ETV Bharat / state

ಬಜರಂಗದಳ ಕರ್ನಾಟಕದ ಅಸ್ಮಿತೆ, ತಾಕತ್ತಿದ್ದರೆ ಬ್ಯಾನ್ ಮಾಡಿ ನೋಡಿ: ತೇಜಸ್ವಿ ಸೂರ್ಯ ಸವಾಲ್​ - ಈಟಿವಿ ಭಾರತ ಕನ್ನಡ

ಕಾಂಗ್ರೆಸ್​ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳ, ಪಿಎಫ್​ಐನಂತಹ ಸಂಘಟನೆಗಳನ್ನು ನಿಷೇಧಿಸುವುದಾಗಿ​ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ತೇಜಸ್ವಿ ಸೂರ್ಯ ತಾಕತ್ತಿದ್ದರೆ ಬಜರಂಗದಳವನ್ನು ಬ್ಯಾನ್​ ಮಾಡಿ ಎಂದು ಕಾಂಗ್ರೆಸ್​ಗೆ ಸವಾಲೆಸೆದಿದ್ದಾರೆ.

mp-tejaswi-surya-slams-congress-on-bajaranga-dal-ban
ಬಜರಂಗದಳ ಕರ್ನಾಟಕದ ಅಸ್ಮಿತೆ, ತಾಕತ್ತಿದ್ದರೆ ಬ್ಯಾನ್ ಮಾಡಿ ನೋಡಿ: ತೇಜಸ್ವಿ ಸೂರ್ಯ ಸವಾಲು
author img

By

Published : May 2, 2023, 7:30 PM IST

ಬಜರಂಗದಳ ಕರ್ನಾಟಕದ ಅಸ್ಮಿತೆ, ತಾಕತ್ತಿದ್ದರೆ ಬ್ಯಾನ್ ಮಾಡಿ ನೋಡಿ: ತೇಜಸ್ವಿ ಸೂರ್ಯ ಸವಾಲು

ಬೆಂಗಳೂರು : ಬಜರಂಗದಳ ನಿಷೇಧಿಸುವ ಭರವಸೆ ನೀಡುವ ಮೂಲಕ ಕರ್ನಾಟಕದ ಅಸ್ಮಿತೆಯಾಗಿರುವ ಹನುಮ ಭಕ್ತರನ್ನು ಪ್ರಶ್ನೆ ಮಾಡಿ ಗೊಂದಲ ಸೃಷ್ಟಿಸಲು ಕಾಂಗ್ರೆಸ್ ನಾಯಕರು ಹೊರಟಿದ್ದಾರೆ. ನಿಮಗೆ ತಾಕತ್ತು ಇದ್ದರೆ ಬಜರಂಗದಳ ಬ್ಯಾನ್ ಮಾಡಿ ನೋಡೋಣ ಎಂದು ಕಾಂಗ್ರೆಸ್ ನಾಯಕರಿಗೆ ಸಂಸದ ಹಾಗು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಸವಾಲೆಸೆದಿದ್ದಾರೆ.

ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​​ ಭಾರತ ವಿರೋಧಿ, ಹಿಂದೂ ವಿರೋಧಿ ಹೇಳಿಕೆ ಕೊಟ್ಟುಕೊಂಡೇ ಬಂದಿದೆ. ಕೇಂದ್ರ ಸರ್ಕಾರ ಪಿಎಫ್‌ಐ ಬ್ಯಾನ್ ಮಾಡಿದ್ದನ್ನು ಕಾಂಗ್ರೆಸ್‌ಗೆ ತಡೆದುಕೊಳ್ಳಲು ಆಗುತ್ತಿಲ್ಲ. ಅವರ ಪ್ರಚೋದನೆ ಮೇಲೆಯೇ ಬಜರಂಗದಳ ಬ್ಯಾನ್ ಮಾಡುವ ಬಗ್ಗೆ ಮಾತನಾಡಿದ್ದಾರೆ. ಬಜರಂಗದಳ ಭಯೋತ್ಪಾದಕ ಸಂಘಟನೆ ಅಲ್ಲ. ಹಿಂದೂಗಳನ್ನು ಒಗ್ಗೂಡಿಸುವ ಸಂಘಟನೆ‌. ಕರ್ನಾಟಕದ ಜನತೆ ಹನುಮಂತನ ಭಕ್ತರು. ಬಜರಂಗದಳ ಬ್ಯಾನ್ ಮಾಡುವ ಬಗ್ಗೆ ಹೇಳಿ ಕಾಂಗ್ರೆಸ್​ ಕರ್ನಾಟಕದ ಜನತೆಗೆ ಅವಮಾನ ಮಾಡಿದೆ ಎಂದು ಟೀಕಿಸಿದರು.

