ಬೆಂಗಳೂರು: ಪ್ರತಾಪ್ ಸಿಂಹ ತಮ್ಮ ಟ್ವಿಟರ್ ಹಾಗೂ ಫೇಸ್ಬುಕ್ ಮೂಲಕ ಪ್ರಕಾಶ್ ರೈಗೆ ಬಹಿರಂಗ ಕ್ಷಮೆಯಾಚಿಸಿದ್ದಾರೆ. ಇನ್ನು ಪ್ರತಾಪ್ ಸಿಂಹ ಕ್ಷಮೆಯಾಚನೆಗೆ ಸ್ಪಂದಿಸಿರುವ ಪ್ರಕಾಶ್ ರೈ, ನಾವಿಬ್ಬರು ಉನ್ನತ ಸ್ಥಾನದಲ್ಲಿದ್ದು, ಈ ರೀತಿ ಮಾಡುವುದು ತಪ್ಪು. ನಮ್ಮ ತತ್ವ, ಸಿದ್ಧಾಂತಗಳಲ್ಲಿ ತುಂಬಾ ವ್ಯತ್ಯಾಸ ಇರಬಹುದು. ಆದರೆ, ಅದು ವೈಯುಕ್ತಿಕ ಹಾಗೂ ಇನ್ನಿತರ ವಿಷಯಕ್ಕೆ ವೇದಿಕೆ ಆಗಬಾರದು. ಸಾಮಾಜಿಕ ಜಾಲತಾಣವನ್ನು ಈ ರೀತಿ ಉಪಯೋಗಿಸಿಕೊಳ್ಳಬಾರದು ಪ್ರಕಾಶ್ ರೈ ಮರು ಟ್ವೀಟ್ ಮಾಡಿದ್ದಾರೆ.
2017ರ ಅಕ್ಟೋಬರ್ನಲ್ಲಿ ಪ್ರತಾಪ್ ಸಿಂಹ ತಮ್ಮ ಟ್ವಿಟರ್ ಹಾಗೂ ಫೇಸ್ಬುಕ್ನಲ್ಲಿ ನಟ ಪ್ರಕಾಶ್ ರೈ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದರು. ಈ ಕಾರಣದಿಂದ ಪ್ರತಾಪ್ ಸಿಂಹ ವಿರುದ್ಧ ಪ್ರಕಾಶ್ ರೈ ₹1 ಮಾನನಷ್ಟ ಮೊಕದ್ದಮೆಯನ್ನ ಮೈಸೂರಿನ ನ್ಯಾಯಲಯದಲ್ಲಿ ದಾಖಲಿಸಿದ್ದರು. ನಂತರ ಈ ಪ್ರಕರಣ ಸಂಬಂಧ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚರಾಣೆ ನಡೆಯುತ್ತಿತ್ತು. ಹಲವಾರು ಬಾರಿ ಪ್ರತಾಪ್ ಸಿಂಹ ವಿಚಾರಣೆಗೆ ಹಾಜರಾಗಿದ್ದರು. ಈಗ ಕ್ಷಮೆಯಾಚನೆ ಮಾಡಿದ್ದಾರೆ.