯವನ್ನು ಬಿಡುಗಡೆ ಮಾಡಲು ಕ್ರಮವಹಿಸಿದೆ.

MSME enterprises Contribution in economic growth
ಆರ್ಥಿಕ ಬೆಳವಣಿಗೆಯಲ್ಲಿ ಎಂಎಸ್​ಎಂಇ ಉದ್ದಿಮೆಗಳ ಕೊಡುಗೆ ಅಪಾರ
author img

By

Published : Nov 3, 2022, 2:43 PM IST

ಬೆಂಗಳೂರು: ರಾಜ್ಯದ ಆರ್ಥಿಕ ಬೆಳವಣಿಗೆಯಲ್ಲಿ ಎಂ ಎಸ್‌ ಎಂ ಇ ಉದ್ದಿಮೆಗಳ ಪಾತ್ರ ಬಹಳ ಪ್ರಮುಖವಾಗಿದೆ. ದೇಶದ ಜಿಡಿಪಿಯಲ್ಲಿ ಎಂ ಎಸ್ಎಂ ಇ ವಲಯದ ಕೊಡುಗೆ ಶೇ. 40 ರಷ್ಟಿದೆ. ಇದರ ಜೊತೆಗೆ ಕೃಷಿ ವಲಯದ ನಂತರ ಉದ್ಯೋಗ ಸೃಜನೆಯಲ್ಲಿ ಎಂ ಎಸ್ಎಂ ಇ ವಲಯವು 2ನೇ ಸ್ಥಾನದಲ್ಲಿದೆ. ಕೈಗಾರಿಕಾ ಬೆಳವಣಿಗೆಯಲ್ಲಿ ದೇಶದಲ್ಲಿಯೇ ಕರ್ನಾಟಕ 5ನೇ ಸ್ಥಾನದಲ್ಲಿದೆ.

2022ರ ಸೆಪ್ಟೆಂಬರ್ ಅಂತ್ಯದವರೆಗೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯದ ವಿವಿಧ ಯೋಜನೆಗಳಿಗೆ ಒಟ್ಟು 55.64 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ 688 ಫಲಾನುಭವಿಗಳಿಗೆ 49.08 ಕೋಟಿ ರೂ. ಸಹಾಯವನ್ನು ನೀಡಲಾಗಿದೆ. ಕರಕುಶಲ ವಲಯದಲ್ಲಿ 1.25 ಕೋಟಿ ರೂ.ಗಳ ಆರ್ಥಿಕ ಸಹಾಯವನ್ನು ಒದಗಿಸಲಾಗಿದೆ.

ಖಾದಿ ವಲಯದಲ್ಲಿ 7.50 ಕೋಟಿ ರೂ.ಗಳನ್ನು ಮಾರುಕಟ್ಟೆ ಮತ್ತು ವೇತನ ಪ್ರೋತ್ಸಾಹಕ ಸಹಾಯಧನವಾಗಿ ನೀಡಲಾಗುತ್ತದೆ. ಅದೇ ರೀತಿ 90 ಕೋಟಿ ರೂ.ಗಳನ್ನು ವಿವಿಧ ಸರ್ಕಾರಿ ಮಂಡಳಿಗಳು ಮತ್ತು ನಿಗಮಗಳಿಗೆ ಅವುಗಳ ಆಡಳಿತ ಮತ್ತು ಇತರ ವೆಚ್ಚಗಳಿಗಾಗಿ ಸರ್ಕಾರ ಬಿಡುಗಡೆ ಮಾಡಿದೆ.