ಜಿನ್ನಾರ ಮುಸ್ಲಿಂ ಲೀಗೇ ಇಂದಿನ ಕಾಂಗ್ರೆಸ್ ಪಕ್ಷ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸಾವಿರಕ್ಕೂ ಹೆಚ್ಚು ಕೇಸ್ ವಾಪಸ್ ಪಡೆದಿದ್ದರು. ಎಸ್ಡಿಪಿಐ ಅವರೇ ಕಾಂಗ್ರೆಸ್ ನಮ್ಮ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ಹೇಳಿದ್ದಾರೆ. ಕರ್ನಾಟಕದ ಅಸ್ಮಿತೆ, ಹನುಮ ಭಕ್ತರ ಪ್ರಶ್ನೆ ಮಾಡಿ ಗೊಂದಲ ಸೃಷ್ಟಿಸಲು ಹೊರಟಿದ್ದಾರೆ. ನಿಮಗೆ ಸವಾಲು ಹಾಕ್ತೀನಿ, ನಿಮಗೆ ತಾಕತ್ ಇದ್ದರೆ ಬಜರಂಗದಳ ಬ್ಯಾನ್ ಮಾಡಿ. ಮೇ 10 ರ ಚುನಾವಣೆಯಲ್ಲಿ ಜನ ನಿಮಗೆ ಉತ್ತರ ಕೊಡುತ್ತಾರೆ ಎಂದು ಹೇಳಿದ್ರು.

ಲಂಕಾದಲ್ಲಿ ರಾವಣನಿಗಾದ ಗತಿ ಕಾಂಗ್ರೆಸ್ ಗೆ ಬರಲಿದೆ : ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ವೈಚಾರಿಕವಾಗಿ ದಿವಾಳಿಯಾಗಿರೋ ಪಕ್ಷ. ಅವರ ಮ್ಯಾನಿಫೆಸ್ಟೋ ನಲ್ಲಿ ಪಿಎಫ್‌ಐ, ಬಜರಂಗದಳ ಬ್ಯಾನ್ ಮಾಡುತ್ತೇವೆ ಎಂದಿದ್ದಾರೆ. ಬಜರಂಗದಳ ಬ್ಯಾನ್​ ಮಾಡುವ ಕಾಂಗ್ರೆಸ್ ಪಕ್ಷವನ್ನು ಕರ್ನಾಟಕದಿಂದ ಸಂಪೂರ್ಣವಾಗಿ ಹೊರಹಾಕುವ ಕೆಲಸವನ್ನು ಜನರು ಮಾಡಲಿದ್ದಾರೆ. ಬಜರಂಗದಳದವರು ಹನುಮಾನ್ ಭಕ್ತರು. ಅಂದು ಹನುಮಂತ ಲಂಕಾದಲ್ಲಿ ರಾವಣನನ್ನು ಬೇರು ಸಹಿತ ಕಿತ್ತಾಕಿದ್ದ. ಅದೇ ರೀತಿ ಕಾಂಗ್ರೆಸ್‌ನ್ನು ಬೇರು ಸಹಿತ ಕೀಳಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ್ ತಿರುಗೇಟು ನೀಡಿದರು.

ರಾಜ್ಯದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹಲವು ವರ್ಷಗಳ ಅಧ್ಯಯನದ ನಂತರ ಜಾರಿಗೆ ತರಲಾಗಿದೆ. ಕಾಂಗ್ರೆಸ್​ನವರೇ ಹೇಳುವಂತೆ ಎಸಿ ರೂಮಲ್ಲಿ ಕುಳಿತು ಎನ್ಇಪಿ ಮಾಡಿಲ್ಲ. 36 ವರ್ಷದ ಸುದೀರ್ಘ ಚರ್ಚೆ ಬಳಿಕ ಇದನ್ನು ಜಾರಿಗೆ ತರಲಾಗಿದೆ‌. ಯುವಕರಿಗೆ ಜ್ಞಾನ ನೀಡಬೇಕು. ಜ್ಞಾನ ಆಧಾರಿತ ಶಿಕ್ಷಣ ವ್ಯವಸ್ಥೆ ತರಲು ನಿರ್ಧರಿಸಲಾಗಿದೆ ಎಂದರು.

ಕಾಂಗ್ರೆಸ್‌ನ ನಾಯಕರಿಗೆ, ಡಿಕೆ ಶಿವಕುಮಾರ್ ಅವರಿಗೆ ಇದರ ಪರಿಜ್ಞಾನ ಇದೆಯೋ ಇಲ್ಲವೋ ಗೊತ್ತಿಲ್ಲ. ಬಜರಂಗದಳ ಬ್ಯಾನ್ ಮಾಡುವ ಹಾಗೂ ಎನ್ಇಪಿ ರದ್ದು ಮಾಡುವ ಕಾಂಗ್ರೆಸ್ ಪಕ್ಷಕ್ಕೆ ಜನ ಬುದ್ಧಿ ಕಲಿಸುತ್ತಾರೆ. ಕಾಂಗ್ರೆಸ್ ಪಕ್ಷವನ್ನು ಈ ಚುನಾವಣೆಯಲ್ಲೇ ಬುಡ ಸಮೇತ ಕಿತ್ತೊಗೆಯುವ ಕೆಲಸ ಮಾಡಬೇಕಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಸಚಿವ ಅಶ್ವತ್ಥ ನಾರಾಯಣ್ ಕಿಡಿಕಾರಿದರು.

