ETV Bharat / state

ಪುನೀತ್​​ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ರಾಜೀವ್ ಚಂದ್ರಶೇಖರ್ - ಪುನೀತ್ ರಾಜ್‍ಕುಮಾರ್

ಸದಾಶಿವನಗರದಲ್ಲಿರುವ ಪುನೀತ್​​ ಮನೆಗೆ ಭೇಟಿ ನೀಡಿದ ಕೇಂದ್ರದ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತಾ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ನಟರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ಪತ್ನಿ ಅಶ್ವಿನಿಯವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

ಪುನೀತ್​​ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಸಂಸದ ರಾಜೀವ್ ಚಂದ್ರಶೇಖರ್

author img

By

Published : Nov 5, 2021, 12:18 PM IST

Updated : Nov 5, 2021, 12:36 PM IST

ಬೆಂಗಳೂರು : ಪುನೀತ್ ರಾಜ್‍ಕುಮಾರ್ ಅಕಾಲಿಕ ನಿಧನದ ಹಿನ್ನೆಲೆ ಅಪ್ಪು ಮನೆಗೆ ಇಂದು ಕೇಂದ್ರದ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತಾ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಪುನೀತ್​​ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ರಾಜೀವ್ ಚಂದ್ರಶೇಖರ್

ಸದಾಶಿವನಗರದಲ್ಲಿರುವ ಪುನೀತ್​​ ಮನೆಗೆ ಭೇಟಿ ನೀಡಿದ ರಾಜೀವ್ ಚಂದ್ರಶೇಖರ್, ನಟ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ಪತ್ನಿ ಅಶ್ವಿನಿ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

ಈ ವೇಳೆ ಮಾತನಾಡಿದ ಚಂದ್ರಶೇಖರ್, ಪುನೀತ್​ ಕೌಶಲ್ಯ ವೃದ್ಧಿ ವಿಚಾರದಲ್ಲಿ ತೊಡಗಿಸಿಕೊಂಡಿದ್ದರು, ತಮ್ಮ ಸಂಸ್ಥೆ ಮೂಲಕ ಬಡವರು, ದೀನ ದಲಿತರಿಗೆ ನೆರವಾಗುತ್ತಿದ್ದರು ಪುನೀತ್. ​ಅವರ ಈ ಸ್ಪೂರ್ತಿದಾಯಕ ಕೇಲಸಗಳು ಮುಂದುವರೆಯಬೇಕು.

ಪುನೀತ್​ ಹೆಸರಲ್ಲಿ ಏನಾದರು ಮಾಡುವುದ್ದಿದ್ದರೆ ನಮ್ಮ ಇಲಾಖೆಯಿಂದ ಸಹಾಯ ಮಾಡುತ್ತೇವೆ. ಅವರ​ ಕುಟುಂಬಸ್ಥರೊಂದಿಗೆ ನಾವು ಸದಾ ಇರುತ್ತೇವೆ ಎಂದು ರಾಜೀವ್​ ಚಂದ್ರಶೇಖರ್​ ಹೇಳಿದರು.

ಪುನೀತ್ ರಾಜ್ ಕುಮಾರ್ ಕರ್ನಾಟಕದ ಮನೆ ಮಗನಾಗಿದ್ದರು, ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದೇನೆ. ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿ ನೀಡಲಿ ಎಂದರು.

Last Updated : Nov 5, 2021, 12:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.