2022ರ ಸೆಪ್ಟೆಂಬರ್ ಅಂತ್ಯದವರೆಗೆ ಎಸ್‌ಸಿಪಿ ಅಡಿ 358 ಫಲಾನುಭವಿಗಳಿಗೆ 94.10 ಕೋಟಿ ರೂ. ಆರ್ಥಿಕ ನೆರವು ಮತ್ತು ಟಿಎಸ್​ಪಿ ಕಾರ್ಯಕ್ರಮದಡಿ 78 ಫಲಾನುಭವಿಗಳಿಗೆ 12.21 ಕೋಟಿ ರೂ. ಆರ್ಥಿಕ ನೆರವು ವೆಚ್ಚ ಮಾಡಲಾಗಿದೆ. ಈ ಯೋಜನೆಗಳ ಅಡಿ, ಸೈಟ್‌ಗಳಿಗೆ ಶೇ 75ರಷ್ಟು ಸಹಾಯಧನ, ಶೇ 60ರಷ್ಟು ಸಹಾಯಧನ, ವಿದ್ಯುತ್‌ ಸಹಾಯಧನ ಮತ್ತು ಸಾಲ ಮಂಜೂರಿ ಶುಲ್ಕ ಮರುಪಾವತಿಗಾಗಿ ಬಳಸಿಕೊಳ್ಳಲಾಗುತ್ತದೆ.

ಉದ್ಯೋಗಾವಕಾಶ ನಿರೀಕ್ಷೆ: ಜಿಲ್ಲಾ ಮಟ್ಟದ ಏಕ ಗವಾಕ್ಷಿ ಸಮಿತಿಗಳ ಮೂಲಕ, ಒಟ್ಟು 7788.83 ಕೋಟಿ ರೂ. ಯೋಜನಾ 1400 ಯೋಜನೆಗಳನ್ನು ಅನುಮೋದಿಸಲಾಗಿದೆ. ಈ ಮೂಲಕ 64341 ಉದ್ಯೋಗಾವಕಾಶಗಳನ್ನು ನಿರೀಕ್ಷಿಸಲಾಗಿದೆ. ಬೀದರ್‌ನಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ 50:50 ವೆಚ್ಚ ಆಧಾರದಲ್ಲಿ ಒಟ್ಟು ರೂ. 90 ಕೋಟಿಗಳ ವೆಚ್ಚದಲ್ಲಿ ಸೆಂಟ್ರಲ್ ಇನ್​ಸ್ಟಿಟ್ಯೂಟ್ ಆಫ್ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ ಹಾಗೂ ಟೆಕ್ನಾಲಜಿ (CIPET) ವತಿಯಿಂದ ಕೌಶಲ್ಯ ಮತ್ತು ತಾಂತ್ರಿಕ ನೆರವು ಕೇಂದ್ರ (CSTS) ಸ್ಥಾಪಿಸಲು ಸರ್ಕಾರದಿಂದ ಉಚಿತವಾಗಿ 10 ಎಕರೆ ಭೂಮಿಯನ್ನು ಬೀದರ್ ಜಿಲ್ಲೆಯಲ್ಲಿ ಗುರುತಿಸಿ ಒದಗಿಸಿದ್ದು, ಸದರಿ ಆಯವ್ಯಯ ಘೋಷಣೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದರಿಂದ ಕಲ್ಯಾಣ ಕರ್ನಾಟಕ ಭಾಗದ ಯುವಜನತೆಗೆ ಉದ್ಯೋಗವಕಾಶಗಳು ದೊರಕಲಿವೆ.

ರಾಜ್ಯದಲ್ಲಿ ಉತ್ಪಾದನಾ ವಲಯವನ್ನು ಆಕರ್ಷಿಸುವ ಉದ್ದೇಶದಿಂದ ಪೀಣ್ಯ ಕೈಗಾರಿಕಾ ಪ್ರದೇಶವನ್ನು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ (KSSIDC) ಸಂಸ್ಥೆಯ ಮೂಲಕ ಅಗತ್ಯ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಹಾಗೂ ಉನ್ನತೀಕರಣದ ಕಾಮಗಾರಿಗಳೊಂದಿಗೆ ಸಮಗ್ರವಾಗಿ ಅಭಿವೃದ್ಧಿಪಡಿಸುವ ಯೋಜನೆಗೆ 100 ಕೋಟಿಯನ್ನು (ನೂರು ಕೋಟಿ ರೂಪಾಯಿ) ರಾಜ್ಯ ಸರ್ಕಾರವು ಭರಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಜಿಮ್ 2022 ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಎಂಎಸ್ಎಂಇ ಮತ್ತು ಇತರೆ ವಲಯದ ಕೈಗಾರಿಕಾ ವಸ್ತು ಪ್ರದೇಶವನ್ನು ಆಯೋಜಿಸಲಾಗಿದೆ.

ಪ್ರಧಾನ ಮಂತ್ರಿಗಳ ಉದ್ಯೋಗ ಸೃಷ್ಟಿ ಯೋಜನೆಯಡಿಯಲ್ಲಿ (ಪಿಎಂ ಇ ಜಿ ಪಿ) ಒಟ್ಟು 2318 ಅಭ್ಯರ್ಥಿಗಳು ರಾಜ್ಯಾದ್ಯಂತ ವಿವಿಧ ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯಗಳನ್ನು ಪಡೆಯಲು ಮಂಜೂರು ನೀಡಲಾಗಿದ್ದು, ಇದಕ್ಕಾಗಿ 66.95 ಕೋಟಿ ವೆಚ್ಚ ಮಾಡಲಾಗಿದೆ. ಈ ವರ್ಷದಲ್ಲಿ ಎಂ ಎಸ್ಎಂಇ - ಕ್ಲಸ್ಟರ್ ಅಭಿವೃದ್ಧಿ ಯೋಜನೆಯಡಿ್ಲಿ ಒಟ್ಟು 12 ಕ್ಲಸ್ಟರ್‌ಗಳ ಅಭಿವೃದ್ಧಿ ಚಟುವಟಿಕೆಗಳನ್ನು ಪ್ರಾರಂಭಿಸಲಾಗಿದೆ.

ಇದರಲ್ಲಿ ರಾಜ್ಯ ಸರ್ಕಾರವು ತನ್ನ ಪಾಲಿನ ಒಟ್ಟು 10.70 ಕೋಟಿ ರೂ.ಗಳ ಸಹಾಯವನ್ನು ಬಿಡುಗಡೆ ಮಾಡಲು ಕ್ರಮವಹಿಸಿದ್ದು, ಮತ್ತು ರಾಜ್ಯ ಮತ್ತು ಎಸ್.ಪಿ.ವಿ ನಿಧಿಗಳ ಬಳಕೆಯ ನಂತರ ಮುಂದಿನ ವರ್ಷದಲ್ಲಿ ಕೇಂದ್ರ ಸರ್ಕಾರದ ವಂತಿಕೆ 8.88 ಕೋಟಿ ರೂ. ಯನ್ನು ಬಿಡುಗಡೆಗೆ ಮನವಿ ಮಾಡಲಾಗುವುದು ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎಂ.ಟಿ.ಬಿ. ನಾಗರಾಜ್ ಹೇಳಿದ್ದಾರೆ.

"ಕೈಗಾರಿಕಾ ಅದಾಲತ್‌", ಎಂಎಸ್‌ಎಂಇಗಳ ವ್ಯಾಜ್ಯಗಳನ್ನು ಪರಿಹರಿಸುವ ಸ್ಥಳೀಯವಾಗಿ ವಿಭಾಗವಾರು ಆಯೋಜಿಸಲಾದ ಕಾರ್ಯಕ್ರಮ, ಇದರಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿರುವ 29 ಇಲಾಖೆಗಳಿಗೆ ಸಂಬಂಧಿಸಿದ 500ಕ್ಕೂ ಹೆಚ್ಚು ಕೈಗಾರಿಕಾ ಪ್ರತಿನಿಧಿಗಳು ಭಾಗವಹಿಸಿ ಸೇರಿದ 233 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

ಲಘು ಉದ್ಯೋಗ ಭಾರತಿ-ಕರ್ನಾಟಕ ಸಂಸ್ಥೆಯು ಆಯೋಜಿಸಿರುವ ಇಂಡಿಯಾ ಮ್ಯಾನ್ಯುಫ್ಯಾಕ್ಚರಿಂಗ್ ಷೋ “ಎಂಎಸ್‌ಎಂಇ ಏರೋಸ್ಪೇಸ್ ಮತ್ತು ಡಿಫೆನ್ಸ್ ಎಕ್ಸ್ಪೋ" ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರದ ವತಿಯಿಂದ 2.00 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ: ಬೆಳಗ್ಗೆ 10:30ಕ್ಕೆ ಮೋದಿ ಭಾಷಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.