ಬಜರಂಗದಳಕ್ಕೂ ಪಿಎಫ್ಐಗೆ ಹೋಲಿಕೆ ಸಲ್ಲ: ಕಾಂಗ್ರೆಸ್​​ನವರು ಪಿಎಫ್ಐ ಬಗ್ಗೆ ತಿಳಿದುಕೊಳ್ಳದೆ, ಇದು ಉಗ್ರರ ಸ್ಲೀಪರ್ ಸೆಲ್ ಅನ್ನುವುದನ್ನು ಅರ್ಥ ಮಾಡಿಕೊಳ್ಳದೆ ಪಿಎಫ್ಐ ಮತ್ತು ಬಜರಂಗದಳವನ್ನು ಹೋಲಿಕೆ ಮಾಡಿದ್ದಾರೆ. ಕಾಂಗ್ರೆಸ್​ನವರು ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧದ ಭರವಸೆ ನೀಡಿದ್ದಾರೆ. ಇದನ್ನು ಅತ್ಯುಗ್ರವಾಗಿ ವಿರೋಧಿಸುತ್ತೇನೆ ಎಂದು ರಾಜ್ಯ ಬಿಜೆಪಿ ಚುನಾವಣಾ ಸಹ ಪ್ರಭಾರಿ ಅಣ್ಣಾಮಲೈ ತಿಳಿಸಿದ್ದಾರೆ.

ನಾವೆಲ್ಲರೂ ಕೂಡ ಕಾಂಗ್ರೆಸ್ ಮ್ಯಾನಿಫೆಸ್ಟ್ ನೋಡಿದ್ದೇವೆ. ಅದು ಖಾಲಿ ಡಬ್ಬದ ರೀತಿ, ಬಹಳ ಶಬ್ದ ಬರುತ್ತದೆ. ಅವರ ಪ್ರಣಾಳಿಕೆ ಹಳೆಯ ಕಾಲದ ರೀತಿಯಲ್ಲಿದೆ. ದೇಶ ಹೇಗೆ ಹೋಗುತ್ತಿದೆ ಎಂಬುದು ಅವರಿಗೆ ಗೊತ್ತಿಲ್ಲ. ಬಜರಂಗದಳದ ಬಗ್ಗೆ ಹೇಳಿದ್ದೀರಾ? ಮೊದಲನೆಯದಾಗಿ ಅವರು ಅಧಿಕಾರಕ್ಕೆ ಬರಲ್ಲ. ಪಿಎಫ್‌ಐ ಏನು, ಅದರ ಉದ್ದೇಶ ಏನು ಅನ್ನೋದನ್ನು ಮೊದಲು ತಿಳಿದುಕೊಳ್ಳಿ. ಅವರ ಮೇಲೆ ಯುಎಪಿಎ ಕೇಸ್ ಇದ್ದು, ಎನ್.ಐ.ಎ ಪ್ರಕರಣದ ತನಿಖೆ ನಡೆಸುತ್ತಿದೆ. ಮಂಗಳೂರು, ದಕ್ಷಿಣ ಕನ್ನಡ, ಕೇರಳ, ತಮಿಳುನಾಡಿನಲ್ಲಿ ಇವರು ಹೆಚ್ಚು ಸಕ್ರಿಯವಾಗಿದ್ದರು. ಕೇರಳ, ಕರ್ನಾಟಕದಲ್ಲಿ ಒಂದೇ ಮಾದರಿ ಹತ್ಯೆ ಮಾಡಲಾಗಿದೆ. ಹಾಗಾಗಿ ಇದನ್ನು ಬ್ಯಾನ್ ಮಾಡಲಾಗಿದೆ ಎಂದರು.

ಕಾಂಗ್ರೆಸ್​​ನವರು ಪಿಎಫ್‌ಐಯನ್ನು ಬಜರಂಗದಳಕ್ಕೆ ಹೋಲಿಕೆ ಮಾಡಿದ್ದಾರೆ. ಕಾಂಗ್ರೆಸ್​ಗೆ 30ರಿಂದ 40 ಸ್ಥಾನ ಇತ್ತು. ಇನ್ಮುಂದೆ ಅಷ್ಟೂ ಬರಲ್ಲ. ಮೇ 10ರಂದು ಜನರು ಕಾಂಗ್ರೆಸ್​ಗೆ ಬುದ್ಧಿ ಕಲಿಸುತ್ತಾರೆ ಎಂದು ಅಣ್ಣಾಮಲೈ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : ಅಂದು ಶ್ರೀರಾಮನನ್ನು ಬಂಧಿಸಿಟ್ಟಿದ್ದರು, ಈಗ ಬಜರಂಗದಳ ಕಾರ್ಯಕರ್ತರ ಬಂಧನಕ್ಕೆ ಕಾಂಗ್ರೆಸ್​ ಸಂಕಲ್ಪ ಮಾಡಿದೆ : ಮೋದಿ